newsfirstkannada.com

ನಾನೇನು ಭ್ರಷ್ಟಾಚಾರ ಮಾಡಿಲ್ಲ.. ಬಿಎಸ್ ಯಡಿಯೂರಪ್ಪ ವಿರುದ್ಧ ಡಿ.ವಿ ಸದಾನಂದಗೌಡ ನೇರ ಸಮರ

Share :

Published November 10, 2023 at 6:32am

    ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ vs ಸದಾನಂದಗೌಡ ಜಟಾಪಟಿ

    ಯಡಿಯೂರಪ್ಪ ಸುಳ್ಳು ಹೇಳುವುದು ಸರಿಯಲ್ಲ ಅಂತ ಡಿವಿಎಸ್ ಕಿಡಿ

    ನಾನೇನು ಭ್ರಷ್ಟಾಚಾರ ಮಾಡಿಲ್ಲ ಎಂದು ಬಿಎಸ್‌ವೈ ವಿರುದ್ಧ ವಾಗ್ದಾಳಿ

ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ, ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ. ಹಲವು ಹಿರಿಯರಿಗೆ ಗೇಟ್‌ಪಾಸ್‌ ಕೊಡಲು ಸಜ್ಜಾಗಿದೆ. ಈ ಮಧ್ಯೆ ಕೇಸರಿ ಪಾಳಯದಲ್ಲಿ ಮಾಜಿ ಸಿಎಂಗಳ ಮಧ್ಯೆ ಮಾತಿನ ಜಟಾಪಟಿ ನಡೀತಿದೆ. ರಾಜಕೀಯ ನಿವೃತ್ತಿ ವಿಚಾರವಾಗಿ ಬಿಎಸ್‌ವೈ ವಿರುದ್ಧ ಡಿ.ವಿ. ಸದಾನಂದಗೌಡ ನೇರ ಸಮರ ಸಾರಿದ್ದಾರೆ.

ಕಮಲಕ್ಕೆ ಗೊಬ್ಬರ ಹಾಕಿ ಬೆಳೆಸಿದ ಮತ್ತೊಬ್ಬ ಹಿರಿಯ ನಾಯಕ ಡಿ.ವಿ ಸದಾನಂದಗೌಡ ಗೌರವಯುತ ವಿದಾಯ ಹೇಳಿದ್ದಾರೆ. ವಯಸ್ಸಿನ ಲೇಬಲ್​​ ಅಂಟಿಸಿದ ಬಿಜೆಪಿ ಹೈಕಮಾಂಡ್​​ ಮಾತಿಗೆ ತಲೆದೂಗಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಆದ್ರೀಗ ಸದಾನಂದ ಗೌಡರಿಗೆ ಹೈ ಸಂದೇಶ ನೀಡಿತ್ತು ಎಂಬ ಬಿಎಸ್‌ವೈ ಮಾತು ಮಾಜಿ ಕೇಂದ್ರ ಸಚಿವರನ್ನ ಸಿಡಿದೇಳುವಂತೆ ಮಾಡಿದೆ.

ಬಿಜೆಪಿಯಲ್ಲಿ ಬಿಎಸ್‌ವೈ vs ಸದಾನಂದಗೌಡ ಜಟಾಪಟಿ!
ಬಿಎಸ್‌ವೈ ಹೈ ಸೂಚನೆ ಮಾತಿಗೆ ಸದಾನಂದ ಗೌಡ ರಾಂಗ್!

ರಾಜಕೀಯದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾಗಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೊಂಡಿದ್ರು..ಆದ್ರೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದೆ ಬೇರೆ.. ಪಕ್ಷದ ಹೈಕಮಾಂಡ್​​​ ಸೂಚನೆ ಮೇರೆಗೆ ಡಿವಿಎಸ್ ನಿವೃತ್ತಿ ಆಗಿದ್ದಾರೆ ಅಂತ ಯಡಿಯೂರಪ್ಪ ರಹಸ್ಯ ಬಿಚ್ಚಿಟ್ಟಿದ್ರು.. ಸದಾನಂದಗೌಡರಿಗೆ ಈ ಸಲ ಟಿಕೆಟ್ ಇಲ್ಲ ಅಂತ ವರಿಷ್ಠರು ನೇರವಾಗಿ ಹೇಳಿದ್ದಾರೆ ಅಂತ ಬಿಎಸ್​​ವೈ ಬಹಿರಂಗ ಪಡಿಸಿದ್ರು. ಬಿಎಸ್‌ವೈ ಈ ಮಾತುಗಳನ್ನ ಕೇಳಿ ಡಿವಿಎಸ್ ನಿಗಿ ನಿಗಿ ಕೆಂಡವಾಗಿದ್ದಾರೆ. ಯಡಿಯೂರಪ್ಪ ಮಾತಿಗೆ ಬಹಿರಂಗವಾಗಿ ಬೇಸರ ಹೊರ ಹಾಕಿದ್ದಾರೆ.

ಎಲೆಕ್ಷನ್‌ಗೆ ನಿಲ್ಲದಂತೆ ಹೈ ಕಮಾಂಡ್ ಸೂಚನೆ ಎಂದಿದ್ದ ಬಿಎಸ್‌ವೈ

ಈ ಬಾರಿ ಲೋಕಸಭಾ ಚುನಾವಣೆಗೆ ನಿಲ್ಲದಂತೆ ಹೈ ಕಮಾಂಡ್‌ ಡಿ.ವಿ. ಸದಾನಂದ ಗೌಡರಿಗೆ ಸೂಚನೆ ನೀಡಿದೆ ಅಂತ ಬಿಎಸ್‌ ಯಡಿಯೂರಪ್ಪ ಹೇಳಿದ್ರು. ಈ ಮಾತಿಗೂ ಕೌಂಟರ್ ಕೊಟ್ಟಿರೋ ಡಿ.ವಿ. ಸದಾನಂದಗೌಡ, ಯಡಿಯೂರಪ್ಪ ಈ ರೀತಿ ಸುಳ್ಳು ಹೇಳೋದು ಸರಿಯಲ್ಲ ಅಂತ ಬಹಿರಂಗವಾಗಿ ಕೌಂಟರ್ ಕೊಟ್ಟಿದ್ದಾರೆ.

ನಾನೇನು ಭ್ರಷ್ಟಾಚಾರ ಮಾಡಿಲ್ಲ; ಸದಾನಂದ ಗೌಡ ವಾಗ್ದಾಳಿ

ಬಿಎಸ್‌ವೈ ಸುಳ್ಳು ಹೇಳ್ತಿದ್ದಾರೆ ಅಂತ ಅಸಮಾಧಾನ ಹೊರ ಹಾಕಿದ ಡಿವಿಎಸ್‌ ನಾನೇನು ಸಿಎಂ ಸ್ಥಾನ ಬಿಟ್ಟು ಕೊಡುವಾಗ ಕಣ್ಣೀರಾಕಿಲ್ಲ ಭ್ರಷ್ಟಾಚಾರ ಮಾಡಿಲ್ಲ ಅಂತ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಡಿ.ವಿ ಸದಾನಂದಗೌಡರ ಚುನಾವಣಾ ನಿವೃತ್ತಿ ಘೋಷಣೆ ವಿಚಾರ ಕಮಲ ಪಾಳಯದಲ್ಲಿ ಕದನಕ್ಕೆ ಕಾರಣವಾಗಿದೆ. ಇನ್ನೂ ಅನೇಕ ನಾಯಕರಿಗೂ ಹೈ ಸಂದೇಶ ಬಂದಿದೆ ಎಂಬ ಮಾತು ಹರಿದಾಡುತ್ತಿದೆ. ಹೀಗಾಗಿ ಲೋಕಕದನದ ಹೊತ್ತಲ್ಲಿ ಇದು ಕೇಸರಿ ಪಾಳಯಕ್ಕೆ ಕಂಟಕವಾಗುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೀತಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನೇನು ಭ್ರಷ್ಟಾಚಾರ ಮಾಡಿಲ್ಲ.. ಬಿಎಸ್ ಯಡಿಯೂರಪ್ಪ ವಿರುದ್ಧ ಡಿ.ವಿ ಸದಾನಂದಗೌಡ ನೇರ ಸಮರ

https://newsfirstlive.com/wp-content/uploads/2023/11/BSy-Dv-Sadananda-Gowda.jpg

Load More