newsfirstkannada.com

ಮಹಿಳಾ PSI ಪುತ್ರನ ವ್ಹೀಲಿಂಗ್​ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು

Share :

16-09-2023

    ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್​​ಐ ಯಾಸ್ಮಿನ್ ತಾಜ್

    ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಘಟನೆ

    ಕಳೆದ ಕೆಲ ದಿನಗಳ ಹಿಂದೆ ಇದೇ ವಿಚಾರಕ್ಕೆ ಸಿಕ್ಕಿಬಿದ್ದ ಪಿಎಸ್​ಐ ಪುತ್ರ

ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್​ ಪುಂಡಾಟಕ್ಕೆ‌ ಅಮಾಯಕ ಬಲಿಯಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ನಡೆದಿದೆ. ಸೈಯದ್ ಐಮಾನ್ ಹುಚ್ಚಾಟಕ್ಕೆ ಗುರುಸ್ವಾಮಿ(68) ಎಂಬ ವೃದ್ದ ಸಾವನ್ನಪ್ಪಿದ್ದಾನೆ.

ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವ್ಹೀಲಿಂಗ್ ಮಾಡಿಕೊಂಡು ಬಂದ ಸೈಯದ್ ಐಮಾನ್ ಗುರುಸ್ವಾಮಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವೃದ್ಧ ಸಾವನ್ನಪ್ಪಿದರೆ, ಸೈಯದ್​ಗೆ ಸಣ್ಣಪುಟ್ಟ ಗಾಯವಾಗಿದೆ.

ವ್ಹೀಲಿಂಗ್​ ಮಾಡಿ ಪುಂಡಾಟ ಮೆರೆದ ಸೈಯದ್ ಐಮಾನ್ ಉದಯಗಿರಿ ನಿವಾಸಿಯಾಗಿದ್ದು, ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್​​ಐ ಯಾಸ್ಮಿನ್ ತಾಜ್ ಪುತ್ರ. ಕಳೆದ ಕೆಲ ದಿನಗಳ ಹಿಂದೆ ವ್ಹೀಲಿಂಗ್ ವಿಚಾರಕ್ಕೆ ಈತನನ್ನು ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಈ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಇದಷ್ಟೇ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು.

ಸದ್ಯ ಆರೋಪಿ‌ ಸೈಯದ್ ಐಮಾನ್ ಗ್ ಸಣ್ಣಪುಟ್ಟ ಗಾಯವಾಗಿದ್ದು, ಅಪಘಾತಕೊಳಗಾದ ಕುಟುಂಬಸ್ಥರಿಂದಲೇ‌ ರಕ್ಷಣೆ ಮಾಡಿ ಚಿಕಿತ್ಸೆಗೆ ಕರೆತಂದಿದ್ದಾರೆ. ಮತ್ತೊಂದೆಡೆ ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಹಿಳಾ PSI ಪುತ್ರನ ವ್ಹೀಲಿಂಗ್​ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು

https://newsfirstlive.com/wp-content/uploads/2023/09/wheeling-1.jpg

Load More