newsfirstkannada.com

ಆಟವಾಡುತ್ತಿದ್ದ ಬಾಲಕಿಯನ್ನು ಬಿಡದ ಗಿಡುಗ.. ಆಮೇಲೇನಾಯ್ತು? ಜೀವ ಜಲ್ ಅನ್ನುವ ವಿಡಿಯೋ ಇಲ್ಲಿದೆ!

Share :

Published August 21, 2024 at 2:28pm

Update August 21, 2024 at 2:32pm

    ಗೋಲ್ಡನ್ ಈಗಲ್ ಎಂದೇ ಜನಪ್ರಿಯಗೊಂಡಿರೋ ಪಕ್ಷಿ ಇದು

    ದಾಳಿಗೊಳಗಾದ 8 ವರ್ಷದ ಬಾಲಕಿ ಸ್ಥಿತಿ ಈಗ ಹೇಗಿದೆ ಗೊತ್ತಾ?

    ಗಿಡುಗ ದಾಳಿ ಮಾಡುತ್ತಿರೋ ದೃಶ್ಯವನ್ನು ನೋಡಿ ನೆಟ್ಟಿಗರು ಆತಂಕ

ಇಡೀ ಕುಟುಂಬ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಎಚ್ಚರದಿಂದ ಇರಬೇಕು. ಅದರಲ್ಲೂ ತಮ್ಮ ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವವರು ಮೈಯೆಲ್ಲಾ ಕಣ್ಣಾಗಿ ಇಟ್ಟುಕೊಂಡಿರಬೇಕು. ಆದರೆ ಹೀಗೆ ಗುಡ್ಡಗಾಡು ಪ್ರದೇಶಕ್ಕೆ ಅಥವಾ ಪ್ರಾಣಿ, ಪಕ್ಷಿ ವೀಕ್ಷಣೆಗೆಂದು ಕರೆದುಕೊಂಡರೆ ಮಕ್ಕಳು ಮಾತ್ರವಲ್ಲದೇ ವಯಸ್ಕರಿಗೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: ನಿಮ್ಮಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ.. ನೇಹಾ ಗೌಡ, ಅನುಪಮಾ ಗೌಡ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ!

ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಹೌದು, ಬೃಹತ್​ ಗಾತ್ರದ ಗಿಡುಗವನ್ನು ನೋಡಲು ಬಂದಿದ್ದರು. ಆದ್ರೆ ಇದೇ ವೇಳೆ ಬಾಲಕಿ ಮೇಲೆ ಗಿಡುಗವೊಂದು ದಾಳಿ ಮಾಡಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಗಿಡುಗ ದಾಳಿ ಮಾಡುತ್ತಿರೋ ದೃಶ್ಯವನ್ನು ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

8 ವರ್ಷದ ಬಾಲಕಿ ಆಟವಾಡುತ್ತಿದ್ದಳು. ಇದೇ ವೇಳೆ ಆಗಸದಿಂದ ವೇಗವಾಗಿ ಹಾರಿ ಬಂದಿದೆ. ಆಗ ಹದ್ದು ಬರುತ್ತಿದ್ದಂತೆ ಬಾಲಕಿ ಪಾರಾಗಲು ಯತ್ನಿಸಿದ್ದಾಳೆ. ಆದರೆ ಅಷ್ಟೋತ್ತಿಗೆ ಬಾಲಕಿಯ ಕುತ್ತಿಗೆಯನ್ನು ಗಿಡುಗ ಹಿಡಿದಿದೆ. ಬಳಿಕ ಬಾಲಕಿಯನ್ನು ಎತ್ತಿಕೊಂಡು ಹಾರಲು ಮುಂದಾಗುತ್ತಿತ್ತು. ಆ ಕೂಡಲೇ ಕುದುರೆ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಓಡಿ ಹೋಗಿ ಗಿಡುಗನ ಕಾಲು ಹಿಡಿದು ಬಿಡಿಸಲು ಯತ್ನಿಸಿದ್ದಾನೆ. ಬಳಿಕ ಬಾಲಕಿ ಪೋಷಕರು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಗಿಡುಗನ ದಾಳಿಯಿಂದ ಬಾಲಕಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟವಾಡುತ್ತಿದ್ದ ಬಾಲಕಿಯನ್ನು ಬಿಡದ ಗಿಡುಗ.. ಆಮೇಲೇನಾಯ್ತು? ಜೀವ ಜಲ್ ಅನ್ನುವ ವಿಡಿಯೋ ಇಲ್ಲಿದೆ!

https://newsfirstlive.com/wp-content/uploads/2024/08/eagle3.jpg

Load More