/newsfirstlive-kannada/media/post_attachments/wp-content/uploads/2024/11/ED-OPERATION-22-STATES.jpg)
ಇಡಿ ಅಧಿಕಾರಿಗಳು ಸುಮಾರು 22 ರಾಜ್ಯಗಳಿಗೆ ಶಾಕ್ ಕೊಟ್ಟಿದದ್ದಾರೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಸೇರಿದಂತೆ ಒಟ್ಟು 22 ರಾಜ್ಯಗಳಲ್ಲಿ ಏಕಾಏಕಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ, ದಾಳಿಯಲ್ಲಿ 12.41 ಕೋಟಿರ ರೂಪಾಯಿ ವಶಕ್ಕೆ ಪಡೆದಿದೆ.
ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಅವರ ಸಂಸ್ಥೆಯ ಮೇಲೆ ಹಾಗೆ M/s ಫ್ಯೂಚರ್ ಗೇಮಿಂಗ್​ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್​ ಇತರ ಸಹವರ್ತಿ ಮನೆಗಳ ಮೆಲೆಯೂ ಕೂಡ ದಾಳಿ ನಡೆದಿದೆ. 2002ರ ಪಿಎಂಎಲ್​ಎ ಆ್ಯಕ್ಟ್ ಅಡಿಯಲ್ಲಿ ಶೋಧ ಕಾರ್ಯ ನಡೆಸಿದೆ.
ಕಾರ್ಯಾಚರಣೆ ಸಮಯದಲ್ಲಿ ಹಲವು ಪ್ರಮುಖ ದಾಖಲೆಗಳು, ಡಿಜಿಟಲ್ ಡಿವೈಸ್ ಸೇರಿದಂತೆ 12.41 ಕೋಟಿ ರೂಪಾಯಿ ಇಡಿ ವಶಕ್ಕೆ ಪಡೆದಿದೆ. ಜೊತೆಗೆ ಅಕೌಂಟ್​ಗಳಲ್ಲಿರುವ ಎಫ್​ಡಿಆರ್ ಜೊತೆಗೆ 6.42 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us