newsfirstkannada.com

ED ನಿರ್ದೇಶಕ ಸಂಜಯ್ ಮಿಶ್ರಾ ಸೇವಾವಧಿ ವಿಸ್ತರಣೆ ರದ್ದು; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ

Share :

11-07-2023

    ED ನಿರ್ದೇಶಕ ಸಂಜಯ್ ಮಿಶ್ರಾ ಸೇವಾವಧಿ ವಿಸ್ತರಣೆ ಅಕ್ರಮ

    ಮೂರನೇ ಸೇವಾವಧಿ ವಿಸ್ತರಣೆ ತಪ್ಪು ಎಂದು ಸುಪ್ರೀಂಕೋರ್ಟ್

    15 ದಿನಗಳ ಒಳಗೆ ನೂತನ ED ನಿರ್ದೇಶಕ ನೇಮಕ ಮಾಡಬೇಕು

ನವದೆಹಲಿ: ಜಾರಿ ನಿರ್ದೇಶನಾಲಯ ನಿರ್ದೇಶಕರ ಸೇವಾವಧಿ ಕುರಿತಂತೆ ಸುಪ್ರೀಂಕೋರ್ಟ್ ಇವತ್ತು ಐತಿಹಾಸಿಕ ತೀರ್ಪು ನೀಡಿದೆ. ED ನಿರ್ದೇಶಕ ಸಂಜಯ್ ಮಿಶ್ರಾಗೆ ಕೇಂದ್ರ ಸರ್ಕಾರ ನೀಡಿದ್ದ ಸೇವಾವಧಿ ವಿಸ್ತರಣೆ ಅಕ್ರಮ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸೇವಾವಧಿ ವಿಸ್ತರಣೆ ರದ್ದುಪಡಿಸಿರೋ ಸರ್ವೋಚ್ಛ ನ್ಯಾಯಾಲಯದ ಈ ನಿರ್ಧಾರ ಕೇಂದ್ರ ಸರ್ಕಾರ ಹಾಗೂ ED ನಿರ್ದೇಶಕ ಸಂಜಯ್ ಮಿಶ್ರಾಗೆ ಹಿನ್ನಡೆ ತಂದಿದೆ.

ED ಅಂದ್ರೆ ಜಾರಿ ನಿರ್ದೇಶನಾಲಯ ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಗಳಲ್ಲೊಂದಾಗಿದೆ. ಇದು ಆರ್ಥಿಕ ಕಾನೂನುಗಳನ್ನು ಜಾರಿ ಮಾಡುವ ಹಾಗೂ ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯ ನಿರ್ವಹಿಸುತ್ತದೆ. ದೇಶದೊಳಗೆ ನಡೆಯೋ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ. ED ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಪ್ರಮುಖ ಭಾಗವಾಗಿದೆ. ಭಾರತೀಯ ಆಡಳಿತಾತ್ಮಕ ಸೇವಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಅಧಿಕಾರಿಗಳನ್ನು ಈ ಸಂಸ್ಥೆ ಒಳಗೊಂಡಿರುತ್ತದೆ.

ಕೇಂದ್ರ ಸರ್ಕಾರ ED ನಿರ್ದೇಶಕರಾಗಿದ್ದ ಸಂಜಯ್ ಮಿಶ್ರಾಗೆ ಸೇವಾವಧಿಯನ್ನು ವಿಸ್ತರಣೆ ಮಾಡಿತ್ತು. ಇದೀಗ ಕಳೆದ ವರ್ಷ ನೀಡಿದ್ದ ಸೇವಾವಧಿ ಕಾನೂನು ಬಾಹಿರ. ಮೂರನೇ ಸೇವಾವಧಿ ವಿಸ್ತರಣೆ ತಪ್ಪು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ 2023ರ ಜುಲೈ 31ರವರೆಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಇಡಿ ನಿರ್ದೇಶಕ ಸಂಜಯ್ ಮಿಶ್ರಾಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರ ಇನ್ನು 15 ದಿನಗಳ ಒಳಗಾಗಿ ನೂತನ ED ನಿರ್ದೇಶಕರನ್ನು ನೇಮಕ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ED ನಿರ್ದೇಶಕ ಸಂಜಯ್ ಮಿಶ್ರಾ ಸೇವಾವಧಿ ವಿಸ್ತರಣೆ ರದ್ದು; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ

https://newsfirstlive.com/wp-content/uploads/2023/07/ED-Sanjay-Mishra.jpg

Load More