newsfirstkannada.com

ದುಲೀಫ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಘರ್ಜಿಸಿದ ಕನ್ನಡಿಗರು.. ವೈಶಾಕ್, ವಿಧ್ವತ್, ಕೌಶಿಕ್​ ಮಿಂಚಿನ ಆಟ

Share :

Published July 17, 2023 at 3:10pm

Update July 17, 2023 at 3:06pm

    ಕೌಶಿಕ್​ ದಾಳಿಗೆ​ ಚೇತೇಶ್ವರ್ ಪೂಜಾರ, ಸೂರ್ಯ ಕಂಗಾಲು​

    ಚಿನ್ನಸ್ವಾಮಿಯಲ್ಲಿ ವೈಶಾಖ್ ವಿಜಯ್​​​ ಮಿಂಚಿನ ಬೌಲಿಂಗ್​

    ಕನ್ನಡಿಗರಿಂದ ಭಾರತ ತಂಡದ ಆಯ್ಕೆ ಸಮಿತಿಗೆ ಸಂದೇಶ..!

ದುಲೀಫ್​ ಟ್ರೋಫಿ ಫೈನಲ್​ ಫೈಟ್‌ನಲ್ಲಿ ಕನ್ನಡಿಗರ ಘರ್ಜನೆಯ ಮುಂದೆ ಸ್ಟಾರ್​​​ಗಿರಿಯ ವೆಸ್ಟ್​ ಝೋನ್​ ತಂಡ ಕಂಗಾಲ್​ ಆಗಿದೆ. ತವರಿನ ಚಿನ್ನಸ್ವಾಮಿ ಅಂಗಳದಲ್ಲಿ ಪರಾಕ್ರಮ ಮೆರೆದ ಕನ್ನಡದ ಬೌಲರ್​ಗಳು​​​, ನ್ಯಾಷನಲ್​ ಸೆಲೆಕ್ಟರ್ಸ್​ಗೆ ಡೈರೆಕ್ಟ್​ ಮೆಸೇಜ್​ ಪಾಸ್​ ಮಾಡಿದ್ದಾರೆ. ಫೈನಲ್​​ ಫೈಟ್​​ನಲ್ಲಿ ಕನ್ನಡಿಗರ ಘರ್ಜನೆ ಜೋರಾಗಿಯೇ ಇತ್ತು.

ಕುತೂಹಲ ಘಟ್ಟ ತಲುಪಿದ್ದ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಸೌತ್​ ಝೋನ್​ ತಂಡ ಭರ್ಜರಿ ಗೆಲುವು ದಾಖಲಿಸಿತು. ಬಲಿಷ್ಠ ವೆಸ್ಟ್​ ಝೋನ್​ ತಂಡವನ್ನ ಬಗ್ಗು ಬಡಿದ ಸೌತ್​ ಝೋನ್​ 75 ರನ್​ಗಳ ಜಯ ಸಾಧಿಸಿ ಚಾಂಪಿಯನ್​ ಪಟ್ಟಕ್ಕೇರಿತು.

ಫೈನಲ್​ ಫೈಟ್​ನಲ್ಲಿ ಕನ್ನಡಿಗರ ದರ್ಬಾರ್​​.!

ಹೆಮ್ಮೆಯ ಕನ್ನಡಿಗರು ಸೌತ್​ ಝೋನ್​ ತಂಡದ ಚಾಂಪಿಯನ್​ ಪಟ್ಟಕ್ಕೇರಿದರ ಹಿಂದಿನ ರೂವಾರಿಗಳು. ಪಂದ್ಯದ ಆರಂಭಕ್ಕೂ ಮುನ್ನ ವೆಸ್ಟ್​ ಝೋನ್​ ತಂಡವೇ ಗೆಲ್ಲೋ ಫೇವರಿಟ್​ ಎನಿಸಿಕೊಂಡಿತ್ತು. ಆ ಪ್ರಿಡಿಕ್ಷನ್​ ಅನ್ನ ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡದ ತ್ರಿಮೂರ್ತಿಗಳು ಸುಳ್ಳಾಗಿಸಿದರು.

ಕನ್ನಡಿಗರ ಅಬ್ಬರದ ಮುಂದೆ ಸ್ಟಾರ್ಸ್​​ ಡಮಾರ್​​.!

ವೆಸ್ಟ್​ ಝೋನ್​ ತಂಡದಲ್ಲಿ ಭಾರತದ ಸ್ಟಾರ್​​ ಕ್ರಿಕೆಟಿಗರ ದಂಡೇ ಇತ್ತು. ಟೀಮ್​ ಇಂಡಿಯಾದ ಬ್ಯಾಟರ್​ಗಳಾದ ಪೃಥ್ವಿ ಶಾ, ಸೂರ್ಯ ಕುಮಾರ್​ ಯಾದವ್​, ಟೆಸ್ಟ್​ ಸ್ಪೆಷಲಿಸ್ಟ್​​ ಚೇತೇಶ್ವರ್​ ಪೂಜಾರ ತಂಡದಲ್ಲಿದ್ದರು. ಇಷ್ಟೇ ಅಲ್ಲ, ಕಳೆದ 2 ವರ್ಷದಿಂದ ಡೊಮೆಸ್ಟಿಕ್​ ಸರ್ಕ್ಯೂಟ್​ನಲ್ಲಿ ಸಖತ್​ ಸೌಂಡ್​ ಮಾಡ್ತಿರೋ ಸರ್ಫರಾಜ್​ ಖಾನ್​ ಕೂಡ ಇದ್ದರು. ಆದ್ರೆ, ಈ ಯಾವ ಸ್ಟಾರ್​ಗಳ ಆಟ ಕನ್ನಡಿಗರ ಮುಂದೆ ನಡೆಯಲಿಲ್ಲ.

ಚಿನ್ನಸ್ವಾಮಿಯಲ್ಲಿ ಘರ್ಜಿಸಿದ ವಿದ್ವತ್ ಕಾವೇರಪ್ಪ.!

ಫೈನಲ್​ ಪಂದ್ಯ ಪಂದ್ಯದಲ್ಲಿ ವೆಸ್ಟ್​ ಝೋನ್​ ಬ್ಯಾಟ್ಸ್​ಮನ್​ಗಳನ್ನ ವಿದ್ವತ್ ಕಾವೇರಪ್ಪ ಬಿಡದೇ ಕಾಡಿದರು. ಮೊದಲ ಇನ್ನಿಂಗ್ಸ್​ನಲ್ಲೇ ಪರಾಕ್ರಮ ಮೆರೆದ ಯುವ ವೇಗಿಯ ಮುಂದೆ ಸ್ಟಾರ್ಸ್​ ಮಂಡಿಯೂರಿದರು. ಫಸ್ಟ್​​ ಇನ್ನಿಂಗ್ಸ್​ ಫಸ್ಟ್ ಕ್ಲಾಸ್​ ಸ್ಪೆಲ್​ ಹಾಕಿದ ವಿದ್ವತ್​​, 7 ವಿಕೆಟ್​ ಕಬಳಿಸಿದ್ರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 1 ವಿಕೆಟ್​ ಕಬಳಿಸಿ ಮಿಂಚಿದರು.

ಕೌಶಿಕ್​ ಕರಾರುವಕ್​ ದಾಳಿಗೆ ಪೂಜಾರ, ಸೂರ್ಯ ಕಂಗಾಲ್​.!

ಫೈನಲ್​ ಪಂದ್ಯದ 2ನೇ ಇನ್ನಿಂಗ್ಸ್​ನ ಒಂದೇ ಓವರ್​ನಲ್ಲಿ ವಾಸುಕಿ ಕೌಶಿಕ್​, ಇಡೀ ಪಂದ್ಯದ ಧಿಕ್ಕನ್ನೇ ಬದಲಾಯಿಸಿದರು. ಸುಲಭದ ಟಾರ್ಗೆಟ್​ ಬೆನ್ನತ್ತಿದ್ದ ಸ್ಟಾರ್​ಗಿರಿಯ ಬಲ ಹೊಂದಿದ್ದ ವೆಸ್ಟ್​ ಝೋನ್​ ಗೆಲ್ಲೋ ಭಾರಿ ಆತ್ಮವಿಶ್ವಾಸದಲ್ಲಿತ್ತು. ಆದ್ರೆ, ಒಂದೇ ಓವರ್​ನಲ್ಲಿ ಚೇತೇಶ್ವರ್​ ಪೂಜಾರ, ಸೂರ್ಯ ಕುಮಾರ್​ ಯಾದವ್​ಗೆ ಪೆವಿಲಿಯನ್​ ದಾರಿ ತೋರಿಸಿದ ಕೌಶಿಕ್​, ಪಂದ್ಯಕ್ಕೆ ಟ್ವಿಸ್ಟ್​​ ನೀಡಿ, ಒಟ್ಟಾರೆ 5 ವಿಕೆಟ್​​ ಕಬಳಿಸಿ ಫೈನಲ್​ ಪಂದ್ಯದಲ್ಲಿ ಮಿಂಚಿದರು.

ವೈಶಾಖ್ ವಿಜಯ್​ ಕುಮಾರ್​​ ಬೌಲಿಂಗ್​ ಬೊಂಬಾಟ್​​.!

ಆರ್​​ಸಿಬಿ ಹಾಗೂ ಕರ್ನಾಟಕ ತಂಡದ ಯುವ ವೇಗಿ ವೈಶಾಖ್​ ವಿಜಯ್​ ಕುಮಾರ್​ ಕೂಡ ಚಿನ್ನಸ್ವಾಮಿ ಮೈದಾನದಲ್ಲಿ ಧೂಳೆಬ್ಬಿಸಿದರು. ಎರಡೂ ಇನ್ನಿಂಗ್ಸ್​ನಲ್ಲಿ ಟೈಟ್​ ಸ್ಪೆಲ್​ ಮಾಡಿದ ವೈಶಾಖ್​ 3 ವಿಕೆಟ್​ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಇದನ್ನು ಓದಿ: 2023 ವಿಂಬಲ್ಡನ್​ ಪ್ರಶಸ್ತಿಗೆ ಮುತ್ತಿಕ್ಕಿದ ಸ್ಪೆನ್​ನ ನವಯುವಕ.. ಸರ್ಬಿಯಾದ ನೋವಾಕ್ ರೇಸ್​ಗೆ ಬ್ರೇಕ್​ ಹಾಕಿದ ಕಾರ್ಲೋಸ್ ಅಲ್ಕರಾಜ್

ಕೇವಲ ಫೈನಲ್​ ಪಂದ್ಯ ಮಾತ್ರವಲ್ಲ, ಟೂರ್ನಿಯಲ್ಲೂ ಕರ್ನಾಟಕದ ಬೌಲರ್ಸ್​​ ಪರಾಕ್ರಮ ಮೆರೆದ್ರು. ಆಡಿದ 2 ಪಂದ್ಯದಲ್ಲಿ ವಿದ್ವತ್​ ಕಾವೇರಪ್ಪ 15 ವಿಕೆಟ್​ ಕಬಳಿಸಿದ್ರೆ, ವೈಶಾಖ್​ 9 ವಿಕೆಟ್​​ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು, ಆಡಿದ ಒಂದೇ ಪಂದ್ಯದಲ್ಲಿ ಕೌಶಿಕ್​ 5 ವಿಕೆಟ್​​ ಉರುಳಿಸಿದರು.

ಟೀಮ್​ ಇಂಡಿಯಾಗೆ ಎಂಟ್ರಿ ಕೊಡೋ ಕಾತರ.!

ಕರಾರುವಕ್​ ಬೌಲಿಂಗ್​ ಮೂಲಕ ದುಲೀಪ್​ ಟ್ರೋಫಿ ಟೂರ್ನಿಯಲ್ಲಿ ಬ್ಯಾಟ್ಸ್​ಮನ್​ಗಳನ್ನ ಕಾಡಿದ ತ್ರಿಮೂರ್ತಿಗಳು, ನ್ಯಾಷನಲ್​ ಸೆಲೆಕ್ಟರ್ಸ್​​ಗೆ ಡೈರೆಕ್ಟ್​ ಮೆಸೇಜ್​ ಪಾಸ್​ ಮಾಡಿದ್ದಾರೆ. ಟೀಮ್​ ಇಂಡಿಯಾಗೆ ಎಂಟ್ರಿ ಕೊಡೋಕೆ ಕಾತರರಾಗಿರುವ ಈ ವೇಗಿಗಳಿಗೆ ಶೀಘ್ರದಲ್ಲೇ ಅವಕಾಶ ಸಿಗಲಿ ಎನ್ನುವುದೇ ಕನ್ನಡಿಗರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ದುಲೀಫ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಘರ್ಜಿಸಿದ ಕನ್ನಡಿಗರು.. ವೈಶಾಕ್, ವಿಧ್ವತ್, ಕೌಶಿಕ್​ ಮಿಂಚಿನ ಆಟ

https://newsfirstlive.com/wp-content/uploads/2023/07/VIJAY_KUMAR_VIDVWATH_KOUSHIK.jpg

Load More