newsfirstkannada.com

NAAC ನೂತನ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ. ಗಣೇಶ್ ಕಣ್ಣಬೀರನ್ ನೇಮಕ

Share :

28-07-2023

    NAAC ನೂತನ ನಿರ್ದೇಶಕರಾಗಿ ಪ್ರೊ. ಗಣೇಶ್ ಕಣ್ಣಬೀರನ್ ನೇಮಕ

    ಐದು ವರ್ಷಕ್ಕೊಮ್ಮೆ ವಿಶ್ವವಿದ್ಯಾಲಯಗಳಿಗೆ ನ್ಯಾಕ್​​ ಮಾನ್ಯತೆ ಕಡ್ಡಾಯ

    ಶಿಕ್ಷಣ ಸಂಸ್ಥೆಗಳಿಗೆ ಎ, ಬಿ, ಸಿ ಆಧಾರದ ಮೇಲೆ ಶ್ರೇಣಿ ನೀಡಲಿದೆ NAAC

ಬೆಂಗಳೂರು: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ನೂತನ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ. ಗಣೇಶ್ ಕಣ್ಣಬೀರನ್ ನೇಮಕಗೊಂಡಿದ್ದಾರೆ.

ತಿರುಚಿ ನ್ಯಾಷನಲ್ ಇನ್​ಸ್ಟಿಟ್ಯೂಟ್​​ ಆಫ್​​ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿ ಹಾಗೂ ಹಿರಿಯ ಪ್ರಾಧ್ಯಾಪಕ ಗಣೇಶ್​ ಅವರು, 3 ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಇವರಿಗೆ ಆಡಳಿತ, ಬೋಧನೆ, ಸಂಶೋಧನೆ ವಿಭಾಗದಲ್ಲಿ 30 ವರ್ಷ ಅನುಭವ ಇದೆ. ಈಗ ನ್ಯಾಕ್ ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

NAAC ಎಂದರೇನು?

ನ್ಯಾಕ್​​ ಎಂದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ. ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ನ್ಯಾಕ್​ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಿ ಗ್ರೇಡ್​ ನೀಡುತ್ತದೆ.

ರಾಜ್ಯದ ವಿಶ್ವವಿದ್ಯಾಲಯಗಳಿಗೆ ನ್ಯಾಕ್​​ ಮಾನ್ಯತೆ ಕಡ್ಡಾಯ. ಇದರ ಮಾನ್ಯತೆ ಇಲ್ಲದೆ ಯುಜಿಸಿ ಅನುದಾನ, ಸರ್ಕಾರಗಳಿಂದ ಹಣಕಾಸಿನ ನೆರವು ಸಿಗುವುದಿಲ್ಲ. ಅಂದಹಾಗೆ ನ್ಯಾಕ್​ ಶಿಕ್ಷಣ, ಮೂಲಸೌಕರ್ಯ, ಸಂಶೋಧನೆ, ಬೋಧನೆ, ಕಲಿಕೆ ಕುರಿತ ಆಧಾರದ ಮೇಲೆ ಶ್ರೇಣಿ ನೀಡುತ್ತದೆ. ಎ, ಬಿ, ಸಿ ಆಧಾರದ ಮೇಲೆ ಶ್ರೇಣಿ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

NAAC ನೂತನ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ. ಗಣೇಶ್ ಕಣ್ಣಬೀರನ್ ನೇಮಕ

https://newsfirstlive.com/wp-content/uploads/2023/07/Ganesh-Kannabeeran.jpg

Load More