newsfirstkannada.com

ಭೀಮ ಬದುಕುವುದು ಕಷ್ಟ.. ಶಾರ್ಪ್ ಶೂಟರ್ ವೆಂಕಟೇಶ್ ಹತ್ಯೆ ಬಳಿಕ ಕಾಡಾನೆಯ ನರಳಾಟ

Share :

11-09-2023

    ಗಾಯಗೊಂಡು ನರಳಾಡುತ್ತಿರುವ ಭೀಮನದ್ದು ಅರಣ್ಯ ರೋದನ

    ಚಿಕಿತ್ಸೆ ನೀಡದಿದ್ದರೆ ಭೀಮ ಬದುಕುವುದು ಕಷ್ಟ ಎಂದ ಸ್ಥಳೀಯರು

    ಭೀಮನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಹಾಸನ: ಶಾರ್ಪ್ ಶೂಟರ್ ವೆಂಕಟೇಶ್ ಸಾವಿನ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಆನೆ ಭೀಮ ಚಿಕಿತ್ಸೆ ಸಿಗದೇ ನರಳಾಡುತ್ತಿರೋ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಕಳೆದ ಆಗಸ್ಟ್ 31ರಂದು ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರ ಮೇಲೆ ಆನೆ ದಾಳಿ ನಡೆಸಿತ್ತು. ಈ ವೇಳೆ ಗಾಯಗೊಂಡಿದ್ದ ಶಾರ್ಪ್ ಶೂಟರ್ ವೆಂಕಟೇಶ್​​ ಮೃತಪಟ್ಟಿದ್ದರು.

ಇದನ್ನು ಓದಿ: ಕಾಡಾನೆಗಳ ದಂತ ತಿವಿತಕ್ಕೊಳಗಾದ ಭೀಮ.. ಆರೋಗ್ಯ ಸ್ಥಿತಿ ಗಂಭೀರ

ಶಾರ್ಪ್ ಶೂಟರ್ ವೆಂಕಟೇಶ್ ಸಾವಿನ ಬಳಿಕ ಅರಣ್ಯ ಇಲಾಖೆ ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆಯನ್ನೇ ಕೈ ಬಿಟ್ಟಿದೆ ಅಂತೆ. ಏಕೆಂದರೆ ಭೀಮನಿಗೆ ಆಗಿರುವ ಗಾಯವು ದಿನ ಕಳೆದಂತೆ ಜಾಸ್ತಿಯಾಗುತ್ತಿದ್ದು, ಆನೆ ಭೀಮ ಓಡಾಡಲು ಸಾಧ್ಯವಾಗದೇ ಒಂದೆಡೆಯೇ ನಿಲ್ಲುತ್ತಿದೆ. ಕಾಡಾನೆಯ ಬೆನ್ನಿನ ಹಿಂಭಾಗದಲ್ಲಿ ಗಾಯ ಕೊಳೆಯುತ್ತಿದೆ. ಹೀಗಾಗಿ ಚಿಕಿತ್ಸೆ ನೀಡದಿದ್ದರೆ ಭೀಮ ಬದುಕುವುದು ಕಷ್ಟ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಕುರಿತು ಸ್ಥಳೀಯರು ಭೀಮನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಭೀಮನಿಗೆ ಶೀಘ್ರವೇ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಭೀಮ ಬದುಕುವುದು ಕಷ್ಟ.. ಶಾರ್ಪ್ ಶೂಟರ್ ವೆಂಕಟೇಶ್ ಹತ್ಯೆ ಬಳಿಕ ಕಾಡಾನೆಯ ನರಳಾಟ

https://newsfirstlive.com/wp-content/uploads/2023/09/death-50.jpg

Load More