newsfirstkannada.com

Earthquake: ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ; ಬೆಚ್ಚಿಬಿದ್ದು ಮನೆಯಿಂದ ಓಡೋಡಿ ಬಂದ ಜನ..!

Share :

04-11-2023

    ನೇಪಾಳದಲ್ಲಿ ಪ್ರಬಲ ಭೂಕಂಪ, 69 ಮಂದಿ ಸಾವು

    ಉತ್ತರ ಭಾರತದಲ್ಲೂ ಭೂಮಿ ನಡುಗಿದ ಅನುಭವ

    ನೇಪಾಳದ ಜಜಾರ್​ಕೋಟ್​ನಲ್ಲಿ ಭಾರೀ ಅನಾಹುತ

ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ 69ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಉತ್ತರ ಭಾರತ, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಲ್ಲೂ ಕಂಪನದ ಅನುಭವವಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಗಂಭೀರ ಹಾನಿಯ ಬಗ್ಗೆ ವರದಿಗಳಿಲ್ಲ.

ದೆಹಲಿ ಸೇರಿದಂತೆ ಹಲವು ಕಡೆ ಜನರು ಭೂಕಂಪನ ಅನುಭವ ಆಗುತ್ತಿದ್ದಂತೆಯೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಕೇಂದ್ರಬಿಂದು ನೇಪಾಳ. ನೇಪಾಳದ ಜಜಾರ್​ಕೋಟ್​ನ ಪಶ್ಚಿಮ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ದಾಖಲಾಗಿದೆ. ಇದು ಬೆಟ್ಟ-ಗುಡ್ಡಪ್ರದೇಶವಾಗಿದ್ದು ಸುಮಾರು 19 ಲಕ್ಷ ಜನಸಂಖ್ಯೆ ಹೊಂದಿದೆ. ಜಜಾರ್​​ಕೋಟ್ ಜಿಲ್ಲೆಯಲ್ಲಿ 34 ಮಂದಿ ಹಾಗೂ ಪಕ್ಕದ ಪಶ್ಚಿಮ ರುಕುಮ್ ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Earthquake: ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ; ಬೆಚ್ಚಿಬಿದ್ದು ಮನೆಯಿಂದ ಓಡೋಡಿ ಬಂದ ಜನ..!

https://newsfirstlive.com/wp-content/uploads/2023/10/earthquake-1.jpg

Load More