newsfirstkannada.com

ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ ಸಚಿವ ನಾಗೇಂದ್ರಗೆ ‘ED’ ಲಾಕ್‌? ಏನಿದು ₹187 ಕೋಟಿ ಕಥೆ? 

Share :

Published July 10, 2024 at 1:16pm

  ಡಾಲರ್ಸ್ ಕಾಲೋನಿ ನಿವಾಸದಿಂದ ನಾಗೇಂದ್ರರನ್ನು ಕರೆದೊಯ್ದ ಇ.ಡಿ

  ಬೆಂಗಳೂರು, ಬಳ್ಳಾರಿ ಸೇರಿ 18ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಾಚರಣೆ

  187 ಕೋಟಿ ಪೈಕಿ 94 ಕೋಟಿ 73 ಲಕ್ಷ ಬೇರೆ ಅಕೌಂಟ್​ಗೆ ವರ್ಗಾವಣೆ?

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಕೇಸ್‌ಗೆ ಇಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.

ED (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿರುವ ಬೆನ್ನಲ್ಲೇ ಹೆಚ್ಚಿನ ವಿಚಾರಣೆಗೆ ಮಾಜಿ ಸಚಿವ ನಾಗೇಂದ್ರ ಅವರನ್ನು ಕರೆದುಕೊಂಡು ಹೋಗಲಾಗಿದೆ. ಡಾಲರ್ಸ್ ಕಾಲೋನಿ ನಿವಾಸದಿಂದ ಇನೋವಾ ಕಾರಿ​ನಲ್ಲಿ ಕರೆದೊಯ್ದ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಟ್ವಿಸ್ಟ್​.. ಬೆಳ್ಳಂಬೆಳಗ್ಗೆ ಬಸನಗೌಡ ದದ್ದಲ್ ಮನೆ ಮೇಲೆ ED ದಾಳಿ..! 

ನಾಗೇಂದ್ರ, ದದ್ದಲ್‌ ಇಬ್ಬರಿಗೂ ಬಿಗ್‌ಶಾಕ್‌!
ಇ.ಡಿ ಅಧಿಕಾರಿಗಳು ಇಂದು 18ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ಮನೆ, ಬಳ್ಳಾರಿಯಲ್ಲಿರುವ ನಿವಾಸದ ಮೇಲೂ ರೇಡ್ ಮಾಡಲಾಗಿದೆ. ಯಲಹಂಕದ ಶ್ರೀನಿವಾಸಪುರ, ರಾಯಚೂರಿನ ದದ್ದಲ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಇನ್ನು, ಕೋರಮಂಗಲದಲ್ಲಿರೋ ಬ್ಯಾಂಕ್ ಮ್ಯಾನೇಜರ್​ ಸುಚಿಸ್ಮಿತಾ ಮನೆ, ವಿಜಯನಗರದಲ್ಲಿರೋ ಬ್ಯಾಂಕ್ ಮ್ಯಾನೇಜರ್​ ದೀಪಾ ಮನೆ, ಜಗಜೀವನರಾಮ ನಗರದಲ್ಲಿರೋ ಕೃಷ್ಟಮೂರ್ತಿ ನಿವಾಸದಲ್ಲಿ ರೇಡ್ ಮಾಡಲಾಗಿದೆ.

ಇ.ಡಿ ಅಧಿಕಾರಿಗಳ ದಾಳಿ ಯಾಕೆ?
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಣ ವರ್ಗಾವಣೆ ಮೂಲ ಬೆನ್ನತ್ತಿರುವ ಅಧಿಕಾರಿಗಳು, ಯಾವ್ಯಾವ ಅಕೌಂಟ್​ಗಳಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ. ಮೂಲ ಅಕೌಂಟ್​ಯಿದ್ರೂ ಪ್ಯಾರೆಲಲ್​ ಅಕೌಂಟ್ ಓಪನ್​ ಮಾಡಿದ್ದು ಯಾಕೆ? ನಿಗಮದ ಮೂಲ ಖಾತೆ ಇದ್ರೂ ಮತ್ತೊಂದು ಖಾತೆ ಓಪನ್​, ಉಪ ಖಾತೆಗೆ ವರ್ಗಾವಣೆ ಆಗಿರುವ ಕೋಟಿ ಕೋಟಿ ಹಣದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಏನಿದು ವಾಲ್ಮೀಕಿ ‘ಕೋಟಿ’ ಕಥೆ? 
ವಾಲ್ಮೀಕಿ ನಿಗಮದ ಮೂಲ ಖಾತೆ ಬೆಂಗಳೂರಿನ ವಸಂತನಗರದ ಯೂನಿಯನ್ ಬ್ಯಾಂಕ್‌ನಲ್ಲಿದೆ. ಆದರೂ ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್​ನಲ್ಲಿ ಮತ್ತೊಂದು ಖಾತೆ ಓಪನ್ ಮಾಡಲಾಗಿದೆ. ಪತ್ರ ವ್ಯವಹಾರವಿಲ್ಲದೇ ಪ್ಯಾರಲಲ್ ಅಕೌಂಟ್ ಓಪನ್ ಮಾಡಲಾಗಿತ್ತು. ಈ ಉಪ ಖಾತಗೆ ರಾಜ್ಯ ಟ್ರೆಜರಿಯಿಂದ 187 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪವಿದೆ.

187 ಕೋಟಿ ಪೈಕಿ 94 ಕೋಟಿ 73 ಲಕ್ಷ ಬೇರೆ ಅಕೌಂಟ್​ಗೆ ವರ್ಗಾವಣೆ ಮಾಡಲಾಗಿದೆ. ನಿಗಮದ ಮೂಲ ಖಾತೆಗೆ ಹಣ ವರ್ಗಾವಣೆಯಾಗದಂತೆ ಮಾಡಲಾಗಿದೆ. ನಿಗಮದ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಜಂಟಿಯಾಗಿ ಸಹಿ ಹಾಕಿ ಹಣ ವರ್ಗಾವಣೆ ಮಾಡಿರೋ ಆರೋಪವಿದೆ. ದಾಖಲೆ ಬಳಸಿ ಹಣ ವರ್ಗಾವಣೆ ಮಾಡಿರೋ ಹಿನ್ನಲೆ ಇ.ಡಿಯಿಂದ ದಾಳಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ ಸಚಿವ ನಾಗೇಂದ್ರಗೆ ‘ED’ ಲಾಕ್‌? ಏನಿದು ₹187 ಕೋಟಿ ಕಥೆ? 

https://newsfirstlive.com/wp-content/uploads/2024/07/Nagendra-Valmiki-Scam.jpg

Load More