newsfirstkannada.com

ಇವತ್ತಿನಿಂದ ಆ್ಯಷಸ್​​ ಟೆಸ್ಟ್​ ಸರಣಿ ಆರಂಭ.. ಇಂಗ್ಲೆಂಡ್ ಕಟ್ಟಿ ಹಾಕಲು ಆಸೀಸ್​ ಬಿಗ್ ಪ್ಲಾನ್..!

Share :

16-06-2023

    ಗೆಲುವಿನ ಅಲೆಯಲ್ಲಿರುವ ಟೆಸ್ಟ್​ ಚಾಂಪಿಯನ್​ ಆಸೀಸ್​

    5 ಪಂದ್ಯಗಳ ಟೆಸ್ಟ್​ ಸರಣಿಗೆ ಇಂದಿನಿಂದ ಶುಭಾರಂಭ

    ಅಲೆಕ್ಸ್​ ಕ್ಯಾರಿ ಗೆಲುವಿಗೆ ಬ್ರೇಕ್​ ಹಾಕ್ತಾರಾ ಬೆನ್ ಸ್ಟೋಕ್ಸ್?

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಷಸ್ ಟೆಸ್ಟ್​ ಸರಣಿ ಇಂದಿನಿಂದ ಆರಂಭವಾಗಲಿದೆ. ಬರ್ಮಿಂಗ್ಹ್ಯಾಮ್​ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 3;30 ರಿಂದ ಪಂದ್ಯ ಆರಂಭವಾಗಲಿದೆ. ಇಂಗ್ಲೆಂಡ್​ ತಂಡವನ್ನು ಬೆನ್ ಸ್ಟೋಕ್ಸ್​ ಮುಂದುವರೆಸಿದ್ರೆ, ಆಸ್ಟ್ರೇಲಿಯಾ ಟೀಂ ಅಲೆಕ್ಸ್​ ಕ್ಯಾರಿ ಸಾರಥ್ಯದಲ್ಲಿ ಫೀಲ್ಡ್​ಗಿಳಿಯಲಿದೆ.

ತವರಿನಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿ ಗೆಲ್ಲಲ್ಲು ಇಂಗ್ಲೆಂಡ್​ ಕ್ಯಾಪ್ಟನ್​ ಬೆನ್ ಸ್ಟೋಕ್ಸ್​ ನೇತೃತ್ವದ ತಂಡ ಪಣತೊಟ್ಟಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯಕ್ಕೆ ಬರ್ಮಿಂಗ್​​ಹ್ಯಾಮ್ ವೇದಿಕೆಯಾಗಿದ್ದು, ಈಗಾಗಲೇ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​​ ಪ್ರಕಟಿಸಿದೆ.

ಉಭಯ ತಂಡಗಳು ಗೆಲುವಿನ ಶುಭಾರಂಭದ ಕನಸು ಕಾಣುತ್ತಿವೆ. ಆದ್ರೆ, ಈ ಬಲಿಷ್ಠರ ಕಾದಾಟದಲ್ಲಿ ಯಾರು ಗೆಲ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಸರಣಿಯೊಂದಿಗೆ 3ನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಆರಂಭವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇವತ್ತಿನಿಂದ ಆ್ಯಷಸ್​​ ಟೆಸ್ಟ್​ ಸರಣಿ ಆರಂಭ.. ಇಂಗ್ಲೆಂಡ್ ಕಟ್ಟಿ ಹಾಕಲು ಆಸೀಸ್​ ಬಿಗ್ ಪ್ಲಾನ್..!

https://newsfirstlive.com/wp-content/uploads/2023/06/AUS_ENG_TEST_SMITH.jpg

Load More