ಈ ಚುಚ್ಚುಮದ್ದಿನ ಚಿಕಿತ್ಸೆಯಿಂದ ಬೇಗ ಗುಣಮುಖರಾಗ್ತಾರೆ
MHRAನಿಂದ ಅನುಮೋದನೆ ಪಡೆದ ಚುಚ್ಚುಮದ್ದು ಇದು
ಕ್ಯಾನ್ಸರ್ ಪೀಡಿತ ರೋಗಿಗಳಿಗೆ ತುಂಬಾ ಅನುಕೂಲಕರ
ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಯಾನ್ಸರ್ ರೋಗಿಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಚಿಕಿತ್ಸೆ ನೀಡಬಹುದಾದ ಚುಚ್ಚುಮದ್ದು ಅನ್ನು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಕಂಡು ಹಿಡಿದಿದೆ.
ಸದ್ಯ ಈ ಚುಚ್ಚುಮದ್ದಿಗೆ ಮೆಡಿಸೆನ್ ಆ್ಯಂಡ್ ಹೆಲ್ತ್ಕೇರ್ ಪ್ರಾಡೆಕ್ಟ್ ರೆಗುಲೆಟರಿ ಏಜೆನ್ಸಿ (MHRA) ಅನುಮೋದನೆ ನೀಡಿದೆ. ಇಮ್ಯುನೊಥೆರಪಿಯೊಂದಿಗೆ (immunotherapy) ಚಿಕಿತ್ಸೆ ಪಡೆಯುತ್ತಿದ್ದ ನೂರಾರು ರೋಗಿಗಳು ಟೆಸೆಂಟ್ರಿಕ್ ಹೆಸರಿನ ಅಟೆಜೋಲಿಜುಮಾಬ್ (atezolizumab) ಚುಚ್ಚುಮದ್ದನ್ನು ಚರ್ಮದ ಮೂಲಕ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದು ತುಂಬಾ ಪರಿಣಾಮಕಾರಿಯಾಗಿದ್ದು ರೋಗಿಗಳನ್ನು ಶೀಘ್ರ ಗುಣಮುಖರನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಈ ಚುಚ್ಚುಮದ್ದು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ತುಂಬಾ ಅನುಕೂಲಕರವಾಗಿದ್ದು ಜೊತೆಗೆ ಕಡಿಮೆ ಸಮಯದಲ್ಲಿ ಅಂದರೆ ಕೇವಲ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಆದಷ್ಟು ಬೇಗ ರೋಗಿಗಳು ಗುಣಮುಖರಾಗುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಚುಚ್ಚುಮದ್ದು ನೀಡಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಂಗ್ಲೆಂಡ್‌ನ ಆರೋಗ್ಯ ಸೇವೆಯ ಇಲಾಖೆ ತಿಳಿಸಿದೆ.
ಟೆಸೆಂಟ್ರಿಕ್ ಎಂದೂ ಕರೆಯಲ್ಪಡುವ ಅಟೆಜೋಲಿಜುಮಾಬ್ ಅನ್ನು ಸಾಮಾನ್ಯವಾಗಿ ರೋಗಿಗಳಿಗೆ ಅಭಿದಮನಿ ಮೂಲಕ ನೀಡಲಾಗುತ್ತದೆ. ಅಂದರೆ ಡ್ರಿಪ್ ಮೂಲಕ ನೇರವಾಗಿ ಅವರ ರಕ್ತನಾಳಗಳಿಗೆ ನೀಡಲಾಗುತ್ತದೆ. ಇದು ರಕ್ತನಾಳವನ್ನು ಪ್ರವೇಶಿಸಲು ಸ್ವಲ್ಪ ಕಷ್ಟವಾದಾಗ ಕೆಲವು ರೋಗಿಗಳಲ್ಲಿ ಅರ್ಧಗಂಟೆ ಅಥವಾ 1 ಗಂಟೆ ತೆಗೆದುಕೊಳ್ಳುವ ಅವಕಾಶವಿದೆ. ಟೆಸೆಂಟ್ರಿಕ್ ಹೆಸರಿನ ಅಟೆಜೋಲಿಜುಮಾಬ್ (atezolizumab) ಚುಚ್ಚುಮದ್ದಿನಿಂದ ಕೇವಲ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ