newsfirstkannada.com

ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಮುದ್ದಾದ ಆನೆಮರಿ; ಸಿಬ್ಬಂದಿಯ ಪ್ಲಾನ್​ಗೆ ನೆಟ್ಟಿಗರು ಫುಲ್​ ಫಿದಾ

Share :

27-08-2023

    ಕುಟುಂಬದ ಜೊತೆ ಬರ್ತ್​ ಡೇ ಆಚರಿಸಿಕೊಂಡ ಓಂ ಗಂಗಾ ಆನೆಮರಿ

    ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಮರಿಯ ವಿಶೇಷ ಹುಟ್ಟುಹಬ್ಬ

    ಓಂ ಗಂಗಾ ಆನೆಮರಿ ಜನ್ಮದಿನಕ್ಕೆ ತರಕಾರಿ ಮತ್ತು ಹಣ್ಣುಗಳ ಕೇಕ್ ತಯಾರು!

ಬೆಂಗಳೂರು: ಸಾಮಾನ್ಯವಾಗಿ ಮಾಲೀಕರು ತಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಇತ್ಯಾದಿಗಳ ಹುಟ್ಟು ಹಬ್ಬ ಆಚರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಆನೆಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದನ್ನು ನೋಡಿದ್ದೀರಾ? ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ವಿಶೇಷ ಹುಟ್ಟುಹಬ್ಬದ ಸಂಭ್ರಮ ನಡೆದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಇರುವ ಸ್ಥಳ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಓಂ ಗಂಗಾ ಆನೆ ಮರಿಯ ಮೊದಲನೇ ವರ್ಷದ ಜನ್ಮ ದಿನವನ್ನ ಕೇಕ್​ ಕಟ್​ ಮಾಡುವ ಮೂಲಕ ಆಚರಣೆ ಮಾಡಲಾಗಿದೆ. ಜೊತೆಗೆ ಪಾರ್ಕಿನ ಆವರಣದಲ್ಲಿ ಆನೆ ಮರಿಗೆ ಇಷ್ಟ ಆಗುವ ತರಕಾರಿ ಹಾಗೂ ಹಣ್ಣುಗಳನ್ನು ಕೇಕ್​ ರೀತಿಯಲ್ಲಿ ಜೋಡಿಸಿ ವಿಭಿನ್ನವಾಗಿ ಜನ್ಮದಿನವನ್ನು ಸಿಬ್ಬಂದಿ ಆಚರಿಸಿ ಸಂಭ್ರಮಿಸಿದರು.

ಸಿಬ್ಬಂದಿ ಆನೆ ಮರಿ ಜನ್ಮದಿನಕ್ಕಾಗಿ ಅನ್ನದ ಪೊಂಗಲ್, ಬೆಲ್ಲ, ತೆಂಗಿನಕಾಯಿ, ಕ್ಯಾರೆಟ್, ಬಾಳೆಹಣ್ಣು, ಕಬ್ಬು ಮತ್ತು ಕಲ್ಲಂಗಡಿಗಳಲ್ಲಿ ವಿಶೇಷವಾಗಿ ಕೇಕ್ ತಯಾರು ಮಾಡಿದ್ದರು. ಕ್ಯಾರೆಟ್, ಕಬ್ಬು, ಕಲ್ಲಂಗಂಡಿಯಲ್ಲೇ ಓಂ ಗಂಗಾ ಎಂದು ಕೇಕ್ ಮುಂದೆ ಬರೆದಿದ್ದರು. ಆನೆ ಮರಿಗೆ ಈ ವಿಶೇಷವಾದ ಕೇಕ್​ ನೀಡುವ ಮೂಲಕ ಸಿಬ್ಬಂದಿಯು ಜನ್ಮದಿನದ ಶುಭಾಶಯ ಕೋರಿದ್ದಾರೆ. ಇನ್ನು ಈ ಬರ್ತ್​ ಡೇ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸಿಬ್ಬಂದಿಯ ಪ್ಲಾನ್​ಗೆ ಫುಲ್​ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಮುದ್ದಾದ ಆನೆಮರಿ; ಸಿಬ್ಬಂದಿಯ ಪ್ಲಾನ್​ಗೆ ನೆಟ್ಟಿಗರು ಫುಲ್​ ಫಿದಾ

https://newsfirstlive.com/wp-content/uploads/2023/08/elephant-birtday_.jpg

Load More