newsfirstkannada.com

ಶಿವ ಶಿವ.. ನಾನೇ ಪರಮಾತ್ಮ ಎಂದ.. ವೃದ್ಧೆಯನ್ನೇ ಬಡಿದು, ತುಳಿದು ಕೊಂದ

Share :

07-08-2023

  ವೃದ್ಧೆಯ ಹೊಟ್ಟೆಗೆ ಬಲವಾಗಿ ಗುದ್ದಿದ ವೃದ್ಧ

  ಆಕೆಯ ಜುಟ್ಟು ಹಿಡಿದು ಎಳೆದಾಡಿ ಕ್ರೌರ್ಯ

  ಪಕ್ಕದಲ್ಲಿದ್ದವರು ತಡೆದರೂ ಸುಮ್ಮನಾಗದ ವೃದ್ಧ

‘ನಾನೇ ಶಿವ’ ಅಂತಾ ಕೊಂದೇಬಿಟ್ಟ!

ಅದ್ಯಾಕೋ ಗೊತ್ತಿಲ್ಲ ಮದ್ಯವನ್ನ ಪರಮಾತ್ಮನಿಗೆ ಹೋಲಿಸ್ತಾರೆ. ಪರಮಾತ್ಮ ಒಳಗೆ ಹೋದ್ಮೇಲೆ ಬರೋದೆಲ್ಲಾ ಸತ್ಯ ಅಂತನೂ ಕೆಲವರು ಹೇಳ್ತಾರೆ. ಆದ್ರೆ ಈ ಕುಡಿದ ನಶೇಲಿ ನಾನೇ ಪರಮಾತ್ಮ ಅನ್ಕೊಂಡವನೊಬ್ಬ ಅತ್ಯಂತ ಬೀಭತ್ಸ ಕೃತ್ಯ ಮಾಡ್ಬಿಟ್ಟಿದ್ದಾನೆ. ಅಮಾಯಕ ಜೀವವನ್ನೇ ಬಲಿ ಪಡೆದಿದ್ದಾನೆ.

ಎಂಥಾ ಭೀಕರ ದೃಶ್ಯ ನೋಡಿ ಇದು. 70 ವರ್ಷದ ವೃದ್ಧ ಸುಮಾರು ಅದೇ ವಯಸ್ಸಿನ ವೃದ್ಧೆ ಮೇಲೆ ಮನಸೋ ಇಚ್ಛೆ ಥಳಿಸ್ತಿದ್ದಾನೆ. ಇದು ಎಣ್ಣೆ ಹೆಚ್ಚಾದ ಎಫೆಕ್ಟ್. ಕುಡಿತದ ನಶೆಯಲ್ಲಿ ಈ ಥರ ಹಲ್ಲೆ ಮಾಡಿದ್ದಾನೆ.

ಕಂಠಪೂರ್ತಿ ಕುಡಿದು ಬಂದು ಮನೆಯವ್ರ ಮೇಲೆ ಗಲಾಟೆ ಮಾಡೋ, ದೌರ್ಜನ್ಯ ಎಸಗೋ ನೂರಾರು ಘಟನೆಗಳನ್ನ ನೀವು ನೋಡಿರ್ತೀರಿ, ಕೇಳಿರ್ತೀತಿ. ಆದ್ರೆ, ರಾಜಸ್ಥಾನದ ಉದಯಪುರದಲ್ಲಿ ನಡೆದಿರೋ ಈ ಘಟನೆ ಅಂತದ್ದೇ ಮತ್ತೊಂದಲ್ಲ. ಬದಲಾಗಿ ಕುಡಿದ ಮೇಲೆ ಈತ ತನ್ನನ್ನ ತಾನೇ ಪರಮಾತ್ಮ ಅಂದ್ಕೊಂಡ್ಬಿಟ್ಟಿದ್ದ. ಆಮೇಲೆ ಅಲ್ಲಾಗಿದ್ದು ಕ್ರೌರ್ಯದ ಪರಮಾವಧಿ. ಅಷ್ಟಕ್ಕೂ ಅಲ್ಲಾಗಿದ್ದೇನು ಸೀನ್ ಬೈ ಸೀನ್ ತೋರಿಸ್ತೀವಿ ನೋಡಿ.

ಭಗವಂತ ನನ್ನನ್ನ ಕಳಿಸಿದ್ದಾನೆ ಎಂದ ವೃದ್ಧ

ಒಂದೊಂದು ದೃಶ್ಯವೂ ಎಷ್ಟು ಭಯಾನಕವಾಗಿದೆ.. ರಾಜಸ್ಥಾನದ ಉದಯಪುರ ಜಿಲ್ಲೆಯ ತರಪಾಲ ಗ್ರಾಮದಲ್ಲಿ ನಡೆದಿರೋ ಹತ್ಯೆ ಇದು.

ವೃದ್ಧನ ಕಥೆ ತಮಾಷೆಯಾಗಿದೆ ಅಂತಾ ಮೊಬೈಲ್​ನಲ್ಲಿ ಶೂಟ್

ತರಪಾಲ ಗ್ರಾಮದಲ್ಲಿ ಸುಮಾರು 70 ವರ್ಷದ ನಾಥು ಸಿಂಗ್ ಎಂಬಾತ ಕುಡಿದ ನಶೆಯಲ್ಲಿ ವೃದ್ಧೆಯ ಜೊತೆಗೆ ಬಾಯಿಗೆ ಬಂದಂತೆ ಮಾತಾಡ್ತಾ ಕುಳಿತಿದ್ದ. ಗ್ರಾಮದ ಮಹದೇವ ದೇಗುಲದ ಬಳಿ ಕುಳಿತು ಕಥೆ ಹೇಳ್ತಿದ್ದ ವೃದ್ಧ ನಾನೇ ಶಿವನ ಪ್ರತಿರೂಪ, ನನ್ನನ್ನ ಆ ಶಿವನೇ ಕಳಿಸಿದ್ದಾನೆ ಅಂತೆಲ್ಲಾ ಕಥೆ ಹೇಳ್ತಿದ್ದ. ಈ ವೇಳೆ ಸ್ಥಳೀಯ ಮೂರ್ನಾಲ್ಕು ಯುವಕರು ಅಲ್ಲಿಗೆ ಬಂದಿದ್ದಾರೆ. ವೃದ್ಧನ ಕಥೆ ಕೇಳಿ ಏನೋ ತಮಾಷೆಯಾಗಿದೆ ಅಂತಾ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಶೂಟ್ ಮಾಡೋದಕ್ಕೆ ಶುರು ಮಾಡಿದ್ದಾರೆ.  ಈ ವೇಳೆ ನಾನೇ ಶಿವ.. ನಾನೇ ಶಿವ. ಅಂತಾ ಆ ವೃದ್ಧೆಗೆ ಹೊಡೆಯೋದಕ್ಕೆ ಶುರು ಮಾಡಿದ್ದಾನೆ. ಈತನ ಹುಚ್ಚು ಹೆಚ್ಚಾಗಿದ್ದನ್ನ ಗಮನಿಸಿದ ಓರ್ವ ಯುವಕ, ನಶೆಯಲ್ಲಿದ್ದ ವೃದ್ಧನನ್ನ ತಡೆಯೋಕೆ ಪ್ರಯತ್ನಿಸಿದ್ದಾನೆ. ಆದ್ರೆ ಪರಮಾತ್ಮನ ಅಮಲು ಹೆಚ್ಚಾಗಿದ್ದವನಿಗೆ ಕಿವಿಯೇ ಕೇಳಿಸ್ತಿರಲಿಲ್ಲ. ಕಾಲಿನಲ್ಲಿ ವೃದ್ಧೆಯನ್ನ ತುಳಿದು, ಛತ್ರಿಯಿಂದ ಆಕೆಯ ತಲೆಯ ಮೇಲೆ ಹೊಡೆದು ಹೊಡೆದು ರಾಕ್ಷಸನಂತೆ ವರ್ತಿಸಿದ್ದ.. ಈ ಹಲ್ಲೆಯಿಂದಾಗಿ 85 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ನಾನೇ ಶಿವ ಅಂತಿದ್ದ ವೃದ್ಧನನ್ನ ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

ಹೀಗೆ ಪೊಲೀಸರ ಮುಂದೆ ಕುಳಿತಿರೋ ಆರೋಪಿಗೆ ಭರ್ಜರಿಯಾಗಿ ಬೆಂಡೆತ್ತಿ ಸತ್ಯ ಬಾಯ್ಬಿಡಿಸೋಕೆ ಯತ್ನಿಸಿದ್ದಾರೆ. ಆಗಲೂ ಆತ ಹೇಳಿದ್ದು ಶಿವನ ಕಥೆಯನ್ನೇ. ನಾನು ಶಿವನ ಅವತಾರ ಅಂತಾ ಅಂದ್ಕೊಂಡು ಸಾಯುವಂತೆ ಥಳಿಸಿದ್ದೇನೆ. ಆಕೆಯನ್ನ ಮತ್ತೆ ಬದುಕಿಸುವೆ ಅಂತಾ ಪೊಲೀಸರ ಮುಂದೆಯೂ ಬೋಲೆನಾಥನ ಕಥೆಯನ್ನೇ ಹೇಳಿದ್ದಾನೆ. ಈತನ ಪರಮಾತ್ಮನ ಹುಚ್ಚು ಕಂಡು ಪೊಲೀಸರು ಶಾಕ್ ಆಗಿದ್ದಾರೆ.

ಮದ್ಯದ ನಶೆ ಕಡಿಮೆ ಆದ್ಮೇಲೆ ಯಾಕೆ ಹೀಗೆ ಮಾಡಿದೆ ಅಂತಾ ವಿಚಾರಣೆ ಮಾಡಲಾಯ್ತು. ಆಗ ಆತ ನಾನು ಶಿವನ ಅವತಾರ, ನಾನು ಆಕೆಯನ್ನ ಸಾಯಿಸಿದ್ದೇನೆ, ಆಮೇಲೆ ಅವರನ್ನ ಬದುಕಿಸುತ್ತಿದ್ದೆ ಅಂತಾ ಉತ್ತರ ಕೊಟ್ಟಿದ್ದಾನೆ.

ಒಟ್ಟಲ್ಲಿ ಪರಮಾತ್ಮ ಒಳಗೋದ್ಮೇಲೆ ನಾನೇ ಪರಮಾತ್ಮ ಅಂದ್ಕೊಂಡು ಈ ಮಹಾನುಭವ ಒಂದು ಜೀವವನ್ನೇ ತೆಗೆದುಬಿಟ್ಟಿದ್ದಾನೆ. ಈ ವೇಳೆ ಮೂರ್ನಾಲ್ಕು ಯುವಕರು ಸ್ಥಳದಲ್ಲಿದ್ದರೂ ಈ ಘಟನೆ ನಡೆದಿರೋದು ನಿಜಕ್ಕೂ ವಿಪರ್ಯಾಸ.. ಇನ್ನು ಇಂಥದ್ದೊಂದು ವಿಚಿತ್ರ ಕೊಲೆ ಪ್ರಕರಣ ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಶಾಕ್​ಗೆ ಒಳಗಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವ ಶಿವ.. ನಾನೇ ಪರಮಾತ್ಮ ಎಂದ.. ವೃದ್ಧೆಯನ್ನೇ ಬಡಿದು, ತುಳಿದು ಕೊಂದ

https://newsfirstlive.com/wp-content/uploads/2023/08/Madhyapardesh.jpg

Load More