ಮಳೆಗಾಲದಲ್ಲಿಯೇ ರಣಬಿಸಿಲಿನ ಉಗ್ರಪ್ರತಾಪ
ಜೀವನಾಡಿ ಆಲಮಟ್ಟಿ ಡ್ಯಾಂನಲ್ಲಿ ನೀರಿನ ಅಭಾವ
ವಿದ್ಯುತ್ ಉತ್ಪಾದನಾ ಕೇಂದ್ರದ ಮೇಲೆ ಪರಿಣಾಮ
ಜೂನ್ನಿಂದ ಸೆಪ್ಟೆಂಬರ್ ಮಳೆಗಾಲದ ಅವಧಿ. ನಾಲ್ಕು ತಿಂಗಳು ಸಾಕಾಗುವಷ್ಟು ಮಳೆ ಸುರಿದು ಜಲಪಾತ್ರೆ ತುಳುಕಬೇಕಿತ್ತು. ಆದ್ರೆ, ಈ ಬಾರಿ ಅದ್ಯಾವುದು ಆಗಲಿಲ್ಲ. ಜಲಾಶಯಗಳು ಖಾಲಿ ಖಾಲಿ ಆಗಿವೆ. ಬಿತ್ತಿದ ಬೀಜ ಮೊಳಕೆ ಒಡೆದಿಲ್ಲ. ಡ್ಯಾಂನಿಂದ ಹರಿಯಬೇಕಿದ್ದ ನೀರು ಹರಿಯದೇ ರೈತರು ಕಂಗಾಲಾಗಿದ್ದಾರೆ. ಇನ್ನೊಂದ್ಕಡೆ, ರಾಜ್ಯದಲ್ಲಿ ಈಗಲೇ ಲೋಡ್ ಶೆಡ್ಡಿಂಗ್ ಶುರುವಾಗಿದ್ದು, ಬೇಸಿಗೆ ವರೆಗೆ ಹೇಗೆ ಅನ್ನೋ ಪ್ರಶ್ನೆ ಶುರುವಾಗಿದೆ. ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿ ಆಗಿಲ್ಲ. ಜಲಪಾತ್ರೆಗಳಿಗೆ ಈ ಕಾರಣದಿಂದ ಬಾಗಿನವೂ ಅರ್ಪಣೆ ಆಗಲಿಲ್ಲ. ದಶಕದ ಬಳಿ ರಾಜ್ಯದಲ್ಲಿ ಈ ಬರದಾಟದಿಂದ ಜನರನ್ನ ಮತ್ತೊಮ್ಮೆ ಪ್ರಾಣ ಸಂಕಟಕ್ಕೆ ಕೆಡವಿದೆ.
ಮಳೆಯಿಲ್ಲದ ಮಳೆಗಾಲದಲ್ಲಿ ಶುರುವಾಯ್ತು ರಣಬಿಸಿಲು!
ರಾಜ್ಯದಲ್ಲಿ ಬರ ವಾತಾವರಣ, ವಿದ್ಯುತ್ ಮೇಲೆ ಪರಿಣಾಮ
ಮಾನ್ಸೂನ್ ಮೊಂಡಾಟ ರಾಜ್ಯದಲ್ಲಿ ಬರಗಾಲದ ಶರಾ ಬರೆದಿದೆ. ಜಲಾಶಯಗಳು ಖಾಲಿ ಆಗಿದ್ದು, ವಿದ್ಯುತ್ ಸ್ಥಾವರಕ್ಕೆ ನೀರು ಸಿಕ್ತಿಲ್ಲ. ವಿದ್ಯುತ್ ಉತ್ಪಾದನಾ ಕೇಂದ್ರದ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಮಳೆಯಿಲ್ಲದ ಮಳೆಗಾಲದ ಈ ಹೊತ್ತಲೇ ಕರೆಂಟ್ ಶಾಕ್ ಶುರುವಾಗಿದೆ. ಕಲ್ಲಿದ್ದಲು ಅಭಾವದಿಂದ ಈಗ ಅನಿಯಮಿತ ಲೋಡ್ ಶೆಡ್ಡಿಂಗ್ ಕೂಡ ಜಾರಿ ಆಗಿದೆ. ಸದ್ಯ ಬೇಸಿಗೆ ವಾತಾವರಣವೇ ಸೃಷ್ಟಿಯಾಗಿದ್ದು, ಕೃಷಿ ಪಂಪ್ ಸೆಟ್ಗಳ ಬಳಕೆ ಜಾಸ್ತಿ ಆಗಿದೆ. ಇತ್ತ, ಅರಸೀಕೆರೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯದಲ್ಲಿನ ಲೋಡ್ ಶೆಡ್ಡಿಂಗ್ ಜಾರಿಯನ್ನ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ರಾಜ್ಯದಲ್ಲಿ 30-40ರಷ್ಟು ಮುಂಗಾರು ಮಳೆ ಕೊರತೆ ಇದೆ. ನಮಗೆ ಹೈಡ್ರೋ ಪವರ್ ಉತ್ಪಾದನೆ ಕಡಿಮೆ ಆಗಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಆಗ್ತಿದೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಉ.ಕರ್ನಾಟಕ ಭಾಗದಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ
ಜೀವನಾಡಿ ಆಲಮಟ್ಟಿ ಡ್ಯಾಂನಲ್ಲಿ ಇಳಿಕೆಯಾದ ನೀರಿನ ಮಟ್ಟ
ಈ ಬಾರಿ ಕೃಷ್ಣಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲೂ ಸರಿಯಾದ ಮಳೆ ಆಗಿಲ್ಲ. ಇದ್ರಿಂದ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸಹ ಭರ್ತಿ ಆಗಿಲ್ಲ. ಆಲಮಟ್ಟಿ ಜಲಾಶಯಕ್ಕೆ ಒಳಹರಿವೇ ಕಾಣೆ ಆಗಿದೆ. ಸದ್ಯ ಜಲಾಶಯದಲ್ಲಿ 122.485 ಟಿಎಂಸಿ ನೀರಿದ್ದು, ಕಾಲುವೆಗೆ ನೀರು ಹರಿಸೋದನ್ನ ನಿಲ್ಲಿಸಲಾಗಿದೆ. ಇತ್ತ, ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಕೃಷ್ಣಾ ತೀರದ ಜನರನ್ನ ಮರೆತ್ರಾ ಅನ್ನೋ ಆರೋಪ ಕೇಳಿ ಬರ್ತಿದೆ.
ಬೆಳಗಾವಿ ಜಿಲ್ಲೆಯಲ್ಲೂ ಕೈಕೊಟ್ಟ ಮಳೆ, ಕಮರಿದ ಬೆಳೆ
ಬರಗಾಲ ಘೋಷಿಸಲು ಚಿಕ್ಕೋಡಿಯ ರೈತರು ಆಗ್ರಹ
ಇತ್ತ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದಲ್ಲೂ ಈ ಬಾರಿ ಹೇಳಿಕೊಳ್ಳುವಷ್ಟು ಮಳೆ ಆಗಿಲ್ಲ. ಬೆಳೆದ ಬೆಳೆ ಒಣಗುತ್ತಿವೆ. ದನ ಕರುಗಳಿಗೆ ಮೇವಿಲ್ಲ. ಸರ್ಕಾರ ಕೂಡಲೇ ಗೋಶಾಲೆ ಆರಂಭಿಸಬೇಕು. ಅಲ್ಲದೇ ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕು ಅಂತ ಅಂತ ಗಡಿ ಭಾಗದ ರೈತರು ಒತ್ತಾಯಿಸಿದ್ದಾರೆ. ಇದೇ ವೇಳೆ, ಕಳೆದ ಹಲವು ವರ್ಷಗಳಿಂದ ಪೂರ್ಣಗೊಳ್ಳದ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ಕೂಗು ಕೇಳಿ ಬಂದಿದೆ. ಒಟ್ಟಾರೆ, ರಾಜ್ಯದಲ್ಲಿ ಮಳೆಯ ಕೊರತೆಯಿಂದ ವರುಣ ಬರಕ್ಕೆ ಆಹ್ವಾನ ಕೊಟ್ಟಿದ್ದಾನೆ. ಆದ್ರೆ ಸರ್ಕಾರ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ತಿಲ್ಲ. ಕೇಂದ್ರದ ಮಾನದಂಡದತ್ತ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡ್ತಿದೆ ಅಂತ ರೈತರು ಆರೋಪಿಸ್ತಿದ್ದಾರೆ. ಆಗಸ್ಟ್ ಮುಗಿದು ಸೆಪ್ಟೆಂಬರ್ಗೆ ಕಾಲಿಡುವ ಹೊತ್ತಲ್ಲಾದ್ರೂ ರಾಜ್ಯ ಸರ್ಕಾರ, ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ