newsfirstkannada.com

Breaking: ಕಟ್ಟಡ ಕಾಮಗಾರಿ ವೇಳೆ ಕುಸಿದ ಮಣ್ಣು, ಓರ್ವನ ರಕ್ಷಣೆ, ಮತ್ತೋರ್ವನಿಗಾಗಿ ಮುಂದುವರೆದ ಶೋಧ

Share :

Published July 3, 2024 at 2:26pm

Update July 3, 2024 at 2:38pm

    ಮಳೆಯಿಂದ ಸಡಿಲಗೊಂಡ ಮಣ್ಣಿನ‌ ದಿಬ್ಬ

    ಕಟ್ಟಡ ನಿರ್ಮಾಣದ ವೇಳೆ ನಡೆದ ಅವಘಡ, ಮುಂದುವರೆದ ಕಾರ್ಯಾಚರಣೆ

    ಮಣ್ಣಿನಡಿ‌ ಸಿಲುಕಿದ ಕಾರ್ಮಿಕನನ್ನು ಹೊರ ತೆಗೆಯಲು ರಕ್ಷಣಾ ತಂಡದ ಹೋರಾಟ

ಮಂಗಳೂರು: ಮಳೆಯಿಂದ ಮಣ್ಣು ಕುಸಿದು ಮಣ್ಣಿನಡಿ ಕಟ್ಟಡ ಕಾರ್ಮಿಕರು ಸಿಲುಕಿರುವ ಘಟನೆ ನಡೆದಿದೆ. ಮಂಗಳೂರಿನ ಬಲ್ಮಠ ರೋಡ್ ಸಮೀಪದ ರೋಹನ್ ಕಾರ್ಪೋರೇಶನ್ ಗೆ ಸೇರಿದ ಕಟ್ಟಡ ನಿರ್ಮಾಣ ವೇಳೆ ಈ ಅವಘಡ ಸಂಭವಿಸಿದೆ.

ಈಗಾಗಲೇ ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮಣ್ಣಿನಡಿ‌ ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅದರಲ್ಲಿ ಓರ್ವನನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: ಬೇರೊಬ್ಬಳ ಜೊತೆ ಮದ್ವೆ.. ಕಾಲೇಜು ವಿದ್ಯಾರ್ಥಿನಿ ಜೊತೆ ಲವ್​! ವಿಡಿಯೋ ಮಾಡಿ ಆತ್ಮಹ* ಮಾಡಿಕೊಂಡ ಲವರ್ಸ್​​

ಸದ್ಯ ಮಣ್ಣಿನಡಿಯಲ್ಲಿ ಮತ್ತೋರ್ವ ಕಾರ್ಮಿಕರು ಕಾಣುತ್ತಿದ್ದು, ಕಾರ್ಮಿಕರ ಜೊತೆಗೆ ರಕ್ಷಣಾ ತಂಡದ ಸಿಬ್ಬಂದಿಗಳು ಸಂಪರ್ಕ ಸಾಧಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಟ್ರೆಚ್ಚರ್ ಜೊತೆ ಆಗಮಿಸಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವ ಕಾರ್ಮಿಕನನ್ನು ರಕ್ಷಿಸುವ ಕಾರ್ಯಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಬಾಯ್​ಫ್ರೆಂಡ್​​.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ

ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದ ಕಟ್ಟಡದ ಬದಿಯಲ್ಲಿದ್ದ ಮಣ್ಣಿನ‌ ದಿಬ್ಬ ಸಡಿಲಗೊಂಡಿತ್ತು. ಇದೀಗ ಕಟ್ಟಡ ಕಾಮಗಾರಿ ವೇಳೆ ಒಂದು ಭಾಗದ ಮಣ್ಣು ಏಕಾಏಕಿ ಕುಸಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಕಟ್ಟಡ ಕಾಮಗಾರಿ ವೇಳೆ ಕುಸಿದ ಮಣ್ಣು, ಓರ್ವನ ರಕ್ಷಣೆ, ಮತ್ತೋರ್ವನಿಗಾಗಿ ಮುಂದುವರೆದ ಶೋಧ

https://newsfirstlive.com/wp-content/uploads/2024/07/mANGALURU.jpg

Load More