/newsfirstlive-kannada/media/post_attachments/wp-content/uploads/2024/11/MH_CM-1.jpg)
ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಸಿಎಂ ಆಯ್ಕೆ ತಲೆನೋವಾಗಿದೆ. ಕೇಂದ್ರದ ವೀಕ್ಷಕರಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿಜಯ್ ರೂಪಾನಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ನಿರ್ಧಾರ ಆಗುತ್ತೋ ಎಂದು ಎಲ್ಲರ ಚಿತ್ತ ಸೆಳೆದಿದೆ. ದೆಹಲಿಗೆ ತೆರಳಿದ ಮೈತ್ರಿಕೂಟದ ನಾಯಕ ಅಜಿತ್​ ಪವರ್​ ತಡರಾತ್ರಿ ಹಲವು ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/01/Amit-shah-2.jpg)
ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದು 10 ದಿನಗಳಾಗುತ್ತಾ ಬಂದರು ಮಹಾರಾಷ್ಟ್ರದಲ್ಲಿ ಸಿಎಂ ಆಯ್ಕೆ ಬಿಕ್ಕಟ್ಟು ಮಾತ್ರ ಬಗೆಹರಿಯುತ್ತಲೇ ಇಲ್ಲ. ಮಹಾಯುತಿ ಮೈತ್ರಿಯಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ಬಿಜೆಪಿ ಯಾರನ್ನೇ ಸಿಎಂ ಆಗಿ ಮಾಡಿದ್ರೂ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದಿದ್ದ ಹಂಗಾಮಿ ಸಿಎಂ ಏಕನಾಥ್ ಶಿಂಧೆ, ಇದೀಗ ವರಸೆ ಬದಲಿಸಿದ್ದಾರೆ. ಇದು ಮಹಾ ಸಿಎಂ ಆಯ್ಕೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಮಹಾಯುತಿ ನಾಯಕರ ಸಭೆ ರದ್ದು.. ದೆಹಲಿಗೆ ಅಜಿತ್​ ಪವರ್​ ದೌಡು
ಒಂದು ಕಡೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾಯುತಿ ನಾಯಕರ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದರೆ. ತಮ್ಮನ್ನೇ ಸಿಎಂ ಮಾಡಬೇಕು. ಇಲ್ಲ ಪ್ರಮುಖ 3 ಖಾತೆಗಳನ್ನು ಕೊಡಬೇಕು ಎಂದು ಹಠ ಹಿಡಿದಿದ್ದಾರೆ. ಮತ್ತೊಂದು ಕಡೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ದಿಲ್ಲಿಗೆ ಹಾರಿದ್ದಾರೆ. ಸರ್ಕಾರ ರಚನೆ ಹಾಗೂ ಖಾತೆ ಹಂಚಿಕೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಅಜಿತ್ ಪವಾರ್ ತೆರಳಿದ್ದಾರೆ.
ಮಹಾರಾಷ್ಟ್ರ ಸಿಎಂ ಆಯ್ಕೆ, ಸಿಎಲ್‌ಪಿ ಸಭೆಗೆ ವೀಕ್ಷಕರ ನೇಮಕ
ಈ ಎಲ್ಲ ಗೊಂದಲದ ನಡುವೆ ಸಿಎಂ ಪ್ರಮಾಣ ವಚನಕ್ಕೆ ಬಿಜೆಪಿ ಸಮಯ ನಿಗದಿಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲು ಮುಂದಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ಹಿರಿಯ ನಾಯಕ ವಿಜಯ್ ರೂಪಾನಿ ವೀಕ್ಷಕರನ್ನಾಗಿ ನೇಮಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲೂ ಫೆಂಗಲ್ ಅಬ್ಬರ.. ಈ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
/newsfirstlive-kannada/media/post_attachments/wp-content/uploads/2024/11/MH_CM.jpg)
ಡಿಸೆಂಬರ್ 4 ರಂದು ಅಂದ್ರೆ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ತಿಳಿಯಲಿದೆ. ಮಹಾರಾಷ್ಟ್ರ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲವು ಸಾಧಿಸಿದ್ರೂ ಸರ್ಕಾರ ರಚನೆ ಮಾತ್ರ ವಿಳಂಬ ಆಗುತ್ತಿದೆ. ಮಹಾಯುತಿ ಕೂಟದಲ್ಲಿ ದಿನಕ್ಕೊಂದು ಬೆಳವಣಿಗೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us