ಗಾಂಜಾ ಸೇವನೆ ಮಾಡುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆ
ವೀಡ್, ಪಾಟ್, ಡಾಪ್ ಎಂದು ಗಾಂಜಾಕ್ಕೆ ಹಲವು ಹೆಸರುಗಳಿವೆ
ಈ ಮರಿಜುವಾನ ಸೇವಿಸಿದ್ರೆ ಅತ್ಯಮೂಲ್ಯವಾದ ಜೀವನ ನಾಶ
ಯುವಸಮುದಾಯ ದೇಶದ ಆಸ್ತಿ. ಇಂತಹ ಯುವಕರೇ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕು. ಆದರೆ ನಗರ, ಮಹಾನಗರಗಳು ಬೆಳೆದಂತೆ ಯುವಕರಲ್ಲಿ ದುಶ್ಚಟಗಳು ಹೆಚ್ಚುತ್ತಿವೆ. ಯುವಕರು ಕೆಟ್ಟ ಚಟಗಳಿಗೆ ದಾಸರಾಗಿ ಅರ್ಧದಲ್ಲೇ ಜೀವನ ಕಳೆದುಕೊಳ್ಳುತ್ತಿರುವುದು ಬೇಸರ ಸಂಗತಿ. ಆಲ್ಕೋಹಾಲ್, ತಂಬಾಕು, ಓಪಿಯಮ್, ಆಂಫಿಟಮೈನ್, ಹಿರಾಯಿನ್, ಕೊಕೇನ್, ಡ್ರಗ್ಸ್ ಸೇರಿಂದತೆ ಗಾಂಜಾಕ್ಕೆ ನವಯುವಕರು ಬಲಿಯಾಗುತ್ತಿದ್ದಾರೆ.
ಸದ್ಯ ಇವತ್ತು ಗಾಂಜಾ ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯೋಣ. ಈ ಗಾಂಜಾಕ್ಕೆ ವೈಜ್ಞಾನಿಕವಾಗಿ ಕ್ಯಾನಬಿಸ್ ಸಟೈವಾ (Cannabis Sativa) ಅಥವಾ ಮರಿಜುವಾನ ಎಂದು ಕರೆಯುತ್ತಾರೆ. ಆದ್ರೆ ಈಗೀಗ ಇದನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದು ಕೂಡ ಕರೆಯಲಾಗುತ್ತಿದೆ. ಇದನ್ನು ಸೇವನೆ ಮಾಡಿದಾಗ ದೇಹ ಮತ್ತು ಮೆದುಳಿನ ಮೇಲೆ ಹಲವಾರು ದುಷ್ಪರಿಣಾಮಗಳು ಬೀರುತ್ತವೆ.
ಈ ಮರಿಜುವಾನವನ್ನು ಮನರಂಜನೆ, ಖುಷಿ, ಸಂತೋಷಕ್ಕಾಗಿ ಯಾಱರು ಸೇವನೆ ಮಾಡುವರೋ ಅವರು ಬಹು ಬೇಗನೇ ಅತ್ಯಮೂಲ್ಯವಾದ ಜೀವನವನ್ನ ಕೊನೆ ಮಾಡಿಕೊಳ್ಳುತ್ತಾರೆ.
THC ಎಂಬ ರಾಸಾಯನಿಕ ಭಾರೀ ಪ್ರಭಾವ ಬೀರುತ್ತೆ
ಗಾಂಜಾದಲ್ಲಿನ THC ಎಂಬ ರಾಸಾಯನಿಕವು ಸೇವನೆ ಮಾಡಿದ ವ್ಯಕ್ತಿಯ ಶ್ವಾಸಕೋಶಗಳಿಂದ ನೇರ ರಕ್ತವನ್ನು ಸೇರುತ್ತದೆ. ಈ ರಕ್ತ ಮೆದುಳಿಗೆ ಹಾಗೂ ದೇಹದ ಭಾಗಗಳಿಗೆ ರವಾನೆಯಾಗಿ ಮೊದ ಮೊದಲು ಮಜಾ ನೀಡುತ್ತದೆ. ಆದರೆ ಬರು ಬರುತ್ತಾ ಶಕ್ತಿ ಕುಂದಿಸುತ್ತಾ ಹೋಗುತ್ತದೆ.
ಉಸಿರಾಟದ ಮೇಲೆ ಗಂಭೀರವಾಗಿ ಎಫೆಕ್ಟ್ ಆಗುವ ಇದು ಕೆಮ್ಮು ಸೇರಿದಂತೆ ಶ್ವಾಸಕೋಶದ ಸೋಂಕುಗಳನ್ನು ಉಂಟು ಮಾಡುತ್ತದೆ.
ಇನ್ನು ಬೇರೆಯವರಿಗಿಂತ ಗಾಂಜಾ ಸೇವನೆ ಮಾಡುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ.
ಗಾಂಜಾ ಸೇವನೆ ಒಂದು ಕುಟುಂಬವನ್ನೇ ನಾಶ ಮಾಡಬಹುದು. ಗಾಂಜಾವು ಬೇರೆಯವರ ಮೇಲೆ ಅನುಮಾನ ಹೆಚ್ಚಿಸುತ್ತದೆ. ಭ್ರಮೆಗಳನ್ನು ಅಧಿಕಗೊಳಿಸಿ ಬೇರೆ ಕೆಲಸ ಮಾಡದಂತೆ ಮಾಡುತ್ತದೆ.
ಅನುವಂಶಿಕವಾಗಿ ಗಾಂಜಾ ತುಂಬಾ ಕೆಟ್ಟದ್ದು
ಮುಂದಿನ ಜನರೇಷನ್ ಮೇಲೂ ಗಾಂಜಾ ತನ್ನ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಹುಟ್ಟುವ ಮಗುವಿನ ಮೇಲೆ ಅನುವಂಶಿಕವಾಗಿ ಬುದ್ಧಿಮಾಂದ್ಯ ಇತ್ಯಾದಿ ನ್ಯೂನತೆಗಳನ್ನು ಉಂಟು ಮಾಡುತ್ತದೆ. ದೀರ್ಘಾವಧಿ ಗಾಂಜಾ ಸೇವನೆಯಿಂದ ಗಂಟಲಲ್ಲಿ ಗೂರಲು, ನಿದ್ರಾಭಂಗ, ಚಿತ್ತೈಕಾಗ್ರತೆಗೆ ಧಕ್ಕೆ ಮುಂತಾದ ದುಷ್ಪರಿಣಾಮಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.
ಕೆಲವರಿಗೆ ಗಾಂಜಾ ಸೇವನೆಯು ಆತಂಕ, ಭಯ ಹೆಚ್ಚು ಮಾಡುತ್ತದೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗಿ ಹಲವು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ.
ಇದು ನೆನಪಿನ ಶಕ್ತಿಯನ್ನು ಕುಂದಿಸುತ್ತದೆ. ಅಲ್ಲದೇ ನಮ್ಮಲ್ಲಿರುವ ಕಲಿಕೆಯ ಸಾಮರ್ಥ್ಯವನ್ನು ಇಲ್ಲದಂತೆ ಮಾಡಿ ಮನುಷ್ಯ ಯಾವುದೇ ಕೆಲಸಕ್ಕೆ ಬಾರದವನಂತೆ ಕುಗ್ಗಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಬಿಡುತ್ತೆ.
ಮರಿಜುವಾನ ಸೇವಿಸಿದವರು ಈಗ ಇರುವ ವ್ಯವಸ್ಥೆಯ ಯೋಚನೆಯಿಂದ ಬೇರೆ ಯೋಚನೆ ಮೂಲಕ ದೂರ ಹೋಗಿ ಇಲ್ಲದ ವಿಷಯ ಕೇಳುವಂತೆ, ನೋಡುವಂತೆ, ಭ್ರಮೆಯಲ್ಲಿ ಇರುವಂತೆ ಮಾಡುತ್ತದೆ.
ಯವ್ವೌನದಲ್ಲಿ ಶೋಕಿಗಾಗಿ ಯುವಕರು ಈ ಮರಿಜುವಾನ ಬಲೆಗೆ ಬಿದ್ದು ಬದುಕನ್ನೇ ಬರಡು ಮಾಡಿಕೊಳ್ಳುತ್ತಿದ್ದಾರೆ. ಒಮ್ಮೆ ತೆಗೆದುಕೊಂಡರೆ ಇದನ್ನು ಮತ್ತೆ ಮತ್ತೆ ಮನಸಿನ ಮಜಾಕ್ಕಾಗಿ ತೆಗೆದುಕೊಳ್ಳಬೇಕು ಎನಿಸುತ್ತದೆ. ಹೀಗಾಗಿ ಇದನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು. ಗಾಜಾ ಕೆಟ್ಟ ವ್ಯಸನವಾಗಿದ್ದು ಕುಟುಂಬದ ಬೆಳವಣಿಗೆ, ಸಂಪಾದನೆ, ಶಿಕ್ಷಣ, ಉದ್ಯೋಗ, ಸಂಬಂಧಗಳನ್ನು ಹಾಳು ಮಾಡುತ್ತದೆ.
ವಿಶೇಷ ವರದಿ: ಭೀಮಪ್ಪ ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ