ನಶೆಯಲ್ಲಿ ಕುಡಿದ ಬಾರಿಗೆ ಕನ್ನ ಹಾಕಿದ ಕುಡುಕರ ಗ್ಯಾಂಗ್
ಕ್ಲೋಸ್ ಆದ ಬಾರ್ಗೆ ನುಗ್ಗಿ ಚಿಲ್ರೆ-ಗಿಲ್ರೆ ಎಗರಿಸಿದ ಖದೀಮರು
ಸಿಸಿಟಿವಿಯಲ್ಲಿ ಸೆರೆಯಾಗಿದೆ ಕುಡುಕ ಕಳ್ಳರ ಕೈಚಳಕ
ಇದು ಒಂದು ಪೆಗ್ಗಿನ ಕಥೆ. ಕಳೆದ ಜೂನ್ 30ರಂದು ಆನೇಕಲ್ ತಾಲೂಕಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ರಸ್ತೆಯಲ್ಲಿರುವ ನಿಸರ್ಗ ವೈನ್ ಪ್ಯಾರಾಡೈಸ್ಗೆ ಎಣ್ಣೆ ಹೊಡೆಯೋಕ್ ಕೆಲವರು ಬಂದಿದ್ರು. ತುಂಬಾನೇ ಶ್ರದ್ಧೆಯಿಂದ 30, 60, 90 ಅಂತಾ ತಮಗಿಷ್ಟವಾದ ಓಟಿ ಪ್ಯಾಕೆಟ್ಗಳನ್ನ ತಗೊಂಡು ಹೋಗಿದ್ರು. ಇದಾದ ಮೇಲೆ ಇವ್ರು ಮಾಡಿರೋ ಕೆಲ್ಸ ದೇವರು ಸಹ ಮೆಚ್ಚಲ್ಲ ಬಿಡಿ.
ಬಾರ್ಗೆ ನುಗ್ಗಿ ಎಣ್ಣೆ ತೊಗೊಂಡು ಹೋಗಿ ಪಾರ್ಟಿ ಮಾಡಿದ್ದ ಈ ನಾಲ್ಕು ಕುಡುಕ ಖದೀಮರು. ಬಾರ್ ಕ್ಲೋಸ್ ಆದ ಮೇಲೆ ಅದೇ ನಿಸರ್ಗ ಬಾರಿಗೆ, ಮಧ್ಯ ರಾತ್ರಿ 11.30ರ ಸುಮಾರಿಗೆ ಎಂಟ್ರಿ ಕೊಟ್ಟಿದ್ರು. ಬಳಿಕ ಹಾಲೋಬ್ಲಾಕ್ ಕಲ್ಲಿಂದ ಬಾರ್ ಬೀಗ ಒಡೆದು ಹಾಕಿ ಬಾರ್ ಒಳಗೆ ನುಸುಳಿದ್ರು. ಇದಾದ ಮೇಲೆ ಕ್ಯಾಶ್ ಕೌಂಟರ್ನಲ್ಲಿದ್ದ ಚಿಲ್ರೆ-ಗಿಲ್ರೆ ಎಲ್ಲಾ ಸೇರ್ಸಿ 28 ಸಾವಿರ ಹಣ, ಒಂದು ಮೊಬೈಲ್ ಕದ್ದಿದ್ದು ಅಲ್ದೇ ಬಾರ್ನಲ್ಲಿದ್ದ ಮದ್ಯದ ಬಾಟಲಿಗಳನ್ನ ಹೊತ್ತೋಯ್ದಿದ್ದಾರೆ. ಸದ್ಯ ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಮದ್ಯ ಖರೀದಿ ಮಾಡೋ ನೆಪದಲ್ಲಿ ಬಂದು ಪ್ಲಾನ್ ಮಾಡಿ ಹೋಗಿದ್ದ ಈ ಖದೀಮ ಕುಡುಕರು, ರಾತ್ರಿಯಾಗ್ತಿದ್ದಂತೆ ಬಂದು ತಮ್ಮ ಕೈಚಳಕ ತೋರಿದ್ದಾರೆ. ಸದ್ಯ ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ರಸ್ತೆಯಲ್ಲಿರುವ ನಿಸರ್ಗ ವೈನ್ ಪ್ಯಾರಾಡೈಸ್ಗೆ ಎಣ್ಣೆ ಹೊಡೆಯೋಕೆ ಬಂದಿದ್ದ ಕುಡುಕರು ಅದೇ ಬಾರಿಗೆ ಕನ್ನ ಹಾಕಿದ್ದಾರೆ. ಕ್ಯಾಶ್ ಕೌಂಟರ್ನಲ್ಲಿದ್ದ ಚಿಲ್ರೆ-ಗಿಲ್ರೆ ಎಲ್ಲಾ ಸೇರ್ಸಿ 28 ಸಾವಿರ ಹಣ, ಒಂದು ಮೊಬೈಲ್ ಮಾತ್ರವಲ್ಲದೆ ಎಣ್ಣೆ ಬಾಟಲಿ ಕದ್ದಿದ್ದಾರೆ.#Bangalore #Theft… pic.twitter.com/Aj4Dhuj0Hc
— NewsFirst Kannada (@NewsFirstKan) July 1, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ