newsfirstkannada.com

×

VIDEO: ‘Fan of Modi’ ಎಂದ ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್​; ಭಾರತದಲ್ಲಿ ಟೆಸ್ಲಾ ಹೂಡಿಕೆ ಶೀಘ್ರ..!

Share :

Published June 21, 2023 at 9:30am

Update June 21, 2023 at 10:30am

    ಮೋದಿ-ಮಸ್ಕ್​ ಭೇಟಿ, ಭಾರತಕ್ಕೆ ಬರುವ ಬಗ್ಗೆ ಪ್ರಸ್ತಾಪ

    ಮೋದಿ ಭೇಟಿ ಬೆನ್ನಲ್ಲೇ ಮಸ್ಕ್​ ಏನ್ ಹೇಳಿದರು ಗೊತ್ತಾ?

    ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕದಲ್ಲಿ ಗ್ರ್ಯಾಂಡ್​​ ವೆಲ್​ಕಮ್ ಸಿಕ್ಕಿದೆ. ನ್ಯೂಯಾರ್ಕ್​ ತಲುಪುತ್ತಿದ್ದಂತೆಯೇ ಅಲ್ಲಿನ ಅನಿವಾಸಿ ಭಾರತೀಯರು ಮೋದಿಗೆ ಭರ್ಜರಿ ಸ್ವಾಗತ ನೀಡಿದರು. ಈ ಬೆನ್ನಲ್ಲೇ ಮೋದಿ ಹಾಗೂ ಟ್ವಿಟರ್ ಸಿಇಒ ಎಲಾನ್ ಮಸ್ಕ್​ ಭೇಟಿಯಾದರು.

‘ನಾನು ಮೋದಿಯ ಅಭಿಮಾನಿ’

ಮೋದಿ ಭೇಟಿ ಬೆನ್ನಲ್ಲೇ, ಮುಂದಿನ ವರ್ಷ ಭಾರತಕ್ಕೆ ಬರುವ ಬಗ್ಗೆ ಎಲಾನ್ ಮಸ್ಕ್ ಪ್ರಸ್ತಾಪ ಮಾಡಿದ್ದಾರೆ. ಮೋದಿ ಭೇಟಿ ಬಳಿಕ ಮಾತನಾಡಿರುವ ಮಸ್ಕ್​, ನಾನು ಮೋದಿಯ ಅಭಿಮಾನಿ (fan of Modi). ಭಾರತದಲ್ಲಿ ಹೊಸ ಕಂಪನಿಗಳನ್ನ ತೆರೆಯಲು ಮೋದಿ ಉತ್ತೇಜನ ನೀಡುತ್ತಿದ್ದಾರೆ. ನಾವು ಕೂಡ ಭಾರತಕ್ಕೆ ಅವಶ್ಯವಿರುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ವ್ಯಾಪಾರ, ವಾಣಿಜ್ಯ, ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಯುಎಸ್ ಮತ್ತು ಭಾರತದ ಸಂಬಂಧ ಉತ್ತಮವಾಗಿರಲಿ ಎಂಬುದು ನನ್ನ ಆಶಯ ಎಂದರು.

‘ಭಾರತದ ಭವಿಷ್ಯದ ಬಗ್ಗೆ ಭರವಸೆ ಇದೆ’

ನನಗೆ ನಿಜವಾಗಿಯೂ ಭಾರತದ ಭವಿಷ್ಯದ ಬಗ್ಗೆ ಭರವಸೆ ಇದೆ. ಹಾಗೆಯೇ ಅದನ್ನು ನೋಡಲು ಉತ್ಸಾಹುಕನಾಗಿದ್ದೇನೆ. ಪ್ರಪಂಚದ ಬಹುತೇಕ ದೇಶಗಳ ಪೈಕಿ ಭಾರತದ ಮೇಲೆ ನನಗೆ ಹೆಚ್ಚು ಭರವಸೆ ಇದೆ. ಈ ವರ್ಷದಲ್ಲಿಯೇ ಭಾರತದಲ್ಲಿ ಟೆಸ್ಲಾ ಕಂಪನಿ ತೆರೆಯುವ ನಿರ್ಧಾರ ಗಟ್ಟಿಯಾಗಿದೆ. ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಯನ್ನು ಸಹ ಭಾರತದಲ್ಲಿ ಸ್ಥಾಪಿಸುವ ಆಸಕ್ತಿ ನನಗಿದೆ. ಇದರಿಂದ ಭಾರತದ ಹಲವಾರು ಹಳ್ಳಿಗಳಿಗೆ ಪ್ರಯೋಜನ ಆಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ 3 ದಿನ ಅಮೆರಿಕ ಮತ್ತು 2 ದಿನ ಈಜಿಪ್ಟ್‌ ಪ್ರವಾಸ ಕೈಗೊಂಡಿದ್ದಾರೆ. ಇದು ಐತಿಹಾಸಿಕ ಪ್ರವಾಸವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಅಮೆರಿಕ ಸರ್ಕಾರವೇ ಈ ಸಲ ಮೋದಿಗೆ ಆಹ್ವಾನ ನೀಡಿದ್ದು, ಅಮೆರಿಕದ ಆಹ್ವಾನಿತರಾಗಿ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಜತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಿಂದ ಆಹ್ವಾನ ಪಡೆದು ಅಮೆರಿಕಕ್ಕೆ ಭೇಟಿ ನೀಡುತ್ತಿರುವ 3ನೇ ವಿಶ್ವ ನಾಯಕ ಎನ್ನಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಅಮೆರಿಕ ಸಂಸತ್ತನ್ನು ಉದ್ದೇಶಿಸಿ 2ನೇ ಸಲ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘Fan of Modi’ ಎಂದ ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್​; ಭಾರತದಲ್ಲಿ ಟೆಸ್ಲಾ ಹೂಡಿಕೆ ಶೀಘ್ರ..!

https://newsfirstlive.com/wp-content/uploads/2023/06/MODI_MUSK.jpg

Load More