/newsfirstlive-kannada/media/post_attachments/wp-content/uploads/2024/11/sinde.jpg)
ಮಹಾರಾಷ್ಟ್ರದಲ್ಲಿ ಮಹಾಯುತಿ ಒಗ್ಗಟ್ಟಿಗೆ ಮತ್ತೊಮ್ಮೆ ಅದೃಷ್ಟ ಒಲಿದು ಬಂದಿದೆ. ಮ್ಯಾಜಿಕ್ ನಂಬರ್ ದಾಟಿ ದಾಖಲೆಯ ಗೆಲುವು ಪಡೆದ ಮಹಾಯುತಿ ಮೈತ್ರಿ ನೂತನ ಸರ್ಕಾರ ರಚನೆಯ ಕಸರತ್ತು ನಡೆಸ್ತಿದೆ. ‘ತ್ರಿ’ ಶಕ್ತಿಯ ಬಲ ಹೊಂದಿರುವ ಮಹಾಯುತಿ ಸರ್ಕಾರದ ‘ಮಹಾ’ ರಾಜ ಯಾರು ಅನ್ನೋದು ಕುತೂಹಲ ಮೂಡಿಸಿದೆ.
/newsfirstlive-kannada/media/post_attachments/wp-content/uploads/2023/10/sinde.jpg)
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂಧೆ ಬಣ, ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಬಣಗಳ ಮಹಾಯುತಿ ಮೈತ್ರಿಕೂಟ ಬಂಪರ್ ಬಹುಮತ ಪಡೆದಿವೆ. ಭರ್ಜರಿ ಗೆಲುವಿನೊಂದಿಗೆ ನೂತನ ಸರ್ಕಾರ ರಚನೆಗೆ ಕಸರತ್ತು ಜೋರಾಗಿದೆ. ಬಿಜೆಪಿ 132 ಸ್ಥಾನಗಳನ್ನು ಗೆದ್ದಿದ್ದು ಶಿವಸೇನೆ 54 ಸ್ಥಾನಗಳನ್ನು ಗೆದ್ರೆ ಅಜಿತ್ ಪವಾರ್ ಎನ್​ಸಿಪಿ 43 ಸ್ಥಾನಗಳನ್ನು ಗೆದ್ದು ಬೀಗಿದೆ. ಸದ್ಯ ಶಾಸಕಾಂಗ ಪಕ್ಷದ ನಾಯಕನ ರಚನೆ ಕಸರತ್ತು ನಡೆಯುತ್ತಿದ್ದು ಸಿಎಂ ಯಾರು ಅನ್ನೋದು ಫೈನಲ್ ಆಗಬೇಕಿದೆ.
/newsfirstlive-kannada/media/post_attachments/wp-content/uploads/2023/07/Ajith-Pawar-Maharashtra.jpg)
ಇನ್ನು ಈ ಬಾರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 57 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಬಹುಮತಕ್ಕೆ 145 ಸೀಟುಗಳನ್ನು ಗೆಲ್ಲಬೇಕಿದೆ. ಕಳೆದ ಬಾರಿ ಶಿಂಧೆ ಬಣದಲ್ಲಿ ಬಿಜೆಪಿಗಿಂತ ಕಡಿಮೆ ಸೀಟ್ ಇದ್ರೂ ಸಿಎಂ ಸ್ಥಾನ ನೀಡಲಾಗಿತ್ತು, ಈ ಬಾರಿಯೂ ಶಿಂಧೆಗೆ ಸಿಎಂ ಸ್ಥಾನ ಕೊಡ್ಬೇಕು ಅನ್ನೋದು ಆ ಬಣದ ನಾಯಕರ ಒತ್ತಾಯವಾಗಿದೆ. ಇನ್ನು ಬಿಜೆಪಿಗೆ ಕಳೆದ ಬಾರಿಯ ಪರಿಸ್ಥಿತಿ ಇಲ್ಲ, 132 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮುಖ್ಯಮಂತ್ರಿ ಪಟ್ಟಕ್ಕೆ ಹಕ್ಕು ಮಂಡಿಸಿದೆ.
ಕಳೆದ ಬಾರಿಗೆ ಶಿಂಧೆಗೆ ಸಿಎಂ ಸ್ಥಾನ ಬಿಟ್ಟಿಕೊಟ್ಟಿರೋ ಹಿನ್ನೆಲೆ ಈ ಬಾರಿ ಫಡ್ನವೀಸ್​​ಗೆ ಸಿಎಂ ಕುರ್ಚಿ ನೀಡ್ಬೇಕು ಅನ್ನೋದು ಬಿಜೆಪಿ ನಾಯಕರ ಆಗ್ರಹವಾಗಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿರೋ ಕಾರಣ, ಮಿತ್ರಪಡೆಗಳ ಬೆಂಬಲ ಇಲ್ಲದೇ ಪಕ್ಷೇತರರ ಮೂಲಕ ಸರ್ಕಾರ ರಚಿಸೋ ಸಾಮರ್ಥ್ಯವೂ ಇದೆ. ಹೀಗಾಗಿ ಬಿಜೆಪಿ ಸಿಎಂ ಸ್ಥಾನ ಬಿಟ್ಟು ಕೊಡೋದು ಡೌಟ್ ಎನ್ನಲಾಗ್ತಿದೆ. ರಾಜಸ್ಥಾನದಲ್ಲಿ ಮಾಡಿದಂತೆ ಫಡ್ನವೀಸ್ ಬದಲು ಮತ್ತೊಬ್ಬ ನಾಯಕನಿಗೆ ಪಟ್ಟ ಕಟ್ಟಿದ್ರು ಅಚ್ಚರಿಯಿಲ್ಲ.
/newsfirstlive-kannada/media/post_attachments/wp-content/uploads/2023/07/Ajith-pawar.jpg)
ಎನ್​ಸಿಪಿಯ ಅಜಿತ್ ಪವಾರ್ ಸಿಗುತ್ತಾ ‘ಮಹಾ’ ಪವರ್?
ಮತ್ತೊಂದೆಡೆ ಅಜಿತ್ ಪವರ್ ನೇತೃತ್ವದ ಎನ್‌ಸಿಪಿ ಈ ಬಾರಿ 41 ಸೀಟ್ ಗೆದ್ದಿದೆ. ಮೈತ್ರಿಯ ಪಾಲುದಾರರಾಗಿರೋ ಅಜಿತ್ ಪವಾರ್​​ಗೆ ಸಿಎಂ ಸ್ಥಾನ ಕೊಡಬೇಕು ಅನ್ನೋದು ಅಜಿತ್ ಬಣದ ಒತ್ತಾಯವಾಗಿದೆ. ಲೋಕಸಭೆಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟು ಬಿಟ್ಟು ಕೊಟ್ಟಿದ್ದು ಹಾಗೂ ಕೇಂದ್ರ ಸಚಿವ ಸ್ಥಾನ ಪಡೆಯದೇ ಇರೋದನ್ನು ಉಲ್ಲೇಖಿಸಿ ಹಕ್ಕು ಪ್ರತಿಪಾದಿಸಿದೆ. ಒಟ್ಟಾರೆ, ಫಲಿತಾಂಶ ಬರುವ ಮುನ್ನವೇ ಸಿಎಂ ಪಟ್ಟಕ್ಕಾಗಿ ಜಟಾಪಟಿ ನಡೆದಿತ್ತು. ಇದೀಗ ತ್ರಿಮೂರ್ತಿಗಳ ಸರ್ಕಾರದಲ್ಲಿ ಯಾರಿಗೆ ಮುಖ್ಯಮಂತ್ರಿ ಗಾದಿ ಒಲಿಯುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us