ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮೆಲ್ಲಗೆ ಹೆಚ್ಚಾಗುತ್ತಿರುವ ಉಗ್ರರ ಉಪಟಳ
ಇಂದು ಕೂಡ ಭಯೋತ್ಪಾದಕರ -ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ
ಕಳೆದ ಒಂದು ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ ಹಲವು ಎನ್ಕೌಂಟರ್
ಶ್ರೀನಗರ: ಇಷ್ಟು ದಿನ ಒಂದು ಹಂತಕ್ಕೆ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮತ್ತೆ ಉಗ್ರರ ಉಪಟಳ ಶುರುವಾಗಿದೆ. ಇಂದು ಸೊಪೊರ್ನ ವಾಟರಗ್ರಾಮ್ ಪ್ರದೇಶದಲ್ಲಿ ಭಯೋತ್ಪಾಕದರು ಹಾಗೂ ಭದ್ರತಾ ಪಡೆಯ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿ ಬಳಿಕ ಕಾಲ್ಕಿತ್ತಿರುವ ಉಗ್ರರಿಗಾಗಿ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿದೆ. ಸೇನಾ ಕಾರ್ಯಾಚರಣೆಯ ಬಗ್ಗೆ ಇನ್ನೂ ಸ್ಪಷ್ಟವಾದ ಸುದ್ದಿಗಳು ಬರಬೇಕಿದೆ.
ಮತ್ತೆ ಕದಡಿದ ಶಾಂತವಾಗಿದ್ದ ಕಣಿವೆ.
ಇದನ್ನೂ ಓದಿ: ಮೋದಿಯನ್ನು ಹೊಗಳಿದ್ದೇ ತಡ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ; ಡಿವೋರ್ಸ್ ಕೂಡ ಕೊಟ್ಟ ಪಾಪಿ ಗಂಡ!
370ನೇ ವಿಧಿಯನ್ನು ಜಮ್ಮು ಕಾಶ್ಮೀರದಿಂದ ತೆರವುಗೊಳಿಸಿದ ಬಳಿಕ ಹೆಚ್ಚು ಕಡಿಮೆ ಉಗ್ರರ ಉಪಟಳ ಕಡಿಮೆಯಾಗಿ, ಒಂದು ಹಂತದಲ್ಲಿ ಕಣಿವೆ ರಾಜ್ಯಗಳಲ್ಲಿ ಶಾಂತಿ ನೆಲೆಸಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ನಿರಾತಂಕವಾಗಿ ಪ್ರವಾಸಿಗರು ಕಾಶ್ಮೀರದ ಸೌಂದರ್ಯದ ಸೊಬಗನ್ನು ಅನುಭವಿಸುತ್ತಿದ್ದರು. ಆದ್ರೆ ಕಳೆದ ಒಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಶುರುವಾಗಿದೆ. ಕಳೆದ ವಾರವಷ್ಟೇ ಉದ್ದಂಪುರದಲ್ಲಿ ನಡೆದ ಗುಂಡಿನ ಕಾರ್ಯಾಚರಣೆಯಲ್ಲಿ ಪಾರಾಮಿಲಟರಿಯ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದರು. 187ನೇ ಬ್ಯಾಟಲಿಯನ್ನ ಸಿಆರ್ಪಿಎಫ್ನ ಇನ್ಸ್ಪೆಕ್ಟರ್ ಕುಲದೀಪ್ ಕುಮಾರ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.
ಇದನ್ನೂ ಓದಿ: ತೆಲುಗು ಸ್ಟಾರ್ ವಿರುದ್ಧ ಅಕ್ರಮ ಬಿಲ್ಡಿಂಗ್ ಕಟ್ಟಿದ್ದ ಆರೋಪ; ಅಕ್ಕಿನೇನಿ ನಾಗಾರ್ಜುನ ಕನ್ವೆನ್ಷನ್ ಹಾಲ್ ನೆಲಸಮ
ಕಳೆದ ಆಗಸ್ಟ್ 14 ರಿಂದಲೂ ಕಣಿವೆ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮೆಲ್ಲಗೆ ಹರಡುತ್ತಿದೆ. ದೋಡಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಅಂದು ಸೇನಾಧಿಕಾರಿ ಕ್ಯಾಪ್ಟನ್ ದೀಪಕ್ ಸಿಂಗ್ ಹುತಾತ್ಮರಾಗಿದ್ದರು. ಕಾಶ್ಮೀರದಿಂದ ಜಮ್ಮುವಿಗೆ ಶಿಫ್ಟ್ ಆಗಿದ್ದ ಭಯೋತ್ಪಾದಕರ ಅಡ್ಡಾ ಈಗ ಎರಡು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಮತ್ತೆ ಉಪಟಳ ನೀಡುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೈ ಲೇವಲ್ ಮೀಟಂಗ್ ಮಾಡಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಲೋಕಸಭಾ ಚುನಾವಣೆ ಯಾವುದೇ ತೊಂದರೆಯಿಲ್ಲದ ನಡೆದ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾಸನಭಾ ಚುನಾವಣೆಗೂ ಮುನ್ನವೇ ಮೆಲ್ಲಗೆ ಉಗ್ರರ ಹೆಜ್ಜೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ