newsfirstkannada.com

Video: ಅಂಗಡಿಗೆ ನುಗ್ಗಿ ಬಾಳೆಗೊನೆ ಕದ್ದ ಕಾಡಾನೆ.. ಯಾರು ಏನೇ ಅಂದ್ರು ಡೋಂಟ್​​​​​ ಕೇರ್​ ಎನ್ನದ ಹೊಟ್ಟೆಬಾಕ!

Share :

04-08-2023

    ಕಗ್ಗತ್ತಲಲ್ಲಿ ಅಂಗಡಿಗೆ ನುಗ್ಗಿದ ಕಳ್ಳ ಕಾಡಾನೆ

    ಅಂಗಡಿ ಬಾಗಿಲು ಮುರಿದು ಬಾಳೆಗೊನೆ ಹೊತ್ತ ಗಜರಾಜ

    ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆಯ ಕಳ್ಳಾಟ

ಚಾಮರಾಜನಗರ: ಕಾಡಾನೆ ನಾಡಿಗೆ ಬರೋದರಲ್ಲಿ ಅಚ್ಚರಿ ಏನಿಲ್ಲ ಬಿಡಿ. ಆದರೆ ನಾಡಿಗೆ ಬಂದ ಕಾಡಾನೆ ದಿನಸಿ ಅಂಗಡಿ ನುಗ್ಗಿದೆ ಅಂದರೆ ಅಚ್ಚರಿ ಅಲ್ಲದೆ ಮತ್ತೇನು. ಕರ್ನಾಟಕ-ತಮಿಳುನಾಡು ಗಡಿಯ ಹಾಸನೂರಿನಲ್ಲಿ ಕಾಡಾನೆಯೊಂದು ಅಂಗಡಿಗೆ ನುಗ್ಗಿದೆ. ವೆಂಕಟೇಶ್ ಎಂಬುವರ ಅಂಗಡಿಗೆ ನುಗ್ಗಿ ಬಾಳೆ ಹಣ್ಣು ತಿಂದಿದೆ.

ಅದೇನು ಹಸಿವೆಯಾಗಿತ್ತೋ ಗೊತ್ತಿಲ್ಲ, ಕಾಡಾನೆ ಅಂಗಡಿಯ ಬಾಗಿಲು ಮುರಿದು ಸೊಂಡಿಲಿನಿಂದ ಬಾಳೆ ಗೊನೆ ಎತ್ತಿಕೊಂಡಿದೆ. ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನು ಕಾಡಾನೆ ಪುಂಡಾಟ ಕಂಡು ಅಲ್ಲಿದ್ದವರು ಎಷ್ಟೇ ಕೂಗಾಡಿದರು ಡೋಂಟ್​ ಕೇರ್​ ಎನ್ನದೆ ಬಾಳೆಗೊಣೆ ಎತ್ತಿಕೊಂಡಿದೆ. ಆಮೇಲೆ ಅಲ್ಲಿದ್ದವರನ್ನ ಕಣ್ಣುಬಿಟ್ಟುಕೊಂಡು ನೋಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಂಗಡಿಗೆ ನುಗ್ಗಿ ಬಾಳೆಗೊನೆ ಕದ್ದ ಕಾಡಾನೆ.. ಯಾರು ಏನೇ ಅಂದ್ರು ಡೋಂಟ್​​​​​ ಕೇರ್​ ಎನ್ನದ ಹೊಟ್ಟೆಬಾಕ!

https://newsfirstlive.com/wp-content/uploads/2023/08/Elephant.jpg

Load More