newsfirstkannada.com

ದತ್ತು ಪಡೆದ ಹೆಣ್ಣು ಮಗಳ ಮೇಲೆ ತಂದೆ ಮಾರಣಾಂತಿಕ ಹಲ್ಲೆ.. 2 ವರ್ಷದ ಮಗು ಸಾವು

Share :

11-11-2023

    ದಾಳಿ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಎರಡು ವರ್ಷದ ಮಗು ಸಾವು

    ದತ್ತು ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ತಂದೆ

    ಇನ್ನೊಂದು ಮಗು, ಪತ್ನಿ ಗಂಭೀರ, ಸ್ಥಳೀಯ ಆಸ್ಪತ್ರೆಗೆ ದಾಖಲು

ಲಕ್ನೋ: ಎರಡು ವರ್ಷದ ದತ್ತು ಮಗಳ ಮೇಲೆ ಮದ್ಯದ ಅಮಲಿನಲ್ಲಿ ತಂದೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಹಯಾತ್ ನಗರದಲ್ಲಿ ನಡೆದಿದೆ.

ಹಯಾತ್ ನಗರದ ಮನ್ನತ್​ (2) ಸಾವನ್ನಪ್ಪಿರುವ ಮಗು. ಮುನ್ನ (27) ಮಗಳ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ತಂದೆ. ಆರೋಪಿಯು ಕುಡಿದ ಮತ್ತಿನಲ್ಲಿ ಪತ್ನಿ ಶಾಯಿಸ್ತಾ ಬೇಗಂ ಹಾಗೂ ಈಕೆಯ ಮನ್ನತ್, ಮಂತಾಶಾ (3.6) ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ 2 ವರ್ಷದ ಮಗು ಸಾವನ್ನಪ್ಪಿದ್ದು ಪತ್ನಿ ಹಾಗೂ ಇನ್ನೊಂದು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಮೊರಾದಾಬಾದ್ ಆಸ್ಪತ್ರಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಯು 5 ತಿಂಗಳ ಹಿಂದೆ ಬೇಗಂಳನ್ನು ಮದುವೆಯಾಗಿದ್ದನು. ಅವಾಗಿನಿಂದ ಆಕೆಗೆ ಕಿರುಕುಳ ಕೊಡುತ್ತಲೆ ಬರುತ್ತಿದ್ದ. ಕುಡಿದು ಬಂದಿದ್ದ ಆರೋಪಿ ಏಕಾಏಕಿ ಮಕ್ಕಳು ಹಾಗೂ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇದರಿಂದ ಸ್ಥಳದಲ್ಲೇ ಒಂದು ಮಗು ಸಾವನ್ನಪ್ಪಿದ್ರೆ, ಪತ್ನಿ ಹಾಗೂ ಇನ್ನೊಂದು ಮಗು ತೀವ್ರವಾಗಿ ಗಾಯಗೊಂಡಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ಮುನ್ನನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದತ್ತು ಪಡೆದ ಹೆಣ್ಣು ಮಗಳ ಮೇಲೆ ತಂದೆ ಮಾರಣಾಂತಿಕ ಹಲ್ಲೆ.. 2 ವರ್ಷದ ಮಗು ಸಾವು

https://newsfirstlive.com/wp-content/uploads/2023/11/UP_POLICE.jpg

Load More