newsfirstkannada.com

ವಿದ್ಯುತ್​ ಬಿಲ್​ ಕಟ್ಟಲ್ಲಾ ಎಂದವರಿಗೆ ಶಾಕಿಂಗ್​ ನ್ಯೂಸ್​​; ಪವರ್​ ಕಟ್​ ಪ್ರಯೋಗಕ್ಕೆ ಮುಂದಾಗಿದೆ ಇಂಧನ ಇಲಾಖೆ

Share :

Published June 1, 2023 at 5:25am

Update September 27, 2023 at 10:37pm

    ಗ್ರಾಹಕರೇ, ವಿದ್ಯುತ್​ ಬಿಲ್​ ಕಟ್ಟಲ್ಲ ಅಂದ್ರೆ ಪವರ್ ಕಟ್​ ಪ್ರಯೋಗ

    ಗೃಹಜ್ಯೋತಿ ಯೋಜನೆ ಜಾರಿಗೆ ಬರೋವರೆಗೆ ವಿದ್ಯುತ್​ ಬಿಲ್​ ಕಟ್ಟಿ

    ಹೀಗೆ ಮಾಡಿದ್ರೆ ಲೈಸನ್ಸ್​ ಕೂಡ ರದ್ದು ಮಾಡಲು ಮುಂದಾದ ಇಲಾಖೆ

ಕಟ್ಟಲ್ಲಾ..ಕಟ್ಟಲ್ಲಾ..ಕರೆಟ್​ ಬಿಲ್​ ಕಟ್ಟಲ್ಲಾ ಎಂದವರಿಗೆ ಇಂಧನ ಇಲಾಖೆಯಿಂದ ಬಿಗ್ ಶಾಕ್ ನೀಡಿದೆ. ವಿದ್ಯುತ್ ಬಿಲ್ ಪಾವತಿಸದಿದ್ರೆ ಮುಲಾಜಿಲ್ಲದೇ ಪವರ್ ಕಟ್ ಮಾಡಲು ನಿರ್ಧರಿಸಿದೆ.

ರಾಜ್ಯದ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ಸೂಚನೆ ಹೊರಡಿಸಿದೆ. ಬಿಲ್ ಕಟ್ಟಲ್ಲ ಎಂದು ವಾಗ್ವಾದಕ್ಕಿಳಿದವರಿಗೆ ಪವರ್​ ಕಟ್​ ಮಾಡಿ ಎಂದು ಹೇಳಿದೆ.

ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿಲ್ಲ

ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಚಾರ ಮಾಡಿತ್ತು. ಅದರಲ್ಲಿ 200 ಯುನಿಟ್​ ವಿದ್ಯುತ್​ ಉಚಿತ ಎಂಬುದನ್ನು ಸಾರಿ ಸಾರಿ ಹೇಳಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದಂತೆ ಜನರು ವಿದ್ಯುತ್​ ಬಿಲ್​ ಕಟ್ಟಲು ಹಿಂದೇಟು ಹಾಕಿದ್ದಾರೆ. ಲೈನ್​ ಮ್ಯಾನ್​ಗಳು ಬಿಲ್​ ಕಟ್ಟಿ ಎಂದು ಹೇಳಿದರೆ ಗ್ರಾಹಕರು ಅವರ ಮೇಲೆಯೇ ದರ್ಪ ತೋರುತ್ತಿದ್ದಾರೆ. ಹೀಗಾಗಿ ವಿದ್ಯುತ್​ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಧನ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಂಡು ವಿದ್ಯುತ್​ ಬಿಲ್​ ಕಟ್ಟಲ್ಲ ಎಂದವರಿಗೆ ಪವರ್​ ಕಟ್​ ಪ್ರಯೋಗಿಸಲು ಮುಂದಾಗಿದೆ.

ಎಚ್ಚರ! ಲೈಸೆನ್ಸ್ ರದ್ದಾಗುತ್ತೆ

ಅಧಿಕೃತ ಆದೇಶ ಹೊರಬೀಳುವರೆಗೂ ಬಿಲ್ ಕಟ್ಟಲೇಬೇಕು ಎಂದು ಇಂಧನ ಇಲಾಖೆ ಹೇಳಿದೆ. ಬಿಲ್ ಕಟ್ಟದಿದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡಿದೆ. ಎರಡು ‌ತಿಂಗಳು ಬಾಕಿ ಇರುವ ಮನೆಗಳಲ್ಲಿ ಪವರ್​ ಕಟ್. 3 ತಿಂಗಳು ಬಿಲ್ ಬಾಕಿ ಇದ್ರೆ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ. ಇದರ ನಡುವೆ ರಾಜ್ಯದ ಜನತೆ 200 ಯೂನಿಟ್ ಉಚಿತ ವಿದ್ಯುತ್​ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯುತ್​ ಬಿಲ್​ ಕಟ್ಟಲ್ಲಾ ಎಂದವರಿಗೆ ಶಾಕಿಂಗ್​ ನ್ಯೂಸ್​​; ಪವರ್​ ಕಟ್​ ಪ್ರಯೋಗಕ್ಕೆ ಮುಂದಾಗಿದೆ ಇಂಧನ ಇಲಾಖೆ

https://newsfirstlive.com/wp-content/uploads/2023/06/Power-Cut-Electricity-Bill.jpg

Load More