newsfirstkannada.com

VIDEO: ಜಲ್ ಜೀವನ್‌ ಮಿಷನ್‌ನಲ್ಲಿ ಭಾರೀ ಭ್ರಷ್ಟಾಚಾರ; ಕೋಟಿ, ಕೋಟಿ ನಗದು, ಚಿನ್ನ ಕಂಡು ಬೆಚ್ಚಿ ಬಿದ್ದ ಇ.ಡಿ

Share :

Published September 2, 2023 at 9:16am

    ಜಲ್ ಜೀವನ್‌ ಮಿಷನ್‌ನಲ್ಲಿ ಕೋಟ್ಯಾಂತರ ಹಗರಣ ಆರೋಪ

    ನಿವೃತ್ತ RAS ಅಧಿಕಾರಿಯೊಬ್ಬರ ಮನೆಯಲ್ಲಿ ಬಂಗಾರದ ಬಿಸ್ಕೇಟ್‌

    ಜಲಸಂಪನ್ಮೂಲ ಸಚಿವ ಮಹೇಶ್ ಜೋಶಿ ಆಪ್ತನೂ ಇಡಿ ಬಲೆಗೆ

ಜೈಪುರ: ರಾಜಸ್ಥಾನದಲ್ಲಿ ಜಲ್ ಜೀವನ್‌ ಮಿಷನ್‌ನಲ್ಲಿ ಕೋಟ್ಯಾಂತರ ಹಗರಣ ಸಂಬಂಧ  ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಕೋಟಿ, ಕೋಟಿ ಸಂಪತ್ತನ್ನು ಅಕ್ರಮವಾಗಿ ಸಂಪಾದಿಸಿದ್ದ ತಹಶೀಲ್ದಾರ್, ನಿವೃತ್ತ ಅಧಿಕಾರಿಗಳು ಇ.ಡಿ ಬಲೆಗೆ ಬಿದ್ದಿದೆ. ದಾಳಿ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ನಗದು ಪತ್ತೆಯಾಗಿದ್ದು, ದೊಡ್ಡ, ದೊಡ್ಡ ತಿಮಿಂಗಿಲಗಳ ಖಜಾನೆಯನ್ನ ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ರಾಜಸ್ಥಾನದ ಹಲವೆಡೆ ಇ.ಡಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಮುಖವಾಗಿ ರಾಜಸ್ಥಾನ ಆಡಳಿತ ಸೇವೆಯಲ್ಲಿ ಕಾರ್ಯ ನಿರ್ವಹಿಸಿದ್ದ ನಿವೃತ್ತ RAS ಅಧಿಕಾರಿಯೊಬ್ಬರು ಕೋಟಿ, ಕೋಟಿ ಅಕ್ರಮ ಆಸ್ತಿ ಸಂಪಾದಿಸಿರೋದು ಪತ್ತೆಯಾಗಿದೆ. ಅಮಿತಾಭ್ ಕೌಶಿಗ್​ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, 1 ಕೆಜಿಯ ಚಿನ್ನದ ಗಟ್ಟಿಗಳು ಲಭ್ಯವಾಗಿವೆ. ಈ 1 ಕೆಜಿ ಚಿನ್ನದ ಗಟ್ಟಿಯ ಮೌಲ್ಯವೇ ಸರಿ ಸುಮಾರು 1 ಕೋಟಿ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ತಹಶೀಲ್ದಾರ್ ಸುರೇಶ್ ಶರ್ಮಾ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 80 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಕಲ್ಯಾಣ್ ಸಿಂಗ್ ಕಲ್ವಿಯಾ ಎಂಬುವರ ಬಳಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಜಲಸಂಪನ್ಮೂಲ ಸಚಿವ ಮಹೇಶ್ ಜೋಶಿ ಆಪ್ತ ಕಾರ್ಯದರ್ಶಿ ಸಂಜಯ್ ಬಾಧಿಯಾ ಅವರ ನಿವಾಸದ ಮೇಲೂ ಇ.ಡಿ ದಾಳಿ ನಡೆಸಲಾಗಿದೆ.

ರಾಜಸ್ಥಾನದಲ್ಲಿ ಜಲ್ ಜೀವನ್‌ ಮಿಷನ್ ಯೋಜನೆಯಲ್ಲಿ ಕೋಟ್ಯಾಂತರ ಹಗರಣ ನಡೆದಿರೋ ಆರೋಪ ಕೇಳಿ ಬಂದಿದೆ. ಈ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಇಡಿ ಅಧಿಕಾರಿಗಳು ಜಲ್ ಜೀವನ್‌ ಮಿಷನ್ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಆಸ್ತಿ, ಪಾಸ್ತಿಯನ್ನು ಜಾಲಾಡುತ್ತಿದ್ದಾರೆ. ಇ.ಡಿ ದಾಳಿಯನ್ನು ಖಂಡಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಜಲ್ ಜೀವನ್‌ ಮಿಷನ್‌ನಲ್ಲಿ ಭಾರೀ ಭ್ರಷ್ಟಾಚಾರ; ಕೋಟಿ, ಕೋಟಿ ನಗದು, ಚಿನ್ನ ಕಂಡು ಬೆಚ್ಚಿ ಬಿದ್ದ ಇ.ಡಿ

https://newsfirstlive.com/wp-content/uploads/2023/09/ED-Cash-Seize.jpg

Load More