newsfirstkannada.com

ಅಯ್ಯಯ್ಯೋ..! ಹಾಸನದಲ್ಲಿ ಬೆಚ್ಚಿ ಬೀಳಿಸಿದ ಕಾಡಾನೆಗಳ ಹಿಂಡು.. Video

Share :

14-09-2023

    ರೈತರ ತೋಟದಲ್ಲಿ ಠಿಕಾಣಿ ಹೂಡಿರುವ ಗಜಪಡೆ

    ಸುಮಾರು 10ಕ್ಕೂ ಹೆಚ್ಚು ಕಾಡಾನೆಗಳು ಗುಂಪು ಇದು

    ಮರಿಯಾನೆಗಳೇ ಹೆಚ್ಚಿವೆ, ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹಾಸನ: ಸಕಲೇಶಪುರ ತಾಲೂಕಿನ ಕೀರಿಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಆನೆಗಳ ದಂಡು ಕಂಡ ಸ್ಥಳೀಯ ನಿವಾಸಿಗಳು ಹಾಗೂ ರೈತರು ಕಂಗಾಲ್ ಆಗಿದ್ದಾರೆ.

ಆನೆಗಳ ಗುಂಪಿನಲ್ಲಿ ಮರಿಗಳೇ ಹೆಚ್ಚಾಗಿವೆ. ಕಾಫಿ ತೋಟದಲ್ಲೆಲ್ಲಾ ಓಡಾಡಿ ಗಜಪಡೆ ದಾಂಧಲೆ ನಡೆಸುತ್ತಿವೆ. ಆನೆಗಳ ಉಪಟಳದಿಂದ ಬೆಳೆಗಳು ನಾಶವಾಗಿವೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವುದರಿಂದ ಆತಂಕಗೊಂಡಿರುವ ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಆನೆಗಳಿಂದ ಮುಕ್ತಿ ನೀಡುವಂತೆ ಆಗ್ರಹಿಸಿದ್ದಾರೆ. ಕಾಡಾನೆಗಳ ಓಡಾಡುತ್ತಿರುವ ಎರಡು ವಿಡಿಯೋ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ..! ಹಾಸನದಲ್ಲಿ ಬೆಚ್ಚಿ ಬೀಳಿಸಿದ ಕಾಡಾನೆಗಳ ಹಿಂಡು.. Video

https://newsfirstlive.com/wp-content/uploads/2023/09/elephant-1.jpg

Load More