/newsfirstlive-kannada/media/post_attachments/wp-content/uploads/2023/11/Telangana-Cm-KCR-1.jpg)
ಹೈದರಾಬಾದ್: ಮತದಾನಕ್ಕೆ ಮೂರೇ ದಿನ ಬಾಕಿ ಇರುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹಾಗೂ ಬಿಆರ್‌ಎಸ್ ಪಕ್ಷದ ನಾಯಕರಿಗೆ ಕೇಂದ್ರ ಚುನಾವಣಾ ಆಯೋಗ ಬಿಗ್ ಶಾಕ್ ನೀಡಿದೆ. ಬಿಆರ್‌ಎಸ್ ಪಕ್ಷದ ಟ್ರಂಪ್ ಕಾರ್ಡ್ ಯೋಜನೆಯಾದ ರೈತ ಬಂಧು ಯೋಜನೆಯನ್ನೇ ಮುಂದೂಡುವಂತೆ ತೆಲಂಗಾಣ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಲಾಗಿದೆ.
ತೆಲಂಗಾಣ ಸರ್ಕಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ರೈತ ಬಂಧು ಯೋಜನೆಯನ್ನು ಬಳಸಿಕೊಂಡು ಚುನಾವಣೆ ಗೆಲ್ಲಲು ಮುಂದಾಗಿದೆ ಎಂದು ದೂರು ನೀಡಿತ್ತು. ಕಾಂಗ್ರೆಸ್ ದೂರಿನ ಹಿನ್ನೆಲೆಯಲ್ಲಿ ರೈತ ಬಂಧು ಯೋಜನೆಯನ್ನೇ ಮುಂದೂಡುವಂತೆ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ.
/newsfirstlive-kannada/media/post_attachments/wp-content/uploads/2023/11/Cm-kCR.jpg)
ಏನಿದು ರೈತ ಬಂಧು ಯೋಜನೆ?
ತೆಲಂಗಾಣ ರಾಜ್ಯದ ರೈತರ ಅಕೌಂಟ್‌ಗೆ ನೇರವಾಗಿ ಮಾಸಿಕ 5000 ರೂಪಾಯಿ ಹಣ ವರ್ಗಾವಣೆ ಮಾಡುವ ಯೋಜನೆಯೇ ರೈತ ಬಂಧು ಯೋಜನೆ. ಮತದಾನಕ್ಕೂ ಮುನ್ನ ತೆಲಂಗಾಣದ ಪ್ರತಿಯೊಬ್ಬ ರೈತರ ಅಕೌಂಟ್‌ಗೆ ಹಣ ಹಾಕಲು ಸಿಎಂ ಕೆಸಿಆರ್ ಸರ್ಕಾರ ನಿರ್ಧರಿಸಿತ್ತು. ನಾಳೆಯೇ ರೈತ ಬಂಧು ಯೋಜನೆಯ 5000 ರೂಪಾಯಿ ತೆಲಂಗಾಣದ ಪ್ರತಿಯೊಬ್ಬ ರೈತರ ಅಕೌಂಟ್‌ಗೆ ಜಮೆ ಆಗಬೇಕಿತ್ತು. ಮತದಾನಕ್ಕೆ 2 ದಿನ ಮುಂಚೆಯೇ ಹಣ ವರ್ಗಾವಣೆಗೆ ಆಕ್ಷೇಪಿಸಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಬಿಆರ್‌ಎಸ್ ಪಕ್ಷದ ನಾಯಕರು ಮತದಾನಕ್ಕೂ ಮುನ್ನ ರೈತರ ಅಕೌಂಟ್‌ಗೆ ಹಣ ಹಾಕಿ ಲಾಭ ಪಡೆಯಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹೀಗಾಗಿ ನಾಳೆ ರೈತ ಬಂಧು ಯೋಜನೆಯ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ತಡೆ ಹಿಡಿಯಲಾಗಿದೆ. ಕಾಂಗ್ರೆಸ್ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ರೈತರ ಅಕೌಂಟ್‌ಗೆ ಹಣ ಹಾಕುವುದಕ್ಕೆ ಬ್ರೇಕ್ ಹಾಕಿದೆ.
/newsfirstlive-kannada/media/post_attachments/wp-content/uploads/2023/06/CM-KCR-Rahul.jpg)
ಬಿಆರ್‌ಎಸ್ V/S ಕಾಂಗ್ರೆಸ್ ಫೈಟ್!
ರೈತ ಬಂಧು ಯೋಜನೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸುತ್ತಿದ್ದಂತೆ ತೆಲಂಗಾಣದಲ್ಲಿ ಬಿಆರ್‌ಎಸ್, ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ಜೋರಾಗಿದೆ. ಚುನಾವಣಾ ಆಯೋಗದ ಆದೇಶ ಮರುಪರಿಶೀಲನೆಗೆ ಬಿಆರ್‌ಎಸ್ ಪಕ್ಷ ಪತ್ರ ಬರೆದು ಮನವಿ ಮಾಡಿದೆ.
ಇದು ರೈತರಿಗೆ ಅನುಕೂಲವಾಗುವ ಯೋಜನೆ. ಕಾಂಗ್ರೆಸ್ ಪಕ್ಷ ದೂರು ನೀಡಿ ಯೋಜನೆ ಹಣ ನೀಡದಂತೆ ತಡೆದಿದೆ. ಕಾಂಗ್ರೆಸ್ ಪಕ್ಷ ರೈತ ಬಂಧು ಯೋಜನೆಯಡಿ ಹಣ ನೀಡಲ್ಲ. ಆದರೆ, ಸಿಎಂ ಕೆಸಿಆರ್ ನೀಡುವ ಹಣವನ್ನು ನೀಡದಂತೆ ತಡೆ ಹಿಡಿದಿದೆ. ಕಾಂಗ್ರೆಸ್ ಪಕ್ಷ ಹತಾಶೆಯಿಂದ ರೈತ ಬಂಧು ಯೋಜನೆಯ ಹಣ ನೀಡದಂತೆ ತಡೆದಿದೆ ಎಂದು ತೆಲಂಗಾಣ ಸಚಿವ ಹರೀಶ್ ರಾವ್ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us