newsfirstkannada.com

×

ಗೃಹಜ್ಯೋತಿ ಕೊಟ್ಟ ಸರ್ಕಾರದಿಂದ ಲೋಡ್ ಶೆಡ್ಡಿಂಗ್ ಭಾಗ್ಯ; ಕೈಕೊಟ್ಟ ಮಳೆ.. ವಿದ್ಯುತ್ ಅಭಾವದಿಂದ ರಗಳೆ!

Share :

Published September 6, 2023 at 6:16am

    ಮಳೆ ಉತ್ತಮವಾಗಿ ಆದ್ರೆ ಜಲವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ

    ಈ ವರ್ಷ ರಾಜ್ಯದಲ್ಲಿರುವ ಜಲಾಶಯಗಳಲ್ಲೇ ನೀರಿನ ಪ್ರಮಾಣ ಭಾರೀ ಕಡಿಮೆ

    ಬಹುತೇಕ ಜಲಾಶಯಗಳಲ್ಲಿ ಸಾಮರ್ಥ್ಯದ ಶೇ.50ರಷ್ಟು ಮಾತ್ರ ನೀರು ಸಂಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಒಂದ್ಕಡೆ ಸರ್ಕಾರ 200 ಉಚಿತ ವಿದ್ಯುತ್ ನೀಡುತ್ತಿದೆ. ಮತ್ತೊಂದೆಡೆ ಉಚಿತ ವಿದ್ಯುತ್​ ಕೊಟ್ಟ ಸರ್ಕಾರವೇ ಜನರನ್ನ ಅಂಧಕಾರದಲ್ಲಿ ಮುಳುಗಿಸಲು ಮುಂದಾಗಿದೆ. ಅನಿಯಮಿತ ಲೋಡ್​ಶೆಡ್ಡಿಂಗ್​​ನಿಂದಾಗಿ ಕರ್ನಾಟಕ ಕತ್ತಲಲ್ಲಿ ಕಳೆಯುವಂತಾಗತೊಡಗಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ತೊಯ್ದೆ ತೊಪ್ಪೆಯಾದ ಕರುನಾಡು ಈ ಬಾರಿ ಮಳೆ ಇಲ್ಲದೇ ವಸುಂಧರೆ ಬರಿದಾಗಿದ್ದಾಳೆ. ಎಲ್ಲರಿಗೂ 200 ಯುನಿಟ್ ಉಚಿತ ನೀಡುತ್ತೇವೆ ಅಂತ ಸಿದ್ದರಾಮಯ್ಯ ಸರ್ಕಾರ ಬೀಗಿತ್ತು. ಆದ್ರೆ ಮನೆ ಮನೆ ಬೆಳಗಬೇಕಿದ್ದ ಗೃಹಜ್ಯೋತಿ ಮೂರೇ ತಿಂಗಳಲ್ಲಿ ಅಂಧಕಾರ ತರಿಸಿದ್ದಾಳೆ. ವಿದ್ಯುತ್ ಅಭಾವ ತೀವ್ರಗೊಂಡಿದೆ. ಕರ್ನಾಟಕಕ್ಕೆ ಕತ್ತಲೆ ಆವರಿಸಲಾರಂಭಿಸಿದೆ.

ಅಘೋಷಿತ ಲೋಡ್ ಶೆಡ್ಡಿಂಗ್.. ಕರುನಾಡಲ್ಲಿ ಕತ್ತಲೆ!
ಕೈಕೊಟ್ಟ ಮಳೆ.. ಎಲ್ಲೆಲ್ಲೂ ಲೋಡ್​ಶೆಡ್ಡಿಂಗ್ ರಗಳೆ!

ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಜೋಡೆತ್ತು ಸರ್ಕಾರ ಭರವಸೆಗಳ ಈಡೇರಿಕೆಗೆ ಒತ್ತಾಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಜಲಾಶಯಗಳು ಖಾಲಿಯಾಗಿವೆ. ಕುಡಿಯುವುದಕ್ಕೆ ನೀರು ಒದಗಿಸೋದೇ ಸರ್ಕಾರಕ್ಕೆ ಸವಾಲಾಗಿದೆ. ಈ ನಡುವೆ ವಿದ್ಯುತ್ ಅಭಾವ ತೀವ್ರಗೊಂಡಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಲೋಡ್​​ ಶೆಡ್ಡಿಂಗ್ ಕಾಮನ್ ಆಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ನಗರ ಪ್ರದೇಶಗಳಲ್ಲೂ ಲೋಡ್​​ಶೆಡ್ಡಿಂಗ್ ಮಾಡೋದು ಗ್ಯಾರಂಟಿ ಆಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ 2-4 ಗಂಟೆಗಳ ಕಾಲ ಕರೆಂಟ್ ತೆಗೆಯಲಾಗ್ತಿದೆ. ಇನ್ನು ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ 1-2 ಗಂಟೆ ಲೋಡ್​ ಶೆಡ್ಡಿಂಗ್ ಮಾಡಲಾಗ್ತಿದೆ. ಕಳೆದೊಂದು ವಾರದಲ್ಲಿ ಬೆಂಗಳೂರಲ್ಲಿ ಪ್ರತಿನಿತ್ಯ 1ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗ್ತಿದೆ. ಕುತೂಹಲ ಎಂಬಂತೆ ಕಳೆದೆರಡು ದಿನಗಳಿಂದ ಬೆಂಗಳೂರಲ್ಲಿ ಯಾವುದೇ ಲೋಡ್​ ಶೆಡ್ಡಿಂಗ್ ಮಾಡಿಲ್ಲ.

ಲೋಡ್​ ಶೆಡ್ಡಿಂಗ್ ಬಗ್ಗೆ ಅಧಿಕೃತ ಘೋಷಣೆ ಸಾಧ್ಯತೆ
ಸದ್ಯ ಲೋಡ್​​ಶೆಡ್ಡಿಂಗ್ ಮಾಡ್ತಿಲ್ಲ ಎಂದ ಇಂಧನ ಸಚಿವ

ಇನ್ನು, ಶಾಖೋತ್ಪನ್ನ ಕೇಂದ್ರಗಳ ಜೊತೆ ಸಚಿವ ಕೆ.ಜೆ. ಜಾರ್ಜ್ ಸರಣಿ ಸಭೆಗಳನ್ನ ನಡೆಸ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂ ಸಭೆ ನಡೆಸಿ ಬಳಿಕ ಲೋಡ್ ಶೆಡ್ಡಿಂಗ್ ಅಧಿಕೃತ ಘೋಷಣೆ ಸಾಧ್ಯತೆ ಇದೆ. ಮಳೆ ಬರಲಿಲ್ಲ ಅಂತ ಸಾಕಷ್ಟು ಕಡೆ ಪವರ್ ಕಟ್ ಮಾಡಲಾಗ್ತಿದೆ ಅನ್ನೋ ಮಾಹಿತಿ ಬಂದಿದೆ. ಆದ್ರೆ ಸದ್ಯ ನಾವು ಲೋಡ್​ ಶೆಡ್ಡಿಂಗ್ ಮಾಡ್ತಿಲ್ಲ. ದುರಸ್ತಿ ಕಾರ್ಯ ಇರೋದ್ರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ ಅಂತ ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಲೋಡ್​ ಶೆಡ್ಡಿಂಗ್ ಮಾಡ್ತಿಲ್ಲ. ಒಂದು ವೇಳೆ ಲೋಡ್​ ಶೆಡ್ಡಿಂಗ್ ಮಾಡೋದಾದ್ರೆ ಘೋಷಣೆ ಮಾಡ್ತೀವಿ ಅಂತ ಸಚಿವರು ಹೇಳಿದ್ದಾರೆ. ಮಳೆ ಬರಲಿ ಅಂತ ಪ್ರಾರ್ಥಿಸಿದ್ದಾರೆ. ಒಟ್ಟಿನಲ್ಲಿ ವಿದ್ಯುತ್ ಸಮಸ್ಯೆ ಇಲ್ಲದೇ ಕರ್ನಾಟಕ ಭಾಗಶಃ ಕತ್ತಲೆಯಲ್ಲಿ ಮುಳುಗಿದೆ. ಮನೆ ಮನೆಯಲ್ಲೂ ಗೃಹಜ್ಯೋತಿ ಬೆಳಗದೇ ಅಂಧಕಾರ ಆವರಿಸಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಜ್ಯೋತಿ ಕೊಟ್ಟ ಸರ್ಕಾರದಿಂದ ಲೋಡ್ ಶೆಡ್ಡಿಂಗ್ ಭಾಗ್ಯ; ಕೈಕೊಟ್ಟ ಮಳೆ.. ವಿದ್ಯುತ್ ಅಭಾವದಿಂದ ರಗಳೆ!

https://newsfirstlive.com/wp-content/uploads/2023/07/siddu-10.jpg

Load More