newsfirstkannada.com

ಅಪ್ಪು ಸಮಾಧಿಗೆ ರಾಖಿ ಇಟ್ಟು ಆರತಿ ಬೆಳಗಿದ ಅಕ್ಕ; ಭಾವುಕರಾದ ಫ್ಯಾನ್ಸ್​​!

Share :

01-09-2023

    ಅಪ್ಪು ಅಂದರೆ ಹಿರಿಯ ಅಕ್ಕ ಲಕ್ಷ್ಮೀಗೂ ಬಲು ಅಚ್ಚುಮೆಚ್ಚು

    ಪುನೀತ್ ರಾಜ್‌ಕುಮಾರ್‌ ಸಮಾಧಿಗೆ ಭೇಟಿ ಕೊಟ್ಟ ಅಕ್ಕ

    ಅಕ್ಕ ತಮ್ಮನಿಗೆ ರಾಖಿ ಕಟ್ಟುತ್ತಿರೋ ವಿಡಿಯೋ ವೈರಲ್​​​​​

ಬೆಂಗಳೂರು: ಅಣ್ಣ-ತಂಗಿಯರ ಈ ಬಂಧ, ಜನುಮ ಜನುಮದ ಅನುಬಂಧ ಎಂಬಂತೆ ಅಣ್ಣ-ತಂಗಿ ಹಾಗೂ ಅಕ್ಕ-ತಮ್ಮನ ಬಾಂಧವ್ಯ ತುಂಬಾ ಪವಿತ್ರವಾದದ್ದು. ಇದು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯದ ಆಳವಾದ ಮಹತ್ವವನ್ನು ಸಾರುತ್ತದೆ. ದೇಶಾದ್ಯಂತ ನಿನ್ನೆ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇದೀಗ ಪ್ರೀತಿಯ ತಮ್ಮನ ಸಮಾಧಿಗೆ ಬಂದು ಅಕ್ಕ ರಾಖಿ ಕಟ್ಟುವ ಮೂಲಕ ತಮ್ಮ ಬಾಂಧವ್ಯದ ಬಗ್ಗೆ ಸಾರಿ ಹೇಳಿದ್ದಾರೆ.

ಇದನ್ನು ಓದಿ: WATCH: 30 ಸಾವಿರ ಅಡಿ ಎತ್ತರದಲ್ಲಿ ರಕ್ಷಾ ಬಂಧನ; ಅಣ್ಣ-ತಂಗಿಯರ ಅಪರೂಪದ ವಿಡಿಯೋ ಇಲ್ಲಿದೆ ನೋಡಿ

ಹೌದು, ರಕ್ಷಾಬಂಧನ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಅಕ್ಕ ಲಕ್ಷ್ಮಿ ಭೇಟಿ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಅಂದರೆ ಹಿರಿಯ ಅಕ್ಕ ಲಕ್ಷ್ಮೀಗೂ ಬಹಳ ಪ್ರೀತಿ. ತಾಯಿಯಂತೆ ಅಪ್ಪುವನ್ನ ಪ್ರೀತಿ ಮಾಡುತ್ತಿದ್ದರು. ಪ್ರತಿ ಬಾರಿಯು ಪ್ರೀತಿಯ ತಮ್ಮನಿಗೆ ಅಕ್ಕ ಲಕ್ಷ್ಮಿ ರಾಖಿಯನ್ನು ಕಟ್ಟುತ್ತಿದ್ದರು.

ಆದರೆ ಅಕಾಲಿಕ ಮರಣದಿಂದ ಆ ಒಂದು ಸುಂದರ ಕ್ಷಣವನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಅಪ್ಪು ಅವರ ಅಕ್ಕ ಲಕ್ಷ್ಮೀ ತಮ್ಮನ ಸಮಾಧಿಗೆ ಹೋಗಿ ರಾಖಿ ಸಮರ್ಪಣೆ ಮಾಡಿದ್ದಾರೆ. ಅಪ್ಪು ಇನ್ನಿಲ್ಲ ಅನ್ನೋ ನೋವು ದೊಡ್ಮನೆ ಫ್ಯಾಮಿಲಿ ಹಾಗೂ ಕೋಟ್ಯಾಂತರ ಅಭಿಮಾನಿಗಳಲ್ಲಿ ಇವತ್ತಿಗೂ ಕಾಡುತ್ತಿದೆ. ಸದ್ಯ ತಮ್ಮನಿಗೆ ರಾಖಿ ಕಟ್ಟುತ್ತಿರೋ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪು ಸಮಾಧಿಗೆ ರಾಖಿ ಇಟ್ಟು ಆರತಿ ಬೆಳಗಿದ ಅಕ್ಕ; ಭಾವುಕರಾದ ಫ್ಯಾನ್ಸ್​​!

https://newsfirstlive.com/wp-content/uploads/2023/09/laxmi-5.jpg

Load More