newsfirstkannada.com

ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ಸಿಗೋವರೆಗೂ ಮಂಜುನಾಥನ ದರ್ಶನ ಮಾಡಬಾರದು ಅನಿಸುತ್ತಿದೆ ಎಂದ ದುನಿಯಾ ವಿಜಯ್

Share :

01-08-2023

    ಸೌಜನ್ಯಳ ಕುರಿತಾಗಿ ಟ್ವೀಟ್​ ಮಾಡಿದ ನಟ ದುನಿಯಾ ವಿಜಯ್​

    11 ವರ್ಷದ ಹಿಂದೆ ಸಾವಿಗೀಡಾದ ಸೌಜನ್ಯನ ಕುರಿತಾಗಿ ಟ್ವೀಟ್​

    ಸರಿಯಾದ ನ್ಯಾಯ ಸಿಗಬೇಕೆಂದು ಹೋರಾಟಕ್ಕಿಳಿದ ಸೌಜನ್ಯ ಮನೆಯವರು

ಧರ್ಮಸ್ಥಳ ಸೌಜನ್ಯ ಪ್ರಕರಣ ಕುರಿತಾಗಿ ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್​ ಟ್ವೀಟ್​ ಮಾಡಿದ್ದಾರೆ. ಟ್ವಿಟ್ಟರ್​ನಲ್ಲಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಹೇಳಿದ್ದಾರೆ.

‘ಪ್ರತಿ ವರ್ಷ ಧರ್ಮಸ್ಥಳದ  ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ’ ಎಂದು ದುನಿಯಾ ವಿಜಯ್​ ಟ್ವೀಟ್​ ಮಾಡಿದ್ದಾರೆ.

ಅದರ ಜೊತೆಗೆ ‘ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು- ಬುದ್ಧ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಬ್ಲಾಕ್​ ಕೋಬ್ರಾ ದುನಿಯಾ ವಿಜಯ್​ ಟ್ವೀಟ್​​ ವೈರಲ್​ ಆಗುತ್ತಿದೆ. ಅನೇಕರು ಈ ಕುರಿತಾಗಿ ಕಾಮೆಂಟ್​ ಮಾಡಿದ್ದಾರೆ.

ಏನಿದು ಪ್ರಕರಣ?

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ಸೌಜನ್ಯ ಉಜಿರೆ ಎಸ್‌ಡಿಎಂ ಕಾಲೇಜಿನಿಂದ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದಳು. ಇದರ ಮರುದಿನ 2012ರ ಅಕ್ಟೋಬರ್‌ 9ರಂದು 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಆರೋಪಿ ಸಂತೋಷ್‌ ರಾವ್​​ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ. ಹೀಗಾಗಿ ಆರೋಪಿ ಸಂತೋಷ್‌ ರಾವ್​ ನಿರ್ದೋಷಿ ಎಂದು  ಸಿಬಿಐ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿತ್ತು. ಇದೀಗ ಆಕೆಯ ಮನೆಯವರು ಸೇರಿ ಹಲವು ಸಂಘಟನೆಗಳು ಸರಿಯಾದ ನ್ಯಾಯ ಸಿಗಬೇಕೆಂದು ಹೋರಾಟದ ದಾರಿಗಿಳಿದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ಸಿಗೋವರೆಗೂ ಮಂಜುನಾಥನ ದರ್ಶನ ಮಾಡಬಾರದು ಅನಿಸುತ್ತಿದೆ ಎಂದ ದುನಿಯಾ ವಿಜಯ್

https://newsfirstlive.com/wp-content/uploads/2023/08/Duniya-Vijay.jpg

Load More