ಭೂಕಂಪ, ಪ್ರವಾಹದಂತಹ ತುರ್ತು ಪರಿಸ್ಥಿತಿಯಲ್ಲಿ ಈ ರೀತಿಯ ಅಲರ್ಟ್
ಎಮರ್ಜೆನ್ಸಿ ಮೆಸೇಜ್‌ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ
ಮಧ್ಯಾಹ್ನವೇ ಹಲವು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಂದ ಸಂದೇಶ
ಈಗಂತೂ ಯಾರ ಬಳಿ ಸ್ಮಾರ್ಟ್ ಫೋನ್ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತೆ. ದೇಶಾದ್ಯಂತ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇವತ್ತು ಒಂದು ಎಮರ್ಜೆನ್ಸಿ ಮೆಸೇಜ್ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ರವಾನೆಯಾಗಿದೆ.
ಇದನ್ನು ಓದಿ: ಬೆಂಗಳೂರಿನ ಹಲವೆಡೆ ಮಳೆ; ವಾಹನ ಸವಾರರ ಪರದಾಟ
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ತುರ್ತು ಮೆಸೇಜ್ನಲ್ಲಿ ಈ ರೀತಿ ಸಂದೇಶ ಕಳುಹಿಸಲಾಗಿದೆ. ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ಈ ಸಂದೇಶವನ್ನು ನಿರ್ಲಕ್ಷಿಸಬಹುದಾಗಿದೆ. ಅಲ್ಲದೆ ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಈ ಮೆಸೇಜ್ ಅನ್ನು ತುರ್ತು ಸಂದರ್ಭದ ಬಳಕೆಗಾಗಿ ಪರೀಕ್ಷೆ ಮಾಡಲಾಗುತ್ತಿದ್ದು ಭೂಕಂಪ, ಪ್ರವಾಹ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ಬಳಸಬಹುದಾಗಿದೆ.
ಎಮರ್ಜೆನ್ಸಿ ಮೆಸೇಜ್ ಅಲರ್ಟ್ ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಂದು ಮಧ್ಯಾಹ್ನ ಹಲವು ದೇಶದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ರೀತಿಯಾ ಮೆಸೇಜ್ ಸೆಂಡ್ ಆಗಿದ್ದು, ಎಮರ್ಜನ್ಸಿ ಅಲರ್ಟ್ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ