newsfirstkannada.com

133 ತಾಲೂಕುಗಳಲ್ಲಿ ಮತ್ತೆ ಬೆಳೆ ಸಮೀಕ್ಷೆ.. ಸಂಪುಟ ಉಪಸಮಿತಿ ಸಭೆಯಲ್ಲಿ ಏನೇನಾಯಿತು ಗೊತ್ತಾ?

Share :

05-09-2023

    ಅಲ್ಪ-ಸ್ವಲ್ಪ ಬಿದ್ದ ಮಳೆ ಹನಿಗೆ ಬೀಜಗಳು ಮೊಳಕೆಯೊಡೆದು ಮಣ್ಣು ಪಾಲು

    ಕೇಂದ್ರದ ಪ್ರಕಾರ ರಾಜ್ಯದ 113 ತಾಲೂಕಗಳ ಪೈಕಿ 62 ತಾಲೂಕುಗಳಲ್ಲಿ ಬರ

    ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಶೇಕಡಾ 26ರಷ್ಟು ಮಳೆ ಕೊರತೆಯಾಗಿದೆ

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದ್ದು ಹಲವು ತಾಲೂಕುಗಳಲ್ಲಿ ಬಿತ್ತನೆ ಪೂರ್ಣವಾಗಿ ಆಗಿಲ್ಲ. ಹೀಗಾಗಿ ಸರ್ಕಾರ ನಿನ್ನೆ ಮಹತ್ವದ ಘೋಷಣೆಗೆ ಮಾಡಬಹುದೆಂದು ರೈತರು ಕಾಯುತ್ತಿದ್ದರು. ಆದ್ರೆ, ಸಂಪುಟ ಉಪಸಮಿತಿ ಮತ್ತೊಮ್ಮೆ ಬೆಳೆ ಸಮೀಕ್ಷೆ ನಡೆಸಿ, ಬರ ಪೀಡಿತ ತಾಲೂಕು ಘೋಷಿಸಲು ತೀರ್ಮಾನ ಮಾಡಿದೆ.

133 ತಾಲೂಕಿನಲ್ಲಿ ಮತ್ತೆ ಬೆಳೆ ಸರ್ವೇಗೆ ತೀರ್ಮಾನ

ಮುಂಗಾರಿನ ಕಣ್ಣಾಮುಚ್ಚಾಲೆಗೆ ಕರುನಾಡು ಕಂಗಾಲಾಗಿದೆ. ಮಳೆಯಿಲ್ಲದ ಮಳೆಗಾಲದ ಅವಧಿ ಬೇಸಿಗೆಯ ಛಾಯೆ ಆವರಿಸಿದೆ. ಅಲ್ಪ-ಸ್ವಲ್ಪ ಬಿದ್ದ ಮಳೆ ಹನಿಗೆ ಬೀಜಗಳು ಮೊಳಕೆಯೊಡೆದು ಮತ್ತೆ ಮಣ್ಣು ಪಾಲಾಗಿವೆ. ಮಳೆ-ಬೆಳೆ ಇಲ್ಲದೇ ಕಂಗಾಲಾದ ರಾಜ್ಯದ ಅನ್ನದಾತರು, ನಮ್ಮ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡುವಂತೆ ಒತ್ತಾಯಿಸಿಸುತ್ತಿದ್ದಾರೆ. ನಿನ್ನೆಯ ಸಂಪುಟ ಉಪ ಸಮಿತಿಯಲ್ಲಿ ಬರ ಪೀಡಿತ ತಾಲೂಕುಗಳ ಮೊದಲ ಪಟ್ಟಿ ಘೋಷಣೆ ಆಗಬಹುದೆಂದು ರೈತರು ನಿರೀಕ್ಷೆ ಇಟ್ಟುಕೊಂಡಿದ್ದರು.

ಆದ್ರೆ, ರೈತರ ನಿರೀಕ್ಷೆ ಹುಸಿಯಾಗಿದ್ದು, ಸದ್ಯಕ್ಕೆ ಬರ ಪೀಡಿತ ತಾಲೂಕು ಘೋಷಿಸದಿರಲು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಬರ ಪೀಡಿತ ತಾಲೂಕುಗಳ ಪಟ್ಟಿ ಘೋಷಣೆ ಸಂಬಂಧ ಸಚಿವ ಸಂಪುಟ ಉಪಸಮಿತಿಯ ಮಹತ್ವದ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ನಿಯಮದಂತೆ 113 ತಾಲೂಕಗಳ ಪೈಕಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ.

ಆದರೆ ಜಂಟಿ ಸಮೀಕ್ಷೆಯ ನಂತರ 51 ತಾಲೂಕುಗಳಲ್ಲಿ ಬೆಳೆ ಪರಿಸ್ಥಿತಿ ಕುಸಿದಿರುವ ಹಿನ್ನೆಲೆ ಮೊತ್ತೊಮ್ಮೆ ಜಂಟಿ ಸಮೀಕ್ಷೆ ಮಾಡಲು ನಿರ್ಧಾರಿಸಲಾಗಿದೆ. ಈ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ 26ರಷ್ಟು ಮಳೆ ಕೊರತೆಯಾಗಿದೆ. 29 ಜಿಲ್ಲೆಯ 113 ತಾಲೂಕಿನಲ್ಲಿ 1,519 ಹಳ್ಳಿಗಳ 13,500 ಹೆಕ್ಟೇರ್​ನಲ್ಲಿ ಬೆಳೆ ಸರ್ವೆ ನಡೆಸಲಾಗಿದೆ. ಅದರಲ್ಲಿ 9,500 ಹೆಕ್ಟೇರ್ ಪ್ರದೇಶ ತೀವ್ರ ಬೆಳೆ ಹಾನಿಯಾಗಿದೆ. ಕೇಂದ್ರದ ಮಾನದಂಡದ ಪ್ರಕಾರ 62 ತಾಲೂಕಿನಲ್ಲಿ ಬರ ಇದೆ. ಇನ್ನು ರಾಜ್ಯದ 49 ತಾಲೂಕಿನಲ್ಲಿ ಸಾಧಾರಣವಾದ ಬರ ಇದೆ. 62 ತಾಲ್ಲೂಕಿನಲ್ಲಿ 50% ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ.

ಸದ್ಯ 62 ತಾಲೂಕನ್ನು ಬರಪೀಡಿತ ಎಂದು ಘೋಷಿಸಬಹುದು. ಆದ್ರೆ ಇದರಿಂದ ರೈತರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ 133 ತಾಲೂಕಿನಲ್ಲಿ ಮತ್ತೆ ಬೆಳೆ ಸಮೀಕ್ಷೆ ನಡೆಸಲು ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ವರದಿ ಬಂದ ಬಳಿಕ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಿ ಬರ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ಪಟ್ಟಿ ಘೋಷಣೆ ಬಳಿಕ ಕೇಂದ್ರದ ನೆರವಿಗಾಗಿ ಮನವಿ ಸಲ್ಲಿಸಲಾಗುವುದು. ಮತ್ತು ಬರ ಪೀಡಿತ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಧಾನಿ ಭೇಟಿಯಾಗಲು ಸಂಪುಟ ಉಪಸಮಿತಿ ತೀರ್ಮಾನ

ರಾಜ್ಯದಲ್ಲಿ ಮಳೆ ಅಭಾವದಿಂದ ಬರ ಪರಿಸ್ಥಿತಿ ಇದ್ದರೂ ಏಕಾಏಕಿ ಘೋಷಣೆ ಮಾಡಲು ಆಗೋದಿಲ್ಲ. ಕೇಂದ್ರದ ಮಾನದಂಡದಂತೆಯೇ ಘೋಷಣೆ ಮಾಡಬೇಕು. ಹೀಗಾಗಿ ಕೇಂದ್ರದ ಬರ ಮಾರ್ಗಸೂಚಿ ಸಡಿಲ ಮಾಡುವಂತೆ ಈಗಾಗಲೇ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರನ್ನೇ ಭೇಟಿಯಾಗಿ, ಮತ್ತೊಮ್ಮೆ ಮನವರಿಕೆ ಮಾಡಲು ಸಂಪುಟ ಉಪಸಮಿತಿ ಮುಂದಾಗಿದೆ.

ಬರಪೀಡಿತ ತಾಲೂಕಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ

ಇನ್ನು ಬರ ಪೀಡಿತ ಎಂದು ಘೋಷಣೆ ಆಗುವ ತಾಲೂಕುಗಳಲ್ಲಿ ಐದು ಕೆಜಿ ಅಕ್ಕಿಯ ಹಣದ ಬದಲು, ಪ್ರತಿ ಸದಸ್ಯರಿಗೆ ಪೂರ್ತಿ 10 ಕೆ.ಜಿ. ಅಕ್ಕಿಯನ್ನೇ ಕೊಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ. ಇವತ್ತು ಬರ ಪೀಡಿತ ತಾಲೂಕುಗಳ ಮೊದಲ ಪಟ್ಟಿ ಬಿಡುಗಡೆ ಆಗಬಹುದೆಂದು ಅನ್ನದಾತರು ಕಾಯುತ್ತಿದ್ದರು. ಇದೀಗ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ರೈತರ ಚಿತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

133 ತಾಲೂಕುಗಳಲ್ಲಿ ಮತ್ತೆ ಬೆಳೆ ಸಮೀಕ್ಷೆ.. ಸಂಪುಟ ಉಪಸಮಿತಿ ಸಭೆಯಲ್ಲಿ ಏನೇನಾಯಿತು ಗೊತ್ತಾ?

https://newsfirstlive.com/wp-content/uploads/2023/09/meeting-2.jpg

Load More