newsfirstkannada.com

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೆಸರಿನಲ್ಲೂ ‘INDIA’ ಇದೆ- ವಿಪಕ್ಷಗಳಿಗೆ ಪ್ರಧಾನಿ ಮೋದಿ ಕೌಂಟರ್

Share :

25-07-2023

    ಬಿಜೆಪಿ ಸಂಸದೀಯ ಸಭೆಯಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ

    ವಿರೋಧ ಪಕ್ಷಗಳಿಗೆ ಯಾವುದೇ ದಿಕ್ಕುದೆಸೆ ಇಲ್ಲ ಎಂದ ಮೋದಿ

    ವಿಪಕ್ಷ ಮೈತ್ರಿಕೂಟ ಸೋತು, ಸುಸ್ತಾಗಿವೆ, ಭರವಸೆ ರಹಿತವಾಗಿವೆ

ನವದೆಹಲಿ: ವಿರೋಧ ಪಕ್ಷಗಳಿಗೆ ಯಾವುದೇ ದಿಕ್ಕುದೆಸೆ ಇಲ್ಲ. ಅವರನ್ನು ನೋಡಿದರೆ ದೀರ್ಘ ಕಾಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಮನಸು ಮಾಡಿದಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ, ಈ ಲೋಕಸಭಾ ಅವಧಿ ಪೂರ್ಣಗೊಳಿಸಲು ನಮಗೆ ಇನ್ನೂ ಒಂದು ವರ್ಷ ಇದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಹೊಸದಾಗಿ ಸಿದ್ಧತೆ ನಡೆಸಬೇಕು. ಅವರು (ಕಾಂಗ್ರೆಸ್​ ಬೆಂಬಲಿತರು) ಮೈತ್ರಿಕೂಟಕ್ಕೆ ಇಂಡಿಯಾ (INDIA) ಅಂತ ಹೆಸರಿಡುವುದರಿಂದ ಏನೂ ಆಗಲ್ಲ.

ಈಸ್ಟ್ ಇಂಡಿಯಾ ಕಂಪನಿಯೂ ಇಂಡಿಯಾ ಹೆಸರನ್ನು ಹೊಂದಿತ್ತು. ಇಂಡಿಯನ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಹೆಸರಿನಲ್ಲೂ ಇಂಡಿಯಾ ಇದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರಿನಲ್ಲೂ ಇಂಡಿಯಾ ಇದೆ ಅನ್ನೋ ಮೂಲಕ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಕೌಂಟರ್ ನೀಡಿದ್ದಾರೆ.

ವಿರೋಧ ಪಕ್ಷಗಳು ಸೋತು, ಸುಸ್ತಾಗಿವೆ, ಭರವಸೆ ರಹಿತವಾಗಿವೆ. ವಿರೋಧ ಪಕ್ಷಗಳ ಒಂದು ಪಾಯಿಂಟ್ ಅಜೆಂಡಾ ಮೋದಿ ವಿರೋಧಿಸುವುದು. ಇಂಡಿಯಾ ಹೆಸರಿಗೆ ತಮ್ಮನ್ನು ತಾವು ಹೊಗಳಿಕೊಳ್ಳುತ್ತಿದ್ದಾರೆ. ದೇಶದ ಹೆಸರು‌ ಅನ್ನು ಬಳಸುವುದರಿಂದ ಜನರನ್ನು ದಿಕ್ಕು ತಪ್ಪಿಸಲಾಗಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೆಸರಿನಲ್ಲೂ ‘INDIA’ ಇದೆ- ವಿಪಕ್ಷಗಳಿಗೆ ಪ್ರಧಾನಿ ಮೋದಿ ಕೌಂಟರ್

https://newsfirstlive.com/wp-content/uploads/2023/07/NARENDRA_MODI.jpg

Load More