newsfirstkannada.com

ಮೋದಿ ಫ್ರಾನ್ಸ್​ ಭೇಟಿಯ ವಿಶೇಷ ವಿಡಿಯೋ ಹಂಚಿಕೊಂಡ ​ಅಧ್ಯಕ್ಷ; ಇದು ‘ವಿಶ್ವಾಸ ಮತ್ತು ಸ್ನೇಹ’ ಎಂದ ಎಮ್ಯಾನುಯೆಲ್ ಮ್ಯಾಕ್ರನ್

Share :

16-07-2023

    ಫ್ರಾನ್ಸ್​ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ

    ಎಮ್ಯಾನುಯೆಲ್ ಮ್ಯಾಕ್ರನ್​ ಜೊತೆ ದ್ವಿಪಕ್ಷೀಯ ಮಾತುಕತೆ

    ಭಾರತದ ಸ್ನೇಹವನ್ನ ಕೊಂಡಾಡಿದ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್

ಇತ್ತೀಚೆಗೆ ನರೇಂದ್ರ ಮೋದಿ ಫ್ರಾನ್ಸ್​ ದೇಶಕ್ಕೆ ಭೇಟಿ ನೀಡಿದ್ದರು. ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ರಫೆಲ್​ ಯುದ್ಧ ವಿಮಾನ ಮತ್ತು ಯುಪಿಐ ಸೇವೆಯ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಮಾತ್ರವಲ್ಲದೆ, ಫ್ರೆಂಚ್ ಅತ್ಯುನ್ನತ​​ ಗೌರವವಾದ ಲೀಜನ್​ ಆಫ್​ ಆನರ್​ ಗ್ರ್ಯಾಂಡ್​​​ ಕ್ರಾಸ್​​​ ಅನ್ನು ಮೋದಿಗೆ ನೀಡಿದ್ದರು. ಇವರ ಸ್ನೇಹವನ್ನು ಮೋದಿ ಕೊಂಡಾಡಿದ್ದರು. ಆದರೀಗ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ ಮೋದಿ ಭೇಟಿಯ ಸುಂದರ ಕ್ಷಣಗಳನ್ನು ವಿಡಿಯೋ ಸಮೇತ ಟ್ವೀಟ್​​ ಮಾಡಿದ್ದಾರೆ.

ಎಮ್ಯಾನುಯೆಲ್ ಮ್ಯಾಕ್ರನ್​ ಟ್ವೀಟ್​ ಮಾಡಿದ್ದು, ‘‘ಭಾರತ ಜನರಿಗೆ, ವಿಶ್ವಾಸ ಮತ್ತು ಸ್ನೇಹ’’ ಎಂದು ಬರೆದುಕೊಂಡಿದ್ದಾರೆ.

ಫ್ರೆಂಚ್​ ಅಧ್ಯಕ್ಷನ ಟ್ವೀಟ್​ ಕಂಡು ಮೋದಿ ಕೂಡ ಟ್ವೀಟ್​ ಮಾಡಿದ್ದಾರೆ. ಟ್ವಿಟ್ಟರ್​ನಲ್ಲಿ ‘‘ನನ್ನ ಇತ್ತೀಚಿನ ಫ್ರಾನ್ಸ್​ ಭೇಟಿಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನನ್ನ ಸ್ನೇಹಿತ, ಅಧ್ಯಕ್ಷ ಮ್ಯಾಕ್ರನ್​ಗೆ ಧನ್ಯವಾದಗಳು’’ ಎಂದು ಟ್ವೀಟ್​ ಮಾಡಿದ್ದಾರೆ.

“ಭಾರತ ಮತ್ತು ಫ್ರಾನ್ಸ್ – ಸಮಯವನ್ನು ಮೀರಿದ ಬಂಧವಾಗಿದೆ, ನಮ್ಮ ಹಂಚಿಕೆಯ ಮೌಲ್ಯಗಳಲ್ಲಿ ಪ್ರತಿಧ್ವನಿಸುತ್ತದೆ ಮತ್ತು ನಮ್ಮ ಸಾಮೂಹಿಕ ಕನಸುಗಳನ್ನು ಬೆಳಗಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮೂಲಕ ಎಮ್ಯಾನುಯೆಲ್ ಮ್ಯಾಕ್ರನ್​ಗೆ ಧನ್ಯವಾದ ಸಮರ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಫ್ರಾನ್ಸ್​ ಭೇಟಿಯ ವಿಶೇಷ ವಿಡಿಯೋ ಹಂಚಿಕೊಂಡ ​ಅಧ್ಯಕ್ಷ; ಇದು ‘ವಿಶ್ವಾಸ ಮತ್ತು ಸ್ನೇಹ’ ಎಂದ ಎಮ್ಯಾನುಯೆಲ್ ಮ್ಯಾಕ್ರನ್

https://newsfirstlive.com/wp-content/uploads/2023/07/Modi-1-2.jpg

Load More