ಮುಂಗಾರಿನಲ್ಲಿ ಬಾರದ ಮಳೆ, ‘ಬರ’ ಸ್ಥಿತಿಗೆ ಇಳೆ!
ಕರ್ನಾಟಕದಲ್ಲಿ ಮತ್ತೆ ಬರಗಾಲದ ಕರಿಛಾಯೆ!
ಆಗಸ್ಟ್ 30ರೊಳಗೆ ಬರ ಘೋಷಿಸುತ್ತಾ ಸರ್ಕಾರ?
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ಮನೆ ಅಂಗಳಕ್ಕೆ ತಲುಪಿದೆ. ಮುಂಗಾರು ಜೂಜಾಟದಿಂದ ಬರ ಇದ್ದರೂ ಘೋಷಿಸಲಾಗದ ಸ್ಥಿತಿಯ ಅನಿಶ್ಚಿತತೆ ನಿರ್ಮಿಸಿದೆ. ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಆಗಸ್ಟ್ ಅಂತ್ಯಕ್ಕೆ ಬಂದ್ರೂ ಹಲವು ತಾಲ್ಲುಕುಗಳಲ್ಲಿ ಬಿತ್ತನೆ ಪೂರ್ಣವಾಗಿಲ್ಲ. ಮುಂದಿನ ದಿನಗಳಲ್ಲಿ ಕೂಡ ಮಳೆ ಮುನ್ಸೂಚನೆಗಳಿಲ್ಲ.
ಮೊಳಕೆ ಒಡೆಯದ ಬೆಳೆ.. ಕಾಣೆ ಆದ ರೈತರ ಕಳೆ!
ರಾಜ್ಯದಲ್ಲಿ ಈ ಬಾರಿ ಹೇಳಿಕೆಯಷ್ಟು ಮುಂಗಾರು ಮಳೆ ಆಗಿಲ್ಲ. ರಾಜ್ಯದ ಜಲಾಶಯಗಳು ಭರ್ತಿಯಾಗದೇ ಬತ್ತಿ ಹೋಗುವ ಸ್ಥಿತಿ ತಲುಪಿವೆ. ಈ ಹಿನ್ನಲೆ ಜಲಾಶಯದ ನೀರನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ಈಗ ನೀರಿನ ಅಭಾವ ಎದುರಾಗಿದೆ. ಹೀಗಾಗಿ 16ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು 130ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಈ ಮಧ್ಯೆ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡ್ಬೇಕು ಎಂಬ ಕೂಗು ನಾಡಿನೆಲ್ಲೆಡೆ ವ್ಯಕ್ತವಾಗ್ತಿದೆ.
ಬರಗಾಲದ ಘೋಷಣೆಗೆ ವಿಪಕ್ಷಗಳ ಒತ್ತಾಯ!
ರಾಜ್ಯದಲ್ಲಿ ಮಳೆ ಬಾರದೆ, ಬೆಳೆಗಳಿಗೆ ನೀರಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ.. ಹೀಗಾಗಿ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಜೂನ್ ತಿಂಗಳ ಕೊನೆವರೆಗೂ ಮುಂಗಾರು ಮಳೆ ಆಗಿಲ್ಲ. ಆಗಸ್ಟ್ನಲ್ಲೂ ಮಳೆ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ.. ಮಳೆ ಇಲ್ಲದೇ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಅಂತ ಕಿಡಿಕಾರಿದ್ರು.
ರಾಜ್ಯದ 136 ತಾಲೂಕುಗಳಲ್ಲಿ ‘ಬರ’ದ ಪರಿಸ್ಥಿತಿ!
ಇತ್ತ, ಬೆಂಗಳೂರಿನಲ್ಲಿ ಮಾತ್ನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ 136 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಆದ್ರೆ, ಕೇಂದ್ರದ ಮಾನದಂಡದ ಪ್ರಕಾರ ಡ್ರಾಟ್ ಡಿಕ್ಲೇರ್ ಮಾಡಲಾಗಲ್ಲ. ಆದ್ರೂ ಆಗಸ್ಟ್ 30ರೊಳಗೆ ಬರ ಘೋಷಣೆಗೆ ಯತ್ನಿಸ್ತೀವಿ ಎಂದ್ರು. ಇನ್ನು, ರೈತರ ಕೃಷಿ ಸಾಲ ಮುಂದೂಡಿಕೆ ಬಗ್ಗೆ ಕ್ಯಾಬಿನೆಟ್ನಲ್ಲಿ ತೀರ್ಮಾನಿಸ್ತೀವಿ ಅಂತ ತಿಳಿಸಿದ್ರು.
‘ನೇಣಿನ ಕುಣಿಕೆ’ ಹಿಡಿದು ರೈತರ ಪ್ರತಿಭಟನೆ!
ಇತ್ತ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನಲೆ ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಚಳುವಳಿ ಕೈಗೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಈ ಚಳುವಳಿ ಕೈಗೊಂಡಿತ್ತು.. ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು ನೂರಾರು ರೈತರು ಪ್ರತಿಭಟನಾ ಱಲಿ ನಡೆಸಿದ್ರು. ಕೆಆರ್‌ಎಸ್ ಅಣೆಕಟ್ಟೆ ಬರಿದಾಗುವ ಆತಂಕ ಇದೆ.. ಮಳೆ ಬೀಳದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ತಮಿಳುನಾಡಿಗೆ ನೀರು ಹರಿಸೋದನ್ನ ನಿಲ್ಲಿಸಿ ಅಂತ ಒತ್ತಾಯಿಸಿದ್ರು.
ಒಟ್ಟಾರೆ, ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು, ರಾಜ್ಯದಲ್ಲಿ ಬರದ ಛಾಯೆ ದಟ್ಟವಾಗ್ತಿದೆ. ಬಿತ್ತಿದ ಬೀಜ ಮೊಳಕೆ ಒಡೆಯುವ ಮುನ್ನವೇ ಜೀವಜಲ ಇಲ್ಲದೇ ಭೂಮಿಯಲ್ಲೇ ಜೀವತ್ಯಾಗ ಮಾಡ್ತಿದೆ. ಹೀಗಾಗಿ ಬದಲಾದ ಮಾನದಂಡಗಳು ಕರ್ನಾಟಕ ಜನರ ಪಾಲಿಗೆ ದಂಡವಾಗಿದೆ. ಅಲ್ಲದೆ, ರೈತರ ಜೀವ ಹಿಂಡ್ತಿದೆ. ಆದಷ್ಟು ಬೇಗ ಮಾನದಂಡಗಳು ಸರಳೀಕರಣವಾಗಿ ಬದುಕು ಯಥಾಸ್ಥಿತಿಗೆ ಬರಬೇಕಿದ್ರೆ, ಬರ ಘೋಷಣೆ ಆಗಬೇಕಿದೆ.ವಿಶೇಷ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ