2 ಕೋಟಿ ಗ್ರಾಹಕರಿಗೆ ಗೃಹಜ್ಯೋತಿ ಲಾಭ
ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಜಾರಿ
ಕೇಂದ್ರದ ಉದ್ದೇಶಪೂರ್ವಕ ಅಸಹಕಾರ ನೀಡಿದೆ
ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಿನ್ನಲೆ ಸಿಎಂ ಸಿದ್ದರಾಮಯ್ಯನವರು ಮಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಭಾಷಣ ಮಾಡಿದ ಅವರು ‘ಈಗ ಜನರ ತಲಾದಾಯ ಏರಿಕೆಯಾಗಿದೆ. ನಾವು ಗ್ಯಾರಂಟಿ ಯೋಜನೆ ರೂಪಿಸಿದ್ದೇವೆ. ಮೊದಲ ಸಂಪುಟದಲ್ಲಿಯೇ ಅನುಮೋದಿಸಿದ್ದೇವೆ. ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣವಾಗಿದೆ. 50-60 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಬಳಿಕ ಗೌರವ ವಂದನೆ ಸ್ವೀಕರಿಸಿದ ಸಿದ್ದರಾಮಯ್ಯನವರು ಭಾಷಣದ ವೇಳೆ, ಮನುಷ್ಯನ ಜೀವಕ್ಕಿಂತಲೂ ಮಿಗಿಲಾದದ್ದು ಸ್ವಾತಂತ್ರ್ಯ. ವಸಾಹತುವಾದದ ವಿರುದ್ಧ ಅನೇಕ ಹಿರಿಯರು ಹೋರಾಟ ಮಾಡಿದ್ದಾರೆ. ಶೇ.10ರಷ್ಟು ಜನರಲ್ಲಿ ಎಲ್ಲಾ ಸಂಪತ್ತು ಸೇರಿದೆ. ಕೆಲವೇ ಕೆಲವು ಜನರಲ್ಲಿ ಬಂಡವಾಳ ಶೇಖರಣೆಯಾಗಿದೆ. ನಾವು ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಜಾರಿಗೊಳಿಸಿದ್ದೇವೆ. ಬ್ರಿಟಿಷರು ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿದ್ದರು. ಗಾಂಧಿ, ಅಂಬೇಡ್ಕರ್ ಚಿಂತನೆಯಿಂದ ಅಭಿವೃದ್ದಿ ಸಾಧ್ಯ. ದೇಶವನ್ನು ಮೇಲೆತ್ತಿದ್ದು ಪಂಡಿತ್ ಜವಹರಲಾಲ್ ನೆಹರೂ ಯೋಜನೆ ಎಂದಿದ್ದಾರೆ.
ನಂತರ ಮಾತನಾಡಿದ ಅವರು, ಶಕ್ತಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಅಂತಾರಾಷ್ಟ್ರೀಯವಾಗಿ ಶಕ್ತಿ ಯೋಜನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 2 ಕೋಟಿ ಗ್ರಾಹಕರಿಗೆ ಗೃಹಜ್ಯೋತಿ ಲಾಭ ಸಿಗುತ್ತಿದೆ. ಬಾಡಿಗೆದಾರರಿಗೆ ಈ ಸೌಲಭ್ಯ ವಿಸ್ತರಿಸಿದ್ದೇವೆ. ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಜಾರಿ. ಕೇಂದ್ರದ ಉದ್ದೇಶಪೂರ್ವಕ ಅಸಹಕಾರ ನೀಡಿದೆ. ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಮಧ್ಯವರ್ತಿಗಳ ನೆರವಿಲ್ಲದೆ ಸೌಲಭ್ಯ ಸಿಗುತ್ತಿದೆ. ಅವಕಾಶ ವಂಚಿತರ ಅಭ್ಯುದಯ ನಮ್ಮ ಆದ್ಯತೆ ನೀಡಲಾಗಿದೆ. ಮಹಿಳೆಯರ, ಕಾರ್ಮಿಕರ ಅಭಿವೃದ್ಧಿತೆ ಆದ್ಯತೆ ಕೊಡಲಾಗಿದೆ. ಅದರ ಜೊತೆಗೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 450 ಕೋಟಿ ರೂಪಾಯಿ ನೀಡಲಾಗಿದೆ. ಅಗತ್ಯವಿರುವವರಿಗೆ ಸೂರು ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಅಗತ್ಯವಿರುವೆಡೆ ಹೊಸ ಬಸ್ ಒದಗಿಸಲು ಸಿದ್ಧ.
ಜಿಲ್ಲಾಸ್ಪತ್ರೆಗಳಲ್ಲಿ MRI, ಸಿಟಿ ಸ್ಕ್ಯಾನ್ ಸಿಗಲಿದೆ. ವಲಸೆ ಕಾರ್ಮಿಕರು, ನಗರದ ಬಡವರಿಗೂ ಸೌಲಭ್ಯ ಸಿಗಲಿದೆ. ಇಂದಿರಾ ಕ್ಯಾಂಟೀನ್ ಪುನರ್ ಆರಂಭಕ್ಕೆ 100 ಕೋಟಿ ಮೀಸಲಿಡಲಾಗಿದೆ ಎಂದು ಮಣಿಕ್ ಷಾ ಮೈದಾನದಲ್ಲಿ ನೆರೆದಿರುವ ಗಣ್ಯರನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯನವರು ಭಾಷಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ