ಬ್ಲೂಮ್‌ಬರ್ಗ್ ಬಿಲಿಯನೇರ್ ಪಟ್ಟಿಯಲ್ಲಿ ಅಗ್ರಸ್ಥಾನ
ನಷ್ಟ ಅನುಭವಿಸಿದರು ಕರಗಿಲ್ಲ ಎಲೋನ್ ಸಂಪತ್ತು
ಫ್ರೆಂಚ್ ಉದ್ಯಮಿಯನ್ನು ಹಿಂದಿಕ್ಕಿದ ಮಸ್ಕ್ ಖಜಾನೆ
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋ ಪಟ್ಟ ಮತ್ತೊಮ್ಮೆ ಎಲೋನ್ ಮಸ್ಕ್ ಅವರ ಪಾಲಾಗಿದೆ. 2022ರಲ್ಲಿ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ಮಸ್ಕ್ ಅವರನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಪ್ಯಾರಿಸ್‌ನಲ್ಲಿ ಅರ್ನಾಲ್ಟ್ ಅವರ ಷೇರುಗಳು ಭಾರೀ ಕುಸಿತ ಕಂಡಿದ್ದರಿಂದ ಎಲೋನ್ ಮಸ್ಕ್ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ 500 ವ್ಯಕ್ತಿಗಳ ಪಟ್ಟಿಯಲ್ಲಿ ಎಲೋನ್ ಮಸ್ಕ್ ಮತ್ತು ಅರ್ನಾಲ್ಟ್ ಇಬ್ಬರೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು. ಪ್ಯಾರಿಸ್ ಷೇರು ವಹಿವಾಟಿನಲ್ಲಿ ಎಲೋನ್ ಮಸ್ಕ್ ಹಾಗೂ ಬರ್ನಾರ್ಡ್ ಅರ್ನಾಲ್ಟ್ ಸಂಸ್ಥೆಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅರ್ನಾಲ್ಟ್ ಅವರ LVMH ಷೇರುಗಳು ಶೇಕಡಾ 2.6ರಷ್ಟು ಕುಸಿದಿದ್ದರಿಂದ ಎಲೋನ್ ಮಸ್ಕ್ ಸಂಪತ್ತಿನ ಮೌಲ್ಯ ಭಾರೀ ಏರಿಕೆಯಾಗಿದೆ.
ಇತ್ತೀಚಿಗೆ ಎಲೋನ್ ಮಸ್ಕ್ ಅವರು ಜಗತ್ತಿನಲ್ಲೇ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಅನ್ನು ಉಡಾವಣೆ ಮಾಡಿದ್ದರು. ಆದರೆ ಆ ರಾಕೆಟ್ ಉಡಾವಣೆ ವಿಫಲವಾಗಿತ್ತು. ಸ್ಟಾರ್‌ಶಿಪ್ ರಾಕೆಟ್‌ಗೆ ಎಲೋನ್ ಮಸ್ಕ್ ಸುಮಾರು 2 ಬಿಲಿಯನ್ ಡಾಲರ್ ಖರ್ಚು ಮಾಡಿದ್ದರು. ಇನ್ನು, ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಅನ್ನು ಖರೀದಿಸಿದ್ದ ಎಲೋನ್ ಮಸ್ಕ್ ಹಲವು ಪ್ರಯೋಗಗಳಿಗೆ ಕೈ ಹಾಕಿದ್ದರು.
ಹಲವು ನಷ್ಟದ ಮಧ್ಯೆಯೂ ಈ ವರ್ಷ ಎಲೋನ್ ಮಸ್ಕ್ ಅವರು 55.3 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಗಳಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಪ್ರಕಾರ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಸಂಪತ್ತಿನ ಮೌಲ್ಯ ಈಗ ಸುಮಾರು 192.3 ಬಿಲಿಯನ್ ಡಾಲರ್ ಆಗಿದೆ. ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು ಸುಮಾರು 186.6 ಬಿಲಿಯನ್ ಡಾಲರ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ