newsfirstkannada.com

BREAKING NEWS: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ತುರ್ತು ನೋಟಿಸ್​​

Share :

28-07-2023

    ಗ್ಯಾರಂಟಿ ಆಮೀಷದ ಮೇಲೆ ಚುನಾವಣೆ ಗೆದ್ದ ಆರೋಪ!

    ಸಿಎಂ ಸಿದ್ದರಾಮಯ್ಯ ವಿರುದ್ಧ ಕೋರ್ಟ್​​ಗೆ ಹೋದ ಶಂಕರ್​​

    ಹೈಕೋರ್ಟ್​​ನಿಂದ ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್​

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್​ ತುರ್ತು ನೋಟಿಸ್​ ನೀಡಿದೆ. ರಾಜ್ಯದ ಜನತೆಗೆ ಗ್ಯಾರಂಟಿಗಳ ಆಮೀಷ ನೀಡಿ ವಿಧಾನಸಭಾ ಚುನಾವಣೆ ಗೆದ್ದ ಆರೋಪ ಕೇಸ್​ನಲ್ಲಿ ಹೈಕೋರ್ಟ್​ ಸಿಎಂ ಸಿದ್ದರಾಮಯ್ಯ ಪರ ವಕೀಲರಿಗೆ ತುರ್ತು ನೋಟಿಸ್​​ ಕೊಟ್ಟು ವಿಚಾರಣೆಗೆ ಹಾಜರಾಗಿ ಎಂದಿದೆ.

ಕಳೆದ ಎರಡು ತಿಂಗಳ ಹಿಂದೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಗೆದ್ದು ಬೀಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಈಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್​ ಸರ್ಕಾರ ಒಂದರ ಮೇಲೊಂದರಂತೆ ಭರವಸೆಗಳನ್ನು ಈಡೇರಿಸುತ್ತಾ ಬರುತ್ತಲೇ ಇದೆ.

ಒಂದೆಡೆ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಜಾರಿಗೆ ಮುಂದಾದರೆ, ಇನ್ನೊಂದೆಡೆ ವರುಣಾ ಮೂಲದ ಶಂಕರ್​​​ ಎಂಬುವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಆಮೀಷವೊಡ್ಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಕೇಸ್​​ ವಿಚಾರಣೆ ಮುಂದೂಡಿಕೆ

ಸದ್ಯ ಶಂಕರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​​ ನ್ಯಾ. ಸುನೀಲ್​​ ದತ್​ ಏಕಸದಸ್ಯ ಪೀಠ ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್​ ಕೊಟ್ಟಿದೆ. ಜತೆಗೆ ಸೆಪ್ಟೆಂಬರ್​​ 1ನೇ ತಾರೀಕಿಗೆ ವಿಚಾರಣೆ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING NEWS: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ತುರ್ತು ನೋಟಿಸ್​​

https://newsfirstlive.com/wp-content/uploads/2023/07/Siddaramaiah-Cm-1.webp

Load More