Advertisment

ಮಹಾರಾಷ್ಟ್ರ ನೂತನ ಸಿಎಂ ಯಾರಾಗ್ತಾರೆ? ಏಕನಾಥ್ ಶಿಂಧೆ ರಾಜೀನಾಮೆ ಕೊಡುತ್ತಿದ್ದಂತೆ ಮೆಗಾ ಟ್ವಿಸ್ಟ್‌!

author-image
Gopal Kulkarni
Updated On
ಕ್ಲೈಮ್ಯಾಕ್ಸ್‌ನಲ್ಲಿ ಮೆಗಾ ಟ್ವಿಸ್ಟ್.. ಮಹಾರಾಷ್ಟ್ರ ಸಿಎಂ ಹೆಸರು ಘೋಷಣೆಗೆ ಒಂದು ಷರತ್ತು; ಏನದು?
Advertisment
  • ಮಹಾರಾಷ್ಟ್ರದಲ್ಲಿ ಮಹಾ ರಹಸ್ಯವಾಗಿ ಉಳಿದ ಮುಂದಿನ ಸಿಎಂ ವಿಚಾರ
  • ಇಂದು ಮುಂಜಾನೆ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ಏಕನಾಥ್​
  • ಬಿಹಾರ ಮಾದರಿಯಲ್ಲಿ ಸರ್ಕಾರ ರಚನೆಯಾಗಬೇಕು ಎಂದು ಹೇಳಿದ್ದು ಯಾರು?

ಶಿವಸೇನಾ ಮುಖ್ಯಸ್ಥ ಏಕನಾಥ ಶಿಂಧೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಅಲ್ಲಿಗೆ ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ್ ಶಿಂಧೆ ಮುಂದುವರಿಯುವುದಿಲ್ಲ ಎಂಬುದು ನಿಶ್ಚಯವಾದಂತಾಗಿದೆ. ಆದ್ರೆ ಇದೆಲ್ಲದರ ನಡುವೆ ಇರುವ ಮುಂದಿನ ಮಹಾರಾಷ್ಟ್ರ ಸಿಎಂ ಯಾರು ಎಂಬುದು ಇನ್ನೂ ಕೂಡ ಸಸ್ಪೆನ್ಸ್​ನಲ್ಲಿಯೇ ಇದೆ. ಇಂದು ಮುಂಜಾನೆ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ ಏಕನಾಥ್ ಶಿಂಧೆ ತಮ್ಮ ರಾಜೀನಾಮೆಯನ್ನು ನೀಡುವ ಮೂಲಕ ಸಿಎಂ ಯಾರು ಎಂಬ ರಹಸ್ಯವನ್ನು ಇನ್ನೂ ಜಾರಿಯಲ್ಲಿಟ್ಟಿದ್ದಾರೆ.

Advertisment

ಹೊಸ ಸರ್ಕಾರ ರಚನೆಯಾಗುವವರೆಗೂ ಶಿಂಧೆ ಕೇರ್​​ಟೇಕರ್ ಚೀಫ್ ಮಿನಿಸ್ಟರ್ ಆಗಿಯೇ ಮುಂದುವರಿಯಲಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಪಡೆ 288 ಕ್ಷೇತ್ರಗಳಲ್ಲಿ 233 ಕ್ಷೇತ್ರಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದೆ. ಆದ್ರೆ ಚುನಾವಣೆ ಶುರುವಾಗಿ ಫಲಿತಾಂಶ ಆಚೆ ಬಂದರೂ ಕೂಡ ಈ ಮೈತ್ರಿ ತನ್ನ ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈಗಲೂ ಕೂಡ ಅದೇ ಸಸ್ಪೆನ್ಸ್​ ಮುಂದುವರಿದಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್; ಯಾರಾಗ್ತಾರೆ ‘ಮಹಾ’ ಸಿಎಂ?

publive-image

ಶಿವಸೇನಾ ಪಕ್ಷದಲ್ಲಿ ಶಿಂಧೆಯೇ ಸಿಎಂ ಆಗಿ ಮುಂದುವರಿಯಬೇಕು ಅವರ ಮಾಝೀ ಲಡ್ಕಿ ಬೆಹಿನಾ ಯೋಜನೆಯೇ ಇಡೀ ಮಹಾರಾಷ್ಟ್ರದ ಚುನಾವಣೆಯ ಫಲಿತಾಂಶದ ಮೇಲೆ ಪ್ರಮುಖ ಪಾತ್ರ ಬೀರಿದ್ದು ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಈ ಹಿಂದೆ ಎಂದು ನಡೆಯದಂತಹ ಫಲಿತಾಂಶವನ್ನು ಪಡೆದುಕೊಂಡು ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಹೀಗಾಗಿ ಇದರ ಹಿಂದೆ ದೇವೇಂದ್ರ ಫಡ್ನವೀಸ್ ಶ್ರಮ ದೊಡ್ಡದಿದ್ದು ಅವರೇ ಮತ್ತೆ ಮೂರನೇ ಬಾರಿ ಸಿಎಂ ಆಗಿ ಮುಂದುವರಿಯಲಿ ಎಂದು ಹೇಳಲಾಗುತ್ತಿದೆ. ಬಿಜೆಪಿ 288 ಸ್ಥಾನಗಳಲ್ಲಿ 132 ಸ್ಥಾನಗಳನ್ನು ಏಕಾಂಗಿಯಾಗಿ ಗೆದ್ದು ಮಹಾರಾಷ್ಟ್ರದಲ್ಲಿ ಇತಿಹಾಸ ನಿರ್ಮಿಸಿದೆ. ಇತ್ತ ಶಿಂಧೆಯ ಶಿವಸೇನಾ 57 ಸೀಟ್ ಹಾಗೂ ಎನ್​ಸಿಪಿ 41 ಸೀಟ್​ಗಳನ್ನು ಗೆದ್ದುಕೊಂಡು ಮೈತ್ರಿಪಡೆಯ ಸ್ಥಾನಗಳು 233ಕ್ಕೆ ತಲುಪಿದೆ.

publive-image

ಇದನ್ನೂ ಓದಿ: ಸಿಎಂ ಪಟ್ಟಕ್ಕಾಗಿ ಜಟಾಪಟಿ ಶುರು; ಶಿಂಧೆಗೆ ಮತ್ತೊಮ್ಮೆ ಒಲಿಯುತ್ತಾ ಮುಖ್ಯಮಂತ್ರಿ ಪಟ್ಟ?

Advertisment

ಶಿವಸೇನಾ ಸಂಸದ ಮಹೇಶ್ ಮ್ಹಸ್ಕೆ ರಾಜ್ಯದಲ್ಲಿ ಬಿಹಾರ ಮಾದರಿಯ ಸರ್ಕಾರ ಬರಬೇಕು ಎನ್ನುತ್ತಿದ್ದಾರೆ. ಅಲ್ಲಿ ಹೇಗೆ ಬಿಜೆಪಿ ನಿತೀಶ್​ ಕುಮಾರ್​ಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡಲಾಗಿದೆಯೋ, ಇಲ್ಲಿಯೂ ಕೂಡ ಹಾಗೆ ಸಿಎಂ ಸ್ಥಾನವನ್ನು ಏಕನಾಥ್ ಶಿಂಧೆಗೆ ಬಿಟ್ಟುಕೊಡಬೇಕು. ಅಲ್ಲಿಯೂ ಕೂಡ ನಿತೀಶ್ ಕುಮಾರ್ ಪಕ್ಷವೂ ಕೂಡ ಬಹುಮತವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಇದೇ ವಿಚಾರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬೆಂಬಲಿಗರಿಗೆ ಮನವಿ ಮಾಡಿರುವ ಏಕನಾಥ್ ಶಿಂಧೆ, ನಾನು ಸಿಎಂ ಆಗುವಂತೆ ಕೇಳಿಕೊಂಡು ತಮ್ಮ ಮನೆ ಮುಂದೆ ಸೇರಬೇಡಿ. ನನ್ನ ಮೇಲಿನ ಪ್ರೀತಿಗೆ ಕೆಲವೊಂದಿಷ್ಟು ಜನರು ಒಟ್ಟಾಗಿ ಮುಂಬೈಗೆ ಬಂದು ನನ್ನಲ್ಲಿ ಮುಂದಿನ ಸಿಎಂ ಆಗಬೇಕು ಎಂದು ಮನವಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ನಿಮ್ಮ ಈ ಪ್ರೀತಿಗೆ ನಾನು ಋಣಿ. ಆದರೆ ಈ ರೀತಿಯಾಗಿ ಮನವಿ ಮಾಡಲು ದಯವಿಟ್ಟು ಯಾರು ನನ್ನ ಮನೆಯ ಹತ್ತಿರ ಬರಬೇಡಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment