ಅಗ್ರೆಸ್ಸಿವ್ ಅಪ್ರೋಚ್ ಮೂಲಕ ಹಳೇ ಆಟಕ್ಕೆ ಸಖತ್ ಕಿಕ್ ಕೊಟ್ಟ ಆಂಗ್ಲರು
ಟೆಸ್ಟ್ನಲ್ಲಿ ಭಾರೀ ಬ್ಯಾಟಿಂಗ್, ಒಂದೇ ದಿನಕ್ಕೆ ಮೊದಲ ಇನ್ನಿಂಗ್ಸ್ ಡಿಕ್ಲೇರ್..!
ಹೊಸ ಕೋಚ್, ಇಂಗ್ಲೆಂಡ್ ತಂಡದ ಆಟಗಾರರಲ್ಲಿ ಆಕ್ರಮಣಕಾರಿ ಸ್ವಭಾವ
ಟೆಸ್ಟ್ ಕ್ರಿಕೆಟ್ ಅಂದ್ರೆ ಅಸಡ್ಡೆ. ಟೆಸ್ಟ್ ಕ್ರಿಕೆಟ್ ಅಂದ್ರೆ ಬೋರಿಂಗ್ ಅಂತ ಹೇಳೋರೆ ಹೆಚ್ಚು. ಆದ್ರೀಗ ಇದೇ ಬೋರಿಂಗ್ ಗೇಮ್ನಲ್ಲಿ ಕ್ರಿಕೆಟ್ ಜನಕರು ಹೊಸ ಕಿಚ್ಚು ಹಚ್ಚಿದ್ದಾರೆ. ಟೆಸ್ಟ್ ಚಹರೆ ಬದಲಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ. ಅಷ್ಟಕ್ಕೂ ಇಂಗ್ಲೆಂಡ್ ತಂಡ ಮಾಡಿದ್ದಾದ್ರು ಏನು?.
ಟೆಸ್ಟ್ ಕ್ರಿಕೆಟ್ ಶತಮಾನಗಳ ಹಳೇಯ ಆಟ. 1892 ರಲ್ಲಿ ಜನ್ಮತಾಳಿದ ಟೆಸ್ಟ್ ಹಿಂದಿದ್ದ ಕ್ರೇಜ್ ಅನ್ನ ಈಗ ಉಳಿಸಿಕೊಂಡಿಲ್ಲ. ವರ್ಷಗಳು ಉರುಳಿದಂತೆ ಸೊರಗುತ್ತಿದೆ. ನೋಡುಗರ ಆಸಕ್ತಿಯು ಕಮ್ಮಿ ಆಗ್ತಿದೆ. ಇಂತಹ ಟಫ್ ಟೈಮ್ನಲ್ಲಿ ಆಂಗ್ಲರು ಟೆಸ್ಟ್ ಕ್ರಿಕೆಟ್ಗೆ ಕಿಚ್ಚು ಹಚ್ಚಿದ್ದಾರೆ.
ಆಕ್ರಮಣಕಾರಿ ಆಟ, ಹೊಸ ಮನ್ವಂತರಕ್ಕೆ ನಾಂದಿ..?
ಬದಲಾವಣೆ ಜಗದ ನಿಯಮ. ಅಂತೆಯೇ ಕ್ರಿಕೆಟ್ ಆಟವನ್ನ ಹುಟ್ಟುಹಾಕಿದ ಆಂಗ್ಲರೇ ಈಗ ಟೆಸ್ಟ್ ಕ್ರಿಕೆಟ್ ಅನ್ನ ಬದಲಿಸಲು ಹೊರಟಿದ್ದಾರೆ. ಇಲ್ಲಿ ತನಕ ಟೆಸ್ಟ್ ಅಂದ್ರೆ ಬೋರಿಂಗ್ ಗೇಮ್, ಟೆಸ್ಟ್ ಅಂದ್ರೆ ತಾಳ್ಮೆಯ ಗೇಮ್ ಅನ್ನೋ ಮಾತಿತ್ತು. ಆದ್ರೀಗ ಆಂಗ್ಲರು ಅಗ್ರೆಸ್ಸಿವ್ ಅಪ್ರೋಚ್ ಮೂಲಕ ಶತಮಾನದ ಹಳೇ ಆಟಕ್ಕೆ ಸಖತ್ ಕಿಕ್ ನೀಡ್ತಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸಿರೀಸ್ ಅಂತಹ ಬದಲಾವಣೆಯ ಮನ್ವಂತರಕ್ಕೆ ನಾಂದಿ ಹಾಡಿತಾ ಅನ್ನೋ ಪ್ರಶ್ನೆಯನ್ನ ಹುಟ್ಟು ಹಾಕಿದೆ.
ಝ್ಯಾಕ್ ಕ್ರಾಲಿ ಮೊದಲ ಎಸೆತವೇ ಫೋರ್
ಆಂಗ್ಲರು ಟೆಸ್ಟ್ ಕ್ರಿಕೆಟ್‌ನ ಚಹರೆ ಬದಲಿಸ್ತಿದ್ದಾರೆ ಅನ್ನೋದಕ್ಕೆ ಇದುವೇ ಸಾಕ್ಷಿ. ಪ್ಯಾಡ್ ಕಟ್ಟಿ ಅಂಗಳಕ್ಕಿದ ಝ್ಯಾಕ್ ಕ್ರಾಲಿ, ಪ್ಯಾಟ್ ಕಮಿನ್ಸ್ ಹಾಕಿದ ಮೊದಲ ಎಸೆತವನ್ನ ಬೌಂಡರಿಗಟ್ಟಿ ಎಲ್ಲರನ್ನ ನಿಬ್ಬೆರಗಾಗಿಸಿದ್ರು. ನಿಜಕ್ಕೂ ಇಲ್ಲಿ ಕ್ರಾಲಿ ಡೇರಿಂಗ್ ಮೆಚ್ಚಲೇಬೇಕು.
ಎಲ್ಲ ಬ್ಯಾಟ್ಸ್ಮನ್ಗಳಿಂದ ಅಗ್ರೆಸ್ಸಿವ್ ಅಪ್ರೋಚ್
ದಂಡಂ ದಶಗುಣಂ. ಇದು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಆಟದ ಪಾಲಿಸಿ. ಎಲ್ಲರೂ ಆಕ್ರಮಣಕಾರಿ ಆಟವಾಡಿದ್ರು. ಯಾವೊಬ್ಬನು ಕೂಡ ಎದೆಗುಂದಲಿಲ್ಲ. ದಂಡಂ ದಶಗುಣಂ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ಝ್ಯಾಕ್ ಕ್ರಾಲಿ 73 ಎಸೆಗಳಲ್ಲಿ 61, ಜೋ ರೂಟ್ 152 ಎಸೆತಗಳಲ್ಲಿ 118, ಹ್ಯಾರಿ ಬ್ರೂಕ್ 37 ಎಸೆತಗಳಿಂದ 32 ಹಾಗೂ ಜಾನಿ ಬೇರ್ಸ್ಟೋವ್ 78 ಎಸೆತಗಳಿಂದ 78 ರನ್ ರನ್ ಚಚ್ಚಿ ಆಸಿಸ್ ಬೌಲರ್ಗಳ ಬೆವರಿಳಿಸಿದ್ರು.
ಟೆಸ್ಟ್ ಸ್ಪೆಶಲಿಸ್ಟ್ ರೂಟ್ ರಿಂದ ಸ್ವಿಚ್ ಹಿಟ್ ಸಿಕ್ಸ್
ಜೋ ರೂಟ್ ಹೇಳಿಕೇಳಿ ಫ್ಯೂರ್ ಟೆಸ್ಟ್ ಬ್ಯಾಟ್ಸ್ಮನ್. ವಿಶ್ಚದ ಫ್ಯಾಬ್ -ಫೋರ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಕಲಾತ್ಮಕ ಆಟಕ್ಕೆ ಹೆಸರುವಾಸಿಯಾದ ರೂಟ್ ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಆಗಿ ಬದಲಾಗಿದ್ದಾರೆ. ಸ್ಕಾಟ್ ಬೊಲ್ಯಾಂಡ್ ಹಾಗೂ ಕಮಿನ್ಸ್ ಬೌಲಿಂಗ್ನಲ್ಲಿ ಸ್ವಿಚ್ ಹಿಚ್ ಸಿಕ್ಸರ್ ಸಿಡಿಸಿ ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ರು.
ಒಂದೇ ದಿನ ಮೊದಲ ಇನ್ನಿಂಗ್ಸ್ ಡಿಕ್ಲೇರ್..!
ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ ಇಂಗ್ಲೆಂಡ್ ಅಂತಹ ದುಸ್ಸಾಹಸಕ್ಕೆ ಕೈ ಹಾಕ್ತು. ಹೌದು, ಕೇವಲ 78 ಓವರ್ ಆಡಿದ ಇಂಗ್ಲೆಂಡ್ 8 ವಿಕೆಟ್ಗೆ 393 ರನ್ ಬಾರಿಸಿ ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿ ಅಚ್ಚರಿ ಮೂಡಿಸಿತು.
ಡ್ರಾಗಾಗಿ ಆಡಲ್ಲ, ಗೆಲುವಿಗಾಗಿ ರಿಸ್ಕ್..?
ಬದಲಾದ ಇಂಗ್ಲೆಂಡ್ ತಂಡ ಪಂದ್ಯಗೆಲ್ಲಲೇಕೆಂಬ ಹಠದಿಂದ ಕಣಕ್ಕಿಳಿಯುತ್ತಿದೆ. ಡ್ರಾ ಅನ್ನೋ ಪದವನ್ನೇ ಆಂಗ್ಲರು ಮರೆತಿದ್ದಾರೆ. ಏನಿದ್ರೂ ಗೆಲುವಿನ ಮಂತ್ರ ಜಪ. ಅದಕ್ಕಾಗಿ ಎಂತಹ ರಿಸ್ಕ್ ಬೇಕಾದ್ರು ತೆಗೆದುಕೊಳ್ತಿದೆ. ಅದಕ್ಕೆ ಆಸ್ಟ್ರೇಲಿಯಾ ಎದುರು ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ಬೆಸ್ಟ್ ಎಕ್ಸಾಂಪಲ್.
ಮೆಕಲಮ್ ಕೋಚ್ ಆದ್ಮೇಲೆ ಇಂಗ್ಲೆಂಡ್ ತಂಡ ಫುಲ್ ಚೇಂಜ್
ಕಳೆದ ವರ್ಷ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ತಂಡ ಟೆಸ್ಟ್ ಹೆಡ್ಕೋಚ್ ಆಗಿ ನೇಮಕಗೊಂಡಿದ್ದೇ ಗೊಂಡಿದ್ದು ತಂಡ ಸಂಪೂರ್ಣ ಬದಲಾಗಿದೆ. ಆಟಗಾರರಲ್ಲಿ ಆಕ್ರಮಣಕಾರಿ ಸ್ವಭಾವ ತುಂಬಿದ್ದಾರೆ. ಭೀತಿ ದೂರವಾಗಿಸಿ, ನಿರ್ಭೀತಿ ಮನೋಭಾವ ಮೂಡಿಸಿದ್ದಾರೆ. ಹಾಗಾಗಿನೇ ಇಡೀ ಟೀಮ್ಗೆ ಟೀಮೆ ಆಕ್ರಮಣಕಾರಿ ಆಟದ ವೈಖರಿ ಮೂಲಕ ಟೆಸ್ಟ್ ಕ್ರಿಕೆಟ್‌ನ ಚಹರೆ ಬದಲಿಸಲು ಹೊರಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ