newsfirstkannada.com

ಆ್ಯಷಸ್​ ಟೆಸ್ಟ್ ಮುಗಿದರೂ ನಿಂತಿಲ್ಲ ಗದ್ದಲ.. ಈ 5 ವಿವಾದಗಳಿಂದಲೇ ಲಾರ್ಡ್ಸ್​ ಅಂಗಳಕ್ಕೆ ಕಪ್ಪು ಚುಕ್ಕೆ!

Share :

04-07-2023

    ಲಾರ್ಡ್ಸ್​ ಇತಿಹಾಸದ ಪುಟಕ್ಕೆ ಕಪ್ಪುಚುಕ್ಕೆಯಾದ ವಿವಾದಗಳು

    ಟೆಸ್ಟ್​ ಮುಗಿದರೂ ವಿವಾದಗಳ ಬಗ್ಗೆ ಚರ್ಚೆ ಮಾತ್ರ ನಿಲ್ಲುತ್ತಿಲ್ಲ

    ಈ ಟೆಸ್ಟ್​ ಸರಣಿಗ್ಯಾಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ?

ಆ್ಯಷಸ್​ ಟೆಸ್ಟ್​ ಸರಣಿಯ 2ನೇ ಪಂದ್ಯ ಮುಗಿದು 1 ದಿನ ಕಳೆದ್ರೂ, ಈ ಪಂದ್ಯದ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಯಾಕಂದ್ರೆ, ಕ್ರಿಕೆಟ್​ ಕಾಶಿ ಎಂದು ಕರೆಸಿಕೊಳ್ಳೋ ಲಾರ್ಡ್ಸ್​​ ಈ ಬಾರಿ ಮೇಲಿಂದ ಮೇಲೆ ಕಾಂಟ್ರವರ್ಸಿಗಳಿಗೆ ಸಾಕ್ಷಿಯಾಯಿತು. ಒಂದಲ್ಲ, ಎರಡಲ್ಲ 5 ವಿವಾದಗಳು ಶ್ರೀಮಂತ ಕ್ರಿಕೆಟ್​ ಪರಂಪರೆಯನ್ನ ಹೊಂದಿರೋ ಲಾರ್ಡ್ಸ್​ ಇತಿಹಾಸದ ಪುಟಕ್ಕೆ ಕಪ್ಪುಚುಕ್ಕೆಯಾಗಿ ಸೇರಿದವು.

ರೋಚಕ ಘಟ್ಟ ತಲುಪಿದ್ದ ಲಾರ್ಡ್ಸ್​​ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿತು. ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್​ ಪಡೆಯನ್ನ ಬಗ್ಗು ಬಡಿದ ಆಸಿಸ್​​, ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನ ಕಾಯ್ದುಕೊಂಡಿದೆ. ಈ ರಿಸಲ್ಟ್​ ಬಂದು 2 ದಿನ ಕಳೆದಿದೆ. ಆದ್ರೆ ಲಾರ್ಡ್ಸ್​​​ನಲ್ಲಾದ ವಿವಾದಗಳ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.

ವಿವಾದ ನಂ 1: ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು

ಪಂದ್ಯದ ಮೊದಲ ದಿನದಾಟದಲ್ಲೇ ಹೈಡ್ರಾಮಾ ನಡೆಯಿತು. ಲಂಡನ್​ನಲ್ಲಿ ಪ್ರತಿಭಟನೆ ನಡೆಸ್ತಾ ಇರೋ ಇಂಧನ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿ ಪಿಚ್​​ ಹಾಳು ಮಾಡಲು ಯತ್ನಿಸಿದ್ರು. ಈ ವೇಳೆ ಇಂಗ್ಲೆಂಡ್​ ಕೀಪರ್​​ ಜಾನಿ ಬೈರ್​ಸ್ಟೋ, ಪ್ರತಿಭಟನಾಕಾರನನ್ನ ಹೊತ್ತೊಕೊಂಡು ಹೋದರು. ಭದ್ರತಾ ಸಿಬ್ಬಂದಿ ಬಂದು ಪಿಚ್​​ ಹಾಳಗದಂತೆ ತಡೆದರು. ಆದ್ರೆ, ಕ್ರಿಕೆಟ್​​ ಕಾಶಿ ಎಂದು ವಿಶೇಷವಾದ ಹಿನ್ನೆಲೆಯಳ್ಳ ಲಾರ್ಡ್ಸ್​ ಅಂಗಳಕ್ಕೆ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿಯಿತು.

ವಿವಾದ ನಂ 2: ಸ್ಟೀವ್​ ಸ್ಮಿತ್​ ಕ್ಯಾಚ್​​​

ಪಂದ್ಯದ 2 ದಿನದಾಟದಲ್ಲಿ ಇಂಗ್ಲೆಂಡ್​​ನ ಜೋ ರೂಟ್​​ ಬ್ಯಾಟ್​​ನಿಂದ ಸಿಡಿದ ಬೌಲರ್​ ಅನ್ನ ಆಸಿಸ್​ನ ಸ್ಟೀವ್​ ಸ್ಮಿತ್ ಅದ್ಭುತವಾಗಿ ಕ್ಯಾಚ್​ ಹಿಡಿದರು. ಇದಕ್ಕೆ ಅಂಪೈರ್​ ಕೂಡ ಔಟ್​ ಎಂದು ತೀರ್ಮಾನ ನೀಡಿದರು. ಆದ್ರೆ ರೀಪ್ಲೇಯಲ್ಲಿ ಬಾಲ್​, ಮೈದಾನಕ್ಕೆ ಸವರಿದ್ದು ಕಂಡು ಬಂತು. ಆ ಬಳಿಕ ಔಟಾ..? ನಾಟೌಟ್​ ಆನ್ನೋ ಚರ್ಚೆ ಜೋರಾಗಿ ನಡೀತು.

ವಿವಾದ ನಂ 3: ಮಿಚೆಲ್​ ಸ್ಟಾರ್ಕ್​ ಕ್ಯಾಚ್​​

ಪಂದ್ಯದ 4ನೇ ದಿನದಾಟದಲ್ಲಿ ಕ್ಯಾಮರೂನ್​ ಗ್ರೀನ್​ ಬೌಲಿಂಗ್​ನಲ್ಲಿ, ಇಂಗ್ಲೆಂಡ್​ನ ಬೆನ್​ಡಕೆಟ್​ ಪೈನ್​ಲೆಗ್​ನಡೆಗೆ ಶಾಟ್​ ಬಾರಿಸಿದ್ರು. ಅದನ್ನ ಫೈನ್​ಲೆಗ್​ನಲ್ಲಿ ಫೀಲ್ಡ್​ ಮಾಡ್ತಿದ್ದ ಮಿಚೆಲ್​ ಸ್ಟಾರ್ಕ್​ ಕ್ಯಾಚ್​ ಹಿಡಿದ್ರು. ಕ್ಯಾಚ್​ ಹಿಡಿದ ವೇಳೆ ಬೌಲ್​ ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿ ಕಂಡಿತು. ಬಳಿಕ ನಾಟೌಟ್​ ಎಂದು ತೀರ್ಪು ನೀಡಲಾಯಿತು. ಆದ್ರೆ, ಸ್ಮಿತ್​ ಕ್ಯಾಚ್​ ಹಿಡಿದಾಗ ನೆಲಕ್ಕೆ ತಾಗಿದ್ರೂ ಔಟ್​ ಕೊಟ್ಟು, ಸ್ಟಾರ್ಕ್​ ಕ್ಯಾಚ್​ ವಿಚಾರದಲ್ಲಿ ನಾಟೌಟ್​​ ಕೊಟ್ಟಿದ್ಯಾಕೆ ಅನ್ನೋದ್ರ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿವೆ.

ವಿವಾದ ನಂ 4: ಬೇರ್​​ ಸ್ಟೋ ಸ್ಟಂಪ್​ಔಟ್​

​​5ನೇ ದಿನದ ಆಟದ ವೇಳೆ ಪಂದ್ಯ ಕ್ರೂಷಿಯಲ್​ ಹಂತ ತಲುಪಿತ್ತು. ಈ ವೇಳೆ ವಿವಾದಾತ್ಮಕ ರನೌಟ್​ಗೆ ಇಂಗ್ಲೆಂಡ್​ನ ಜಾನಿ ಬೇರ್​​ಸ್ಟೋ ಬಲಿಯಾದ್ರು. 52ನೇ ಓವರ್​​​ನಲ್ಲಿ ಕ್ಯಾಮರೂನ್​ ಗ್ರೀನ್​ ಎಸೆತವನ್ನ ಬೇರ್​ ಸ್ಟೋ ಡಾಟ್​ ಮಾಡಿದ್ರು. ಆ ಬಳಿಕ ಬಾಲ್​ ಡೆಡ್​ ಆಯ್ತೆಂದು ತಿಳಿದು ಕ್ರೀಸ್​ ಬಿಟ್ಟು ಮುಂದೆ ಬಂದ್ರು. ಆದ್ರೆ, ಕೀಪರ್​ ಅಲೆಕ್ಸ್​ ಕ್ಯಾರಿ ಸ್ಟಂಪ್​ ಔಟ್​ ಮಾಡಿದ್ರು.

ವಿವಾದ ನಂ 5: MCC ಮೆಂಬರ್ಸ್​ VS ಉಸ್ಮಾನ್​ ಖವಾಜ

ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ಆಗಮಿಸಿದ ಆಸಿಸ್​ ಆಟಗಾರರನ್ನ ಲಾಂಗ್​​​ ರೂಮ್​ನಲ್ಲಿ ನೆರೆದಿದ್ದ ಕೆಲ ಮೆಂಬರ್ಸ್​ ನಿಂದಿಸಿದ್ದಾರೆ. ಈ ವೇಳೆ ಆಸಿಸ್​​ ಬ್ಯಾಟರ್​​ ಉಸ್ಮಾನ್​ ಖವಾಜಾ ತಿರುಗೇಟು ನೀಡಲು ಹೋಗಿದ್ದಾರೆ. ಈ ವೇಳೆ ನೂಕಾಟ ಎಳೆದಾಟ ನಡೆದಿದೆ.

ಹಲವು ವರ್ಷಗಳ ಇತಿಹಾಸವಿರೋ ಲಾರ್ಡ್ಸ್​​ ಮೈದಾನದ ಲಾಂಗ್​​​ ರೂಮ್​ನಲ್ಲಿ ಎಂತದ್ದೇ ಸಿಚ್ಯುವೇಶನ್​ ಇದ್ರೂ ಎದುರಾಳಿಗಳನ್ನ ಮೆಂಬರ್ಸ್​​ ಗೌರವಿಸ್ತಾ ಇದ್ರು. ಇದನ್ನ ಇಡೀ ಕ್ರಿಕೆಟ್​ ಜಗತ್ತು ಕೊಂಡಾಡಿದ್ದೂ ಊಂಟು ಆದ್ರೆ, ಇದೇ ಮೊದಲ ಬಾರಿ ಹೀಗೆ ನೂಕಾಟ ನಡೆದಿದ್ದು. ಇಷ್ಟೇ ಅಲ್ಲ, ಕ್ರಿಕೆಟ್​ ಕಾಶಿ ಲಾರ್ಡ್ಸ್ ಕೂಡ ಒಂದೇ ಪಂದ್ಯದಲ್ಲಿ ಐದೈದು ಕಾಂಟ್ರವರ್ಸಿಗಳಿಗೆ ಸಾಕ್ಷಿಯಾಗಿದ್ದು ಬಹುಶಃ ಇದೇ ಮೊದಲು ಅನ್ನಿಸುತ್ತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆ್ಯಷಸ್​ ಟೆಸ್ಟ್ ಮುಗಿದರೂ ನಿಂತಿಲ್ಲ ಗದ್ದಲ.. ಈ 5 ವಿವಾದಗಳಿಂದಲೇ ಲಾರ್ಡ್ಸ್​ ಅಂಗಳಕ್ಕೆ ಕಪ್ಪು ಚುಕ್ಕೆ!

https://newsfirstlive.com/wp-content/uploads/2023/07/ENG_AUS_ASHES_TEST.jpg

Load More