newsfirstkannada.com

VIDEO: ವಾಹನ ಸವಾರರೇ ಎಚ್ಚರ.. ಸ್ಟಾರ್ಟ್ ಮಾಡ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್!

Share :

22-10-2023

    ಕೀ ಆನ್ ಮಾಡಿ ಸ್ಟಾರ್ಟ್ ಮಾಡುವಾಗ ಕಾಣಿಸಿಕೊಂಡ ಬೆಂಕಿ

    ಕ್ಷಣಾರ್ಧದಲ್ಲಿ ಧಗಧಗಿಸಿ ಸುಟ್ಟು ಹೋದ ಎಲೆಕ್ಟ್ರಿಕ್‌ ಸ್ಕೂಟರ್ ಬೈಕ್‌

    ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿದ ಶಂಕೆ

ಮಂಡ್ಯ: ಬೈಕ್ ಸ್ಟಾರ್ಟ್ ಮಾಡಿದ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ಎಲೆಕ್ಟ್ರಿಕ್ ವಾಹನ ಧಗಧಗನೇ ಹೊತ್ತಿ ಉರಿದಿರುವ ಘಟನೆ ಮುತ್ತಗೆರೆಯಲ್ಲಿ ನಡೆದಿದೆ. ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಮಂಡ್ಯ ಜಿಲ್ಲೆ ಮುತ್ತೆಗೆರೆಯ ಚಂದ್ರಶೇಖರ್‌ ಎಂಬಾತನಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಕೀ ಆನ್ ಮಾಡಿ ಸ್ಟಾರ್ಟ್ ಮಾಡುವಾಗ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೈಕ್ ಬಿಟ್ಟು ಸವಾರ ಓಡಿ ಹೋಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದೆ. ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಅನಾಹುತ ಜರುಗಿರುವ ಶಂಕೆ ವ್ಯಕ್ತವಾಗಿದೆ.

ಮುತ್ತೆಗೆರೆ ಗ್ರಾಮದಲ್ಲಿ ಚಂದ್ರಶೇಖರ್ ಅವರು ಮನೆಯಿಂದ ಬಸರಾಳು ಗ್ರಾಮಕ್ಕೆ ತೆರಳಲು ಸ್ಕೂಟರ್ ಸ್ಟಾರ್ಟ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ಎಲೆಕ್ಟ್ರಿಕ್ ಬೈಕ್‌ ಹೊತ್ತಿ ಉರಿದಿರೋದನ್ನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಸ್ಕೂಟರ್‌ ಸುಟ್ಟು ಕರಕಲಾಗಿದೆ. ಒಕಿನೊವಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಾಹನ ಸವಾರರೇ ಎಚ್ಚರ.. ಸ್ಟಾರ್ಟ್ ಮಾಡ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್!

https://newsfirstlive.com/wp-content/uploads/2023/10/Electric-Bike-Fire.jpg

Load More