newsfirstkannada.com

ಬತ್ತಿದ ಭೀಮ, ಕೃಷ್ಣ.. ರಾಜ್ಯದಲ್ಲಿ ಎದುರಾಗಿದೆ ಜಲಕ್ಷಾಮದ ಭೀತಿ! ಮುಂದೇನು ಗತಿ?

Share :

02-07-2023

  ಕರುನಾಡಿನ ಮೇಲೆ ಮುನಿಸಿಕೊಂಡ ಮುಂಗಾರು

  ರಾಜ್ಯದಲ್ಲಿ ಮಳೆ ಬಾರದೆ ಅನ್ನದಾತರು ಕಂಗಾಲು

  ಬತ್ತಿದ ಭೀಮೆಯ ಒಡಲು, ಜೀವಜಲಕ್ಕಾಗಿ ಹಾಹಾಕಾರ

ಕರುನಾಡಿನ ಮೇಲೆ ಮುಂಗಾರು ಮುನಿಸಿಕೊಂಡಿದೆ. ಜುಲೈ ತಿಂಗಳು ಆರಂಭ ಆದ್ರೂ ವರುಣ ಕೃಪೆ ತೋರ್ತಿಲ್ಲ. ಮಳೆಗಾಗಿ ಅನ್ನದಾತರು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಜಲಾಶಯಗಳು, ನದಿ-ತೊರೆಗಳು ಬತ್ತಿ ಹೋಗಿವೆ. ರಾಜ್ಯದಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ.

ಮುಂಗಾರಿನಲ್ಲೂ ಕೃಪೆ ತೋರುತ್ತಿಲ್ಲ ವರುಣದೇವ!

ಮಳೆಗಾಲ ಆರಂಭವಾಗಿ ತಿಂಗಳಾದ್ರು ತೊಗರಿನಾಡು ಕಲಬುರಗಿ ಜಿಲ್ಲೆಗೆ ಮೇಘರಾಜ ಕೃಪೆ ತೋರಿಲ್ಲ. ಮಳೆ ಇಲ್ಲದ ಕಾರಣ ಕಲಬುರಗಿ ಜಿಲ್ಲೆಯ ಜೀವನದಿ ಭೀಮಾ ಸಂಪೂರ್ಣ ಬತ್ತಿದೆ. ನದಿ ಪಾತ್ರದ ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಜಾನುವಾರು, ಪ್ರಾಣಿಪಕ್ಷಿಗಳು ನೀರಿಗಾಗಿ ಪರದಾಡುವಂತಾಗಿದೆ. ಮಳೆಯನ್ನೇ ನಂಬಿರುವ ರೈತರು ಕೃಷಿ ಚಟುವಟಿಕೆಯನ್ನ ಇನ್ನೂ ಆರಂಭಿಸಿಲ್ಲ. ಅಫ್ಜಲಪುರ, ಜೇವರ್ಗಿ ಮತ್ತು ಚಿತ್ತಾಪುರ ತಾಲೂಕುಗಳಲ್ಲಿ ವಿಶಾಲವಾಗಿ ಹರಿಯುವ ಭೀಮೆಯ ಒಡಲು ಬತ್ತಿದ್ದು ಜನರ ಬದುಕು ಬರಿದಾದಂತಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಉದ್ದ ಹರಿಯುವ ಕೃಷ್ಣೆ ಖಾಲಿ ಖಾಲಿ!

ಗಂಗಾ, ಗೋದಾವರಿ ಬಳಿಕ ಭಾರತದಲ್ಲಿ ಹರಿಯುವ 3ನೇ ಅತಿ ಉದ್ದವಾದ ನದಿ, ಜೊತೆಗೆ ಕರ್ನಾಟಕದಲ್ಲಿ ಹರಿಯುವ ದೊಡ್ಡ ನದಿ ಎಂದೇ ಖ್ಯಾತಿ ಪಡೆದಿರುವ ಕೃಷ್ಣಾ ನದಿ ಈ ಬಾರಿ ಮಳೆ ಇಲ್ಲದೇ ಬತ್ತಿ ಹೋಗಿದೆ. ಭೋರ್ಗರೆಯುತ್ತಾ ಹರಿಯುತ್ತಿದ್ದ ನದಿ ನೀರಿಲ್ಲದೇ ಒಣಗಿದೆ. ನಾರಾಯಣಪುರ ಜಲಾಶಯ ಕೂಡ ಖಾಲಿಯಾಗಿದೆ. 123 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ಇರೋದು 14.5 ಟಿಎಂಸಿ ನೀರು ಮಾತ್ರ.. ಮಳೆ ಕೈಕೊಟ್ಟಿರೋದು ನೀರಿನ ಅಭಾವ ಸೃಷ್ಟಿಯಾಗಿದೆ.

ಮಂಗಳೂರಲ್ಲಿ ಕಡಲ್ಕೊರೆತ ತಡೆಗೆ ಜೈವಿಕ ರಕ್ಷಾಕವಚ!

ಮಂಗಳೂರು ಕರಾವಳಿಯನ್ನ ಕಾಡುತ್ತಿರುವ ಕಡಲ್ಕೊರೆತ ತಡೆಗೆ ಜೈವಿಕ ರಕ್ಷಾಕವಚ ಬಯೋಶೀಲ್ಡ್ ನಿರ್ಮಿಸುವ ಕಾರ್ಯ ನಡೆಯುತ್ತಿದೆ.  ಸಮುದ್ರ ಕೊರೆತದಿಂದ ಹಾನಿಗೊಳಗಾದ 8 ಹೆಕ್ಟೇರ್ ಪ್ರದೇಶದಲ್ಲಿ,  ಜೈವಿಕ ರಕ್ಷಾಕವಚ ನಿರ್ಮಿಸಲಾಗ್ತಿದೆ. ಕಡಲ್ಕೊರೆತ ತಡೆಗೆ ಆರಂಭವಾದ ದೇಶದಲ್ಲೇ ಮೊದಲ ಪೈಲೆಟ್ ಪ್ರಾಜೆಕ್ಟ್ ಇದಾಗಿದೆ. ತಣ್ಣಿರುಬಾವಿ ಕಡಲತಡಿಯಲ್ಲಿ ಅರಣ್ಯ ಇಲಾಖೆ, ಮರಳನ್ನು ಹಿಡಿದಿಡುವ ಸಸ್ಯ ಪ್ರಭೇದಗಳನ್ನು ಬೆಳೆಸಿ ಜೈವಿಕ ರಕ್ಷಾಕವಚ ನಿರ್ಮಿಸಿದೆ. ಚಂಡಮಾರುತ ಸೇರಿದಂತೆ ಸಮುದ್ರದಿಂದ ಬೀಸುವ ಬಿರುಗಾಳಿಯಿಂದ ಈ ಜೈವಿಕ ರಕ್ಷಾಕವಚ ರಕ್ಷಣೆ ನೀಡಲಿದೆ

ಒಟ್ಟಿನಲ್ಲಿ ನೀರು ಜೀವನದ ಬೇರು. ಸಕಲ ಜೀವರಾಶಿಗಳಿಗೂ ನೀರೇ ಜೀವಾಧಾರ. ಮಳೆ ಬಂದ್ರೆ ಇಳೆಗೆ ಜೀವಕಳೆ. ವರುಣದೇವ ಕೃಪೆ ತೋರಬೇಕಿದೆ. ನಮ್ಮೆಲ್ಲರನ್ನೂ ಉಳಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬತ್ತಿದ ಭೀಮ, ಕೃಷ್ಣ.. ರಾಜ್ಯದಲ್ಲಿ ಎದುರಾಗಿದೆ ಜಲಕ್ಷಾಮದ ಭೀತಿ! ಮುಂದೇನು ಗತಿ?

https://newsfirstlive.com/wp-content/uploads/2023/07/Bhima-River.jpg

Load More