newsfirstkannada.com

ಅಮೆರಿಕಾದ ಬುಲ್ಲಿ ಡಾಗ್‌ಗೆ ಬೆಚ್ಚಿ ಬಿದ್ದ ಇಂಗ್ಲೆಂಡ್‌; ಬ್ಯಾನ್ ಮಾಡಲು ಪ್ರಧಾನಿ ರಿಷಿ ಸುನಕ್‌ ಆದೇಶ; ಏನಾಯ್ತು?

Share :

Published September 16, 2023 at 1:20pm

    ಇಂಗ್ಲೆಂಡ್‌ನ ಬೀದಿಗಳಲ್ಲಿ ಬುಲ್ಲಿ ಡಾಗ್ಸ್ ಕಂಡ್ರೆ ಬೆಚ್ಚಿ ಬಿದ್ದ ಜನ

    ಅಮೆರಿಕದ XL ಬುಲ್ಲಿ ಡಾಗ್‌ಗಳಿಗೆ ಸಿಕ್ಕ ತರಬೇತಿ ಭಯಾನಕ

    ಇಂಗ್ಲೆಂಡ್‌ನಲ್ಲಿ ಇದುವರೆಗೂ 5 ತಳಿಯ ಶ್ವಾನಗಳು ಬ್ಯಾನ್‌

ಅಮೆರಿಕಾದ XL ಬುಲ್ಲಿ ಡಾಗ್ಸ್‌ ಇಂಗ್ಲೆಂಡ್‌ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಬುಲ್ಲಿ ಡಾಗ್‌ ಹಾವಳಿಗೆ ರೋಸಿ ಹೋದ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. ಇಂಗ್ಲೆಂಡ್‌ನಲ್ಲಿ ಅಮೆರಿಕಾದ ಈ ಬುಲ್ಲಿ ಡಾಗ್ಸ್‌ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನಲ್ಲಿ ಬ್ಯಾನ್‌ ಆದ 5ನೇ ಶ್ವಾನದ ತಳಿ ಅಮೆರಿಕಾದ XL ಬುಲ್ಲಿ ಡಾಗ್ಸ್‌ ಆಗಿದೆ.

ಇತ್ತೀಚೆಗೆ ಇಂಗ್ಲೆಂಡ್‌ನ ಕೆಲ ಬೀದಿಗಳಲ್ಲಿ ಬುಲ್ಲಿ ಡಾಗ್ಸ್ ಭಯಾನಕ ದಾಳಿ ಮಾಡಿತ್ತು. ಬುಲ್ಲಿ ಡಾಗ್ಸ್‌ ಅಟ್ಯಾಕ್ ಮಾಡಿದ ವಿಡಿಯೋಗಳಂತೂ ಬೆಚ್ಚಿ ಬೀಳಿಸುವಂತಿತ್ತು. ಕಳೆದ ವಾರ ಬರ್ಮಿಂಗ್ಹ್ಯಾಮ್‌ನಲ್ಲಿ ಇದೇ ನಾಯಿ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಇದಕ್ಕೂ ಮುನ್ನ ಸ್ಟೋನ್ನಲ್ ಬಳಿ ಎರಡು ನಾಯಿಗಳ ಕಚ್ಚಿದ ಗಾಯಗಳಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಬುಲ್ಲಿ ಡಾಗ್‌ ದಾಳಿ ಮಾಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸರಣಿ ದಾಳಿಗಳು ವರದಿಯಾದ ಹಿನ್ನೆಲೆ ಇಂಗ್ಲೆಂಡ್‌ನಲ್ಲಿ ಅಮೆರಿಕಾದ ಬುಲ್ಲಿ ಡಾಗ್‌ಗಳನ್ನು ಬ್ಯಾನ್ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪ್ರಧಾನಿ ರಿಷಿ ಸುನಕ್ ಖುದ್ದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಮೆರಿಕದ XL ಬುಲ್ಲಿ ಡಾಗ್‌ಗಳು ನಮ್ಮ ಸಮುದಾಯಗಳಿಗೆ, ವಿಶೇಷವಾಗಿ ನಮ್ಮ ಮಕ್ಕಳಿಗೆ ಅಪಾಯಕಾರಿಯಾಗಿದೆ. ಈ ನಾಯಿಗಳ ನಡವಳಿಕೆ ಮತ್ತು ಕೆಟ್ಟ ತರಬೇತಿ ಭಯಾನಕವಾಗಿದೆ. ಹೀಗಾಗಿ ಅಮೆರಿಕದ ಎಕ್ಸ್‌ಎಲ್ ಬುಲ್ಲಿ ನಾಯಿಗಳನ್ನು ನಿಷೇಧಿಸಲಾಗುವುದು ಎಂದು ರಿಷಿ ಸುನಕ್ ಘೋಷಿಸಿದ್ದಾರೆ.

ಇದನ್ನೂ  ಓದಿ: ಒಂದು ಇಲಿ ಹಿಡಿಯಲು ₹41 ಸಾವಿರ, 168 ಇಲಿಗಳಿಗೆ ₹69.5 ಲಕ್ಷ; ಲಕ್ನೋ ರೈಲ್ವೇ ಲೆಕ್ಕಾಚಾರ ಕೇಳಿದ್ರೆ ಶಾಕ್ ಆಗ್ತೀರಾ

ಇಂಗ್ಲೆಂಡ್‌ನಲ್ಲಿ ಇದುವರೆಗೂ ಇದೇ ರೀತಿಯ 4 ತಳಿಯ ಶ್ವಾನಗಳನ್ನು ಬ್ಯಾನ್ ಮಾಡಲಾಗಿದೆ. ಪಿಟ್ಬುಲ್ ಟೆರಿಯರ್, ಜಪಾನೀಸ್ ಟೋಸಾ, ಡೋಗೊ ಅರ್ಜೆಂಟಿನೋ ಮತ್ತು ಫಿಲಾ ಬ್ರೆಸಿಲಿರೊ ಬ್ಯಾನ್ ಮಾಡಲಾಗಿತ್ತು. ಇದೀಗ ಅಮೆರಿಕಾದ XL ಬುಲ್ಲಿ ಡಾಗ್‌ಗಳನ್ನು ಬ್ಯಾನ್ ಮಾಡಿ ಕೂಡಲೇ ಜಾರಿಗೆ ತರುವಂತೆ ಆದೇಶಿಸಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಮೆರಿಕಾದ ಬುಲ್ಲಿ ಡಾಗ್‌ಗೆ ಬೆಚ್ಚಿ ಬಿದ್ದ ಇಂಗ್ಲೆಂಡ್‌; ಬ್ಯಾನ್ ಮಾಡಲು ಪ್ರಧಾನಿ ರಿಷಿ ಸುನಕ್‌ ಆದೇಶ; ಏನಾಯ್ತು?

https://newsfirstlive.com/wp-content/uploads/2023/09/UK-ON-American-Bully-Dog.jpg

Load More