/newsfirstlive-kannada/media/post_attachments/wp-content/uploads/2024/09/Dhoni-3.jpg)
ಇಂಗ್ಲೆಂಡ್​ನ ಸ್ಟಾರ್​ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಬೆನ್ನಲ್ಲೇ ಸಿಎಸ್​ಕೆ ತಂಡದ ಅಭಿಮಾನಿಗಳಿಗೂ ತಳಮಳ ಶುರುವಾಗಿದೆ. ಕಾರಣ ಇಷ್ಟೇ 2025ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೊಯಿನ್ ಅಲಿ ಆಡ್ತಾರಾ? ಇಲ್ಲವಾ ಅನ್ನೋದು.
ಮೊಯಿನ್ ಅಲಿ ಹೇಳಿದ್ದೇನು..?
ನನಗೆ 37 ವರ್ಷ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಸರಣಿಗೆ ನಾನು ಆಯ್ಕೆ ಆಗಿಲ್ಲ. ನಾನು ಇಂಗ್ಲೆಂಡ್​ಗಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಈಗ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಸಮಯ. ನಾನು ನಿವೃತ್ತಿ ಪಡೆಯಲು ಇದು ಸರಿಯಾದ ಸಮಯ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಮೊಯಿನ್ ಅಲಿ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿರುವಂತೆ ಮೊಯಿನ್ ಅಲಿ ಮುಂದಿನ ದಿನಗಳಲ್ಲಿ ಕೋಚ್ ಆಗಿ ಕ್ರಿಕೆಟ್​ನಲ್ಲಿ ಮುಂದುವರಿಯಲು ಇಷ್ಟಪಟ್ಟಿದ್ದಾರೆ. ಹೀಗಾಗಿ ಯಾವುದಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಹೋದರೆ ಐಪಿಎಲ್​ಗೆ ಬರೋದು ಡೌಟ್. ಇದು ಸಿಎಸ್​ಕೆ ಅಭಿಮಾನಿಗಳಿಗೆ ಆತಂಕದ ವಿಚಾರ. ಯಾಕೆಂದರೆ ಸಿಎಸ್​ಕೆ ಜೊತೆ ಮೊಯಿನ್ ಅಲಿ ಒಡನಾಟ ಚೆನ್ನಾಗಿದೆ. ತುಂಬಾ ವರ್ಷಗಳಿಂದ ಸಿಎಸ್​ಕೆಯಲ್ಲಿ ಆಡ್ತಿದ್ದಾರೆ. ಈ ಬಾರಿಯ ಐಪಿಎಲ್​ ಆಕ್ಷನ್​ನಲ್ಲೂ ಅವರನ್ನು ಚೆನ್ನೈ ಖರೀದಿ ಮಾಡಬಹುದು ಎನ್ನಲಾಗುತ್ತಿದೆ.
ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮಾತ್ರ ವಿದಾಯ ಹೇಳಿದ್ದಾರೆ. ಅಂದರೆ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಅಲಿ ಆಲ್​ರೌಂಡರ್ ಆಟ ಮುಂದುವರಿಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಬಾರಿಯ ಐಪಿಎಲ್​ನಲ್ಲೂ ಸಿಎಸ್​ಕೆ ಪರ ಫೀಲ್ಡ್​ಗೆ ಇಳಿಯಬಹುದು.
ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ಸಂಗಕ್ಕಾರ್​ಗೆ ಕೋಪ; ಈ ಅವಕಾಶ ಬಳಸಿಕೊಳ್ಳಲು KKR ಕಿಲಾಡಿ ಐಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us