ಸಚಿವ ಬೈರತಿ ಸುರೇಶ್ ಪುತ್ರನ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ
ಯಲಹಂಕ BJP ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರಿ ಜೊತೆ ವಿವಾಹ
ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಚಿವರ ಪುತ್ರನ ಅದ್ಧೂರಿ ನಿಶ್ಚಿತಾರ್ಥ!
ಬೆಂಗಳೂರು: ರಾಜಕಾರಣದಲ್ಲಿ ಯಾರು ಶತ್ರುಗಳೂ ಅಲ್ಲ. ಮಿತ್ರರೂ ಅಲ್ಲ. ಚುನಾವಣಾ ರಾಜಕೀಯದಲ್ಲಿ ಬದ್ಧ ವೈರಿಗಳಾಗಿರೋರು ಎಲೆಕ್ಷನ್ ಮುಗಿದ ಮೇಲೆ ದೋಸ್ತಿಗಳಾಗೋದು ಹೊಸದೇನೂ ಅಲ್ಲ. ರಾಜಕೀಯದ ಚದುರಂಗದಲ್ಲಿ ಜಿದ್ದಾಜಿದ್ದಿನಿಂದ ಹೋರಾಡುವ ಕಾಂಗ್ರೆಸ್, ಬಿಜೆಪಿ ನಾಯಕರು ಸಂಬಂಧಿಕರಾದ ಹಲವಾರು ಉದಾಹರಣೆಗಳಿವೆ.
ಇದನ್ನೂ ಓದಿ: Bigg Boss Kannada: ಕೊನೆಗೂ ಬಂತು ಬಿಗ್‌ಬಾಸ್ ಕಾರು.. ವಿನ್ನರ್ ಕಾರ್ತಿಕ್ ಮಹೇಶ್ ಬಿಗ್ ಅಪ್ಡೇಟ್!
ಅಂತಹದೇ ನೆಂಟಸ್ಥನಕ್ಕೆ ಇಂದು ಮತ್ತೊಂದು ಕೊಂಡಿ ಬೆಸೆದುಕೊಂಡಿದೆ. ಸಚಿವ ಬೈರತಿ ಸುರೇಶ್ ಪುತ್ರ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರಿಯ ವಿವಾಹ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿದೆ.
ಸಚಿವ ಬೈರತಿ ಸುರೇಶ್ ಹಾಗೂ ಎಸ್.ಆರ್ ವಿಶ್ವನಾಥ್ ಬೀಗರಾಗಿದ್ದು, ಇವರಿಬ್ಬರು ಮಕ್ಕಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಶುಭ ಹಾರೈಸಿದ್ದಾರೆ. ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿಲ್ಲ ಯಾಕೆ? ಇಲ್ಲಿದೆ 8 ಕಾರಣಗಳು!
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಚಿವರ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.
ನಿಶ್ಚಿತಾರ್ಥಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಡಾ.ಎಂ.ಸಿ ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ