ಖಾಲಿ ಜಾಗದಲ್ಲಿ ಚಿರತೆ ಪತ್ತೆ, ಸೈಟ್ ಮಾಲೀಕರಿಗೆ ತಲೆನೋವು
ಮಾಲೀಕರು ತಮ್ಮ ಆಸ್ತಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದ BBMP
ಇನ್ಮುಂದೆ ಸೈಟ್ ನಿರ್ವಹಣೆ ಮಾಡದೇ ಹಾಗೆ ಬಿಟ್ಟರೆ ದಂಡ..!
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ನಿದ್ದೆಗೆಡಿಸಿದ್ದ ಚಿರತೆ ಕಥೆಯೇನೋ ಅಂತ್ಯವಾಯ್ತು ಆದ್ರೆ ಅದರಿಂದ ಇದೀಗ ಸೈಟ್ ಮಾಲೀಕರಿಗೆ ತಲೆನೋವು ಶುರುವಾಗಿದೆ. 5 ದಿನದ ರಣಬೇಟೆ. ಆಪರೇಷನ್ ಸಕ್ಸಸ್ಸ್. ಚಿರತೆ ಅಂತ್ಯ. ಜನರ ಭಯವೂ ದೂರ. ಆದ್ರೆ ಈ ಮಧ್ಯೆ ಚಿರತೆ ತಂದು ಆಪತ್ತು ಇದೀಗ ಬೆಂಗಳೂರು ಸೈಟ್ ಮಾಲೀಕರ ಮಾತ್ರ ನಿದ್ದೆಗೆಡಿಸಿದೆ.
ಹೌದು, ಇತ್ತೀಚೆಗೆ ನಗರದ ಖಾಲಿ ಜಾಗದಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಸಿಟಿ ಮಂದಿಯ ನಿದ್ದೆಗೆಡಿಸಿತ್ತು. ಗಿಡಿಗಂಟಿ ಬೆಳೆದಿದ್ದ ಪೊದೆಯಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಅರಣ್ಯ ಟೀಂಗೆ ಕಬ್ಬಿಣದ ಕಡಲೆಯಂತಾದಿತ್ತು. ಹೀಗಾಗಿ ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡ ಬಿಬಿಎಂಪಿ ಹೊಸ ರೂಲ್ಸ್ ಜಾರಿ ಮಾಡಿ, ಖಾಲಿ ಸೈಟ್ ಮಾಲೀಕರಿಗೆ ದಂಡದ ಬಿಸಿ ಮುಟ್ಟಿಸಿದೆ. ಖಾಲಿ ನಿವೇಶನದ ಸ್ಥಳಗಳು ಹಾವುಗಳ ವಾಸಸ್ಥಾನವಾಗಿದ್ದು, ನಾಗರಿಕರಿಗೆ, ವಿಶೇಷವಾಗಿ ಸುತ್ತಮುತ್ತ ಆಡುವ ಮಕ್ಕಳಿಗೆ ಅಪಾಯ ಉಂಟು ಮಾಡಲಿದೆ. ಹೀಗಾಗಿ ಇನ್ಮುಂದೆ ನಿಮ್ಮ ಸೈಟ್ ನಿರ್ವಹಣೆ ಮಾಡದೇ ಹಾಗೆ ಬಿಟ್ಟರೆ ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಇದನ್ನು ಓದಿ: ಟೀಂ ಇಂಡಿಯಾವನ್ನು ಪಾಕ್ ಸೆಮಿಫೈನಲ್ನಲ್ಲಿ ಸೋಲಿಸಿದರೆ ಡ್ಯಾನ್ಸ್ ಮಾಡ್ತೇನೆ; ಪಾಕ್ ಮಾಜಿ ಆಟಗಾರನ ಶಾಕಿಂಗ್ ಹೇಳಿಕೆ
ಸೈಟ್ ಮಾಲೀಕರು ತಮ್ಮ ಆಸ್ತಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು BBMP 2018, 2019, 2020, 2022 ರಲ್ಲಿ ಆದೇಶ ಹೊರಡಿಸಿತ್ತು. ಆದ್ರೆ ಆಸ್ತಿ, ಮಾಲೀಕರ ಡೇಟಾ ಕೊರತೆಯಿಂದ ಈ ಆದೇಶ ಜಾರಿ ತರಲು ಪಾಲಿಕೆ ವಿಫಲವಾಗಿತ್ತು. ಹೀಗಾಗಿ ಇದೀಗ ಈ ಬಗ್ಗೆ ಮತ್ತೆ ಕಠಿಣ ಕಾನೂನುಗಳು ಜಾರಿಗೆ ಪಾಲಿಕೆ ಮುಂದಾಗಿದೆ. ಜೊತೆಗೆ ಈ ಸಂಬಂಧ ಪಾಲಿಕೆ ಈಗಾಗಲೇ ಒಂದು ಸುತ್ತಿನ ಸಭೆ ಕೂಡ ನಡೆಸಿದ್ದು, ಶೀಘ್ರದಲ್ಲೇ ಕಟ್ಟುನಿಟ್ಟಾದ ನಿಯಮಗಳೊಂದಿಗೆ ಆದೇಶ ಹೊರಡಿಸಲಿದೆ. ಚಿರತೆ ತಂದು ಆಪತ್ತು ಮತ್ತೆ ಮರುಕಳಿಸದಂದೇ ಎಚ್ಚೆತ್ತ ಬಿಬಿಎಂಪಿ ನಯಾ ರೂಲ್ಸ್ ಜಾರಿ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ