ಗಜ, ದೃಶ್ಯ, ದೃಶ್ಯ 2, ನಮ್ಮ ಯಜಮಾನ್ರು ಸಿನಿಮಾದಲ್ಲಿ ನಟನೆ
IRS ಅಧಿಕಾರಿ ಜೊತೆ ಡೇಟಿಂಗ್‌ನಲ್ಲಿದ್ದಕ್ಕೆ ಕೋಟಿ, ಕೋಟಿ ಗಿಫ್ಟ್?
ದುಬಾರಿ ಉಡುಗೊರೆ ಪಡೆದಿರೋದನ್ನು ಒಪ್ಪಿಕೊಂಡ ನಟಿಮಣಿ
ಕನ್ನಡದ ಗಜ, ದೃಶ್ಯ, ದೃಶ್ಯ 2, ನಮ್ಮ ಯಜಮಾನ್ರು ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟಿ ನವ್ಯಾ ನಾಯರ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಕೇರಳ ಮೂಲದ ಈ ನಟಿ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೊಟೀಸ್ ಜಾರಿ ಮಾಡಲಾಗಿದೆ. IRS ಅಧಿಕಾರಿ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ನವ್ಯಾ ನಾಯರ್ ಅವರ ಹೆಸರು ತಳುಕು ಹಾಕಿಕೊಂಡಿದೆ. ಚಿನ್ನಾಭರಣ, ದುಬಾರಿ ಗಿಫ್ಟ್‌ಗಳು, ಕೋಟ್ಯಾಂತರ ರೂಪಾಯಿ ಹಣ ಪಡೆದ ಆರೋಪದಲ್ಲಿ ನವ್ಯಾ ನಾಯರ್ ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕಳೆದ ಜೂನ್‌ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಕ್ನೋದಲ್ಲಿ ಭರ್ಜರಿ ಬೇಟೆಯಾಡಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕಸ್ಟಮ್ಸ್ ಹೆಚ್ಚುವರಿ ಕಮಿಷನರ್ ಸಚಿನ್ ಸಾವಂತ್ ಅವರನ್ನು ಬಂಧಿಸಿದ್ದರು. ಸಚಿನ್ ಸಾವಂತ್ ಅವರ ವಿಚಾರಣೆ ವೇಳೆ IRS ಅಧಿಕಾರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಸಚಿನ್ ಸಾವಂತ್ ಅವರಿಂದ ನಟಿ ನವ್ಯಾ ನಾಯರ್ ಅಪಾರ ಪ್ರಮಾಣದ ಚಿನ್ನಾಭರಣವನ್ನು ಸ್ವೀಕರಿಸಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲ ಸಚಿನ್ ಸಾವಂತ್ ಜೊತೆ ನವ್ಯಾ ನಾಯರ್ ಅವರು ನಿರಂತರ ಡೇಟಿಂಗ್ ಮಾಡಿರೋದು, ಫೋನ್ ಸಂಭಾಷಣೆಯ ಡಿಟೇಲ್ಸ್ ಕೂಡ ಸಿಕ್ಕಿದೆ.
ಇದನ್ನೂ ಓದಿ: 2ನೇ ಹೆಂಡತಿ ಮನೆ ಮೇಲಿಂದ ಆತ್ಮಹತ್ಯೆ ಮಾಡಿಕೊಂಡ JDS ಮುಖಂಡ .. ಆ ಪತ್ನಿ ಮೇಲೆ ಈ ಪತ್ನಿಗೆ ಅನುಮಾನ
ಬಂಧನದಲ್ಲಿರುವ IRS ಅಧಿಕಾರಿ ಸಚಿನ್ ಸಾವಂತ್ ಅವರನ್ನ ಜಾರಿ ನಿರ್ದೇಶನಾಲಯ ತೀವ್ರ ವಿಚಾರಣೆಗೆ ಒಳಪಡಿಸಿದೆ. ತನಿಖೆ ವೇಳೆ ಹಲವು ಬೇನಾಮಿ ಆಸ್ತಿಗಳು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಶೇರು, ಅಕ್ರಮ ಸಂಪತ್ತು ಇರೋದು ಪತ್ತೆಯಾಗಿದೆ. ಪ್ರಮುಖವಾಗಿ ನಟಿ ನವ್ಯಾ ನಾಯರ್ ಅವರ ಬ್ಯಾಂಕ್ ಖಾತೆಗೆ 1 ಕೋಟಿ 25 ಲಕ್ಷ ರೂಪಾಯಿಯನ್ನು ಜಮೆಯಾಗಿದೆ. ಆದರೆ ಇದಕ್ಕೆ ಸರಿಯಾದ ಆದಾಯದ ಮೂಲವನ್ನು ತೋರಿಸಿಲ್ಲ. ಬಹುಭಾಷಾ ನಟಿ ನವ್ಯಾ ನಾಯರ್ ಕೂಡ ದುಬಾರಿ ಗಿಫ್ಟ್‌ಗಳನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. IRS ಅಧಿಕಾರಿ ಸಚಿನ್ ಸಾವಂತ್ ಜೊತೆ ಸ್ನೇಹ ಸಂಬಂಧವಿತ್ತು. ಹೀಗಾಗಿ ದುಬಾರಿ ಗಿಫ್ಟ್‌ಗಳನ್ನು ಪಡೆದಿದ್ದೇನೆ. ಅದರ ಹೊರತಾಗಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿನ್ ಸಾವಂತ್ ಹಾಗೂ ನವ್ಯಾ ನಾಯರ್ ವಾಟ್ಸಾಪ್ ಚಾಟ್ಸ್‌ಗಳನ್ನು ತನಿಖೆ ನಡೆಸಿದ್ದಾರೆ. ಈ ಕುರಿತು ನವ್ಯಾ ನಾಯರ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಸಾವಂತ್ ನಮ್ಮ ಪಕ್ಕದ ಮನೆಯಲ್ಲೇ ಇದ್ದವರು. ಇವರು ನಟಿ ನವ್ಯಾ ನಾಯರ್ ಅವರ ಜೊತೆ ಹಲವು ಬಾರಿ ಕೇರಳದ ಪ್ರಸಿದ್ಧ ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನವ್ಯಾ ಮಗನ ಹುಟ್ಟುಹಬ್ಬ ಸಚಿನ್ ಗಿಫ್ಟ್‌ಗಳನ್ನು ನೀಡಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಜಾರಿ ನಿರ್ದೇಶನಾಲಯದ ಮುಂದೆ ಹೇಳುವುದಾಗಿ ತಿಳಿಸಿದ್ದಾರೆ. ಇಡಿ ಅಧಿಕಾರಿಗಳಿಂದ ನೋಟಿಸ್ ಪಡೆದಿರುವ ನಟಿ ನವ್ಯಾ ನಾಯರ್ ವಿಚಾರಣೆಯನ್ನು ಎದುರಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ