newsfirstkannada.com

6.3 ತೀವ್ರತೆಯ ಭೂಕಂಪನ: ಹೆದರಿ 7 ಅಂತಸ್ತಿನ ಕಟ್ಟದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ; ಭಯಾನಕ ವಿಡಿಯೋ ಇಲ್ಲಿದೆ

Share :

18-08-2023

    7 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಮಹಿಳೆ

    ಮಧ್ಯಾಹ್ನ 12:04ರ ವೇಳೆಗೆ ಭೂಮಿ ಇದ್ದಕ್ಕಿದ್ದಂತೆಯೇ ಕಂಪಿಸಿದೆ

    ಭೂಮಿ ಕಂಪಿಸಿದ್ದನ್ನು ಕಂಡು ಮನೆಯಿಂದ ಹೊರಬಂದ ಜನ

ಕೊಲಂಬಿಯಾದ ರಾಜಧಾನಿ ಬೊಗೋಟಾದಲ್ಲಿ ನಿನ್ನೆ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಮಹಿಳೆಯೊಬ್ಬಳು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ದೃಶ್ಯ ಸೆರೆಯಾಗಿದೆ.

ಬೊಗೋಟಾದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಮಧ್ಯಾಹ್ನ 12:04ರ ವೇಳೆಗೆ ಭೂಮಿ ಇದ್ದಕ್ಕಿಂದ್ದಂತೆಯೇ ಕಂಪಿಸಿದೆ. ಎಲ್​​ ಕ್ಯಾಲ್ವಾರಿಯೋ ಪಟ್ಟಣದಿಂದ 40 ಕಿಲೋಮೀಟರ್​ ದೂರದವರೆಗೆ ಭೂಮಿ ಕಂಪಿಸಿದೆ.

ಇದ್ದಕ್ಕಿಂದ್ದಂತೆಯೇ ಭೂಮಿ ಕಂಪಿಸಿದ್ದನ್ನು ಕಂಡು ಜನರು ಹೆದರಿ ಮನೆಯಿಂದ ಹೊರ ಓಡುವ ದೃಶ್ಯ ಕೂಡ ಸೆರೆಯಾಗಿದೆ. ಕೆಲವರು ಮನೆಯ ಟೇಬಲ್​ ಅಡಿಯಲ್ಲಿ ಅಡಗಿ ಕೂರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

2008ರಲ್ಲಿ ಇದೇ ರೀತಿಯ ಘಟನೆ ಎಲ್​ ಕ್ಯಾಲ್ವಾರಿಯಲ್ಲಿ ಸಂಭವಿಸಿತ್ತು. ಅಂದು 5.5 ತೀವ್ರತೆಯ ಭೂಕಂಪನಕ್ಕೆ 11 ಜನರು ಬಲಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6.3 ತೀವ್ರತೆಯ ಭೂಕಂಪನ: ಹೆದರಿ 7 ಅಂತಸ್ತಿನ ಕಟ್ಟದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ; ಭಯಾನಕ ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/08/Colambia.jpg

Load More